Bigg Boss: ಈ ಬಾರಿ ಬಿಗ್ಬಾಸ್ ಪ್ರವೇಶಿಸುತ್ತಿರುವವರ ಪಟ್ಟಿ ವೈರಲ್, ಅದ್ಭುತವಾಗಿವೆ ಹೆಸರುಗಳು
ಬಿಗ್ ಬಾಸ್ ಸೀಸನ್ 10 ಗೆ ಬರಲಿರುವ ಸ್ಪರ್ದಿಗಳ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ.
Bigg Boss Season 10 Kannada: ಕನ್ನಡಿಗರಿಗಾಗಿ ಟೆಲಿವಿಷನ್ ನಲ್ಲಿ ಸಾಕಷ್ಟು ರಿಯಾಲಿಟಿ ಶೋ ಗಳನ್ನೂ ನೀಡಲಾಗುತ್ತಿದೆ. ಇನ್ನು ರಿಯಾಲಿಟಿ ಶೋ ಗಳನ್ನೂ ಜನರಿಗೆ ಅತಿ ಹೆಚ್ಚು ಜನಪ್ರಿಯವಾಗಿದೆ. ಅದರಲ್ಲೂ ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ನಿರೂಪಣೆಯ ಬಿಗ್ ಬಾಸ್ ಕನ್ನಡ ಅತಿ ಹೆಚ್ಚು ವಿಕ್ಷಕ್ಕರನ್ನು ಪಡೆದಿದೆ.
ಈಗಾಗಲೇ ಬಿಗ್ ಬಾಸ್ 9 ಸೀಸನ್ (Bigg Boss Season 9) ಗಳನ್ನೂ ಮುಗಿಸಿದೆ. ಇನ್ನು ಸೀಸನ್ 9 ರಲ್ಲಿ ಮೊತ್ತ ಮೊದಲ ಬಾರಿಗೆ ಬಿಗ್ ಬಾಸ್ ಓಟಿಟಿ ಪ್ರಾರಂಭಿಸಲಾಗಿತ್ತು. ಓಟಿಟಿಯಲ್ಲಿ ಸ್ಪರ್ಧಿಸಿದ ನಂತರ ಕೆಲವು ಮಾತ್ರ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು.
ನಂತರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಟಾಸ್ಕ್ ಪೂರ್ಣಗೊಳಿಸಿ ಗೆಲವನ್ನು ಸಾಧಿಸಲು ಪ್ರಯತ್ನಿಸಿದ್ದರು. ಇನ್ನು ಬಿಗ್ ಬಾಸ್ ಸೀಸನ್ 9 ರಲ್ಲಿ ರೂಪೇಶ್ ಶೆಟ್ಟಿ ಮೊದಲ ಸ್ಥಾನ ಹಾಗು ರಾಕೇಶ್ ಅಡಿಗ ಎರಡನೇ ಸ್ಥಾನ ಪಡೆದಿದ್ದರು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ದಿಸಿದ ಪ್ರತಿಯೊಬ್ಬರೂ ಕೂಡ ಜನಪ್ರಿಯತೆ ಪಡೆಯುತ್ತಾರೆ. ಇನ್ನು ಸೀಸನ್ 9 ಮುಗಿದ ತಕ್ಷಣ ಕನ್ನಡಿಗರು ಸೀಸನ್ 10 (Bigg Boss Season 10) ರ ನಿರೀಕ್ಷೆಯಲ್ಲಿದ್ದರು.
ಬಿಗ್ ಬಾಸ್ ಸೀಸನ್ 10 ರ ಮನೆಗೆ ಬರಲಿದ್ದಾರೆ ಈ ಸ್ಪರ್ಧಿಗಳು
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಸೀಸನ್ 10 ರ ಸ್ಪರ್ದಿಗಳ ಬಗ್ಗೆ ದೊಡ್ಡ ಮಟ್ಟಿಗೆ ಚರ್ಚೆ ನಡೆಯುತ್ತಿದೆ. ಸಾಕಷ್ಟು ಸೆಲೆಬ್ರೆಟಿಗಳ ಹೆಸರು ಕೇಳಿ ಬರುತ್ತಿದೆ. ಇನ್ನು ನಾಗಿಣಿ 2 , ಪುಟ್ಟ ಗೌರಿ ಮದುವೆ ಖ್ಯಾತಿಯ ನಮೃತಾ ಗೌಡ, ಕಿಚ್ಚ ಸಿನಿಮಾದ ನಾಯಕಿ ರೇಖಾ, ಅಗ್ನಿಸಾಕ್ಷಿ ರಾಜೇಶ್ ದ್ರುವ ಹೆಸರು ಜೋರಾಗಿ ಕೇಳಿ ಬರುತ್ತಿದೆ.
ಕಳೆದ ಎರಡು ಸೀಸನ್ ನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಗಳ ಎಂಟ್ರಿ ಜೋರಾಗಿಯೇ ಇತ್ತು. ಈ ಬಾರಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಭೂಮಿಕಾ ಬಸವರಾಜ್, ವರ್ಷ ಕಾವೇರಿ, ಕಾಫಿ ನಾಡು ಚಂದು ಇವರ ಹೆಸರು ಕೇಳಿಬರುತ್ತಿದೆ. ಇನ್ನು ಬಿಗ್ ಸೀಸನ್ 10 ರಲ್ಲಿ ಯಾವ ಸ್ಪರ್ದಿಗಳು ಬರಲಿದ್ದಾರೆ ಎನ್ನುದನ್ನು ಕಾದು ನೋಡಬೇಕಿದೆ.
ಬಿಗ್ ಬಾಸ್ ಓಟಿಟಿ ಕ್ಯಾನ್ಸಲ್
ಇನ್ನು ಕಳೆದ ಸೀಸನ್ 9 ರಲ್ಲಿ ಓಟಿಟಿ ಮೂಲಕ ಸ್ಪರ್ಧಿಗಳು ಪರಿಚಯವಾಗಿದ್ದರು. ಮೊದಲು ಮೊಬೈಲ್ ಗಳಲ್ಲಿ ಕಾಣಿಸಿಕೊಂಡ ಬಿಗ್ ಬೋಸ್ ಸ್ಪರ್ಧಿಗಳು ಅಲ್ಲಿನ ಆಯ್ಕೆಯಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ ಈ ಬಾರಿ ವಾಹಿನಿ ಓಟಿಟಿ ಕಾನ್ಸೆಪ್ಟ್ ಅನ್ನು ಕೈಬಿಟ್ಟಿದೆ ಎನ್ನಲಾಗುತ್ತಿದೆ.
ನೇರವಾಗಿ ಸ್ಪರ್ಧಿಗಳು ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಇನ್ನು ಬಿಗ್ ಬಾಸ್ ಸೀಸನ್ 10 ರ ತೆರೆಮರೆಯ ತಯಾರಿ ಭರ್ಜರಿಯಾಗಿಯೇ ನಡೆಯುತ್ತಿದೆ. ಸದ್ಯದಲ್ಲೇ ಬಿಗ್ ಬೋಸ್ ಸೀಸನ್ 10 ರ ಪ್ರೊಮೊ ರಿಲೀಸ್ ಆಗುವ ಸಾಧ್ಯತೆ ಇದೆ.