Bigg Boss: ಬಿಗ್ ಬಾಸ್ ಸೀಸನ್ 10 ನಲ್ಲಿ ದೊಡ್ಡ ಬದಲಾವಣೆ, ಇಂತಹ ಸ್ಪರ್ಧಿಗಳು ಮಾತ್ರ ಮನೆಗೆ ಬರಲಿದ್ದಾರೆ.
ಬಿಗ್ ಬಾಸ್ ಸೀಸನ್ 10 ರಲ್ಲಿ ಮಹತ್ತರ ಬದಲಾವಣೆ ಆಗುವ ಬಗ್ಗೆ ಮಾಹಿತಿ ಲಭಿಸಿದೆ.
Bigg Boss Season 10 Latest Update: ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲಿ ಮೂಡಿಬರುವ ಬಿಗ್ ಬಾಸ್ ಕನ್ನಡ ಸೀಸನ್ (Bigg Boss Kannada) ರಾಜ್ಯದಾದ್ಯಂತ ಹೆಚ್ಚಿನ ಜನಪ್ರಿಯತೆ ಪಡೆದಿದೆ.
ಒಂದೊಂದು ಸೀಸನ್ ಮುಗಿಯುತ್ತಿದ್ದಂತೆ ಮತ್ತೆ ಹೊಸ ಸೀಸನ್ ಗಾಗಿ ಬಿಗ್ ಬಾಸ್ ಅಭಿಮಾನಿಗಳು ಕಾಯುತ್ತಿರುತ್ತಾರೆ. ಬಿಗ್ ಬಾಸ್ ಈಗಾಗಲೇ 9 ಸೀಸನ್ ಗಳನ್ನೂ ಪೂರ್ಣಗೊಳಿಸಿದೆ. ಇದೀಗ ಸೀಸನ್ 10 ಬಗ್ಗೆ ಬಿಗ್ ಬಾಸ್ ಪ್ರಿಯರಿಗೆ ಸಿಹಿ ಸುದ್ದಿ ಲಭಿಸಿದೆ. ಸದ್ಯದಲ್ಲೇ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Season 10) ಕನ್ನಡಿಗರ ಮುಂದೆ ಬರಲಿದೆ.
ಸದ್ಯದಲ್ಲೇ ಎಲ್ಲರ ಮನೆಯಲ್ಲೂ ಬರಲಿದೆ ಬಿಗ್ ಬಾಸ್ ಸೀಸನ್ 10
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 9 ಕಳೆದ ಡಿಸೇಂಬರ್ ಅಂತ್ಯದಲ್ಲಿ ಮುಕ್ತಾಯ ಕಂಡಿತ್ತು. ಇನ್ನು ಸೀಸನ್ 9 ಮುಗಿದು ಬರೋಬ್ಬರಿ 8 ತಿಂಗಳು ಕಳೆಯುತ್ತಿದೆ. ಹೊಸ ಸೀಸನ್ ಬರುವಿಕೆಯಲ್ಲಿ ಕನ್ನಡಿಗರು ಕಾಯುತ್ತಿದ್ದಾರೆ. ತೆರೆಮರೆಯಲ್ಲಿ ಸೀಸನ್ 10 ರ ತಯಾರಿ ನಡೆಯುತ್ತಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಗೆ ಬರುವ ಕೆಲ ಸ್ಪರ್ಧಿಗಳ ಬಗ್ಗೆ ಬಹುದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಬಿಗ್ ಬಾಸ್ ಸೀಸನ್ 10 ಗೆ ಈ ಸ್ಪರ್ದಿಗಳ ಎಂಟ್ರಿ ಸಾಧ್ಯತೆ
ಇನ್ನು ನಾಗಿಣಿ 2 , ಪುಟ್ಟ ಗೌರಿ ಮದುವೆ ಖ್ಯಾತಿಯ ನಮೃತಾ ಗೌಡ, ಕಿಚ್ಚ ಸಿನಿಮಾದ ನಾಯಕಿ ರೇಖಾ, ಅಗ್ನಿಸಾಕ್ಷಿ ರಾಜೇಶ್ ದ್ರುವ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಕಳೆದ ಎರಡು ಸೀಸನ್ ನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಗಳ ಎಂಟ್ರಿ ಜೋರಾಗಿಯೇ ಇತ್ತು. ಈ ಬಾರಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಭೂಮಿಕಾ ಬಸವರಾಜ್, ವರ್ಷ ಕಾವೇರಿ, ಕಾಫಿ ನಾಡು ಚಂದು ಇವರ ಹೆಸರು ಕೇಳಿಬರುತ್ತಿದೆ.
ಇನ್ನು ಬಿಗ್ ಸೀಸನ್ 10 ರಲ್ಲಿ ಈ ಸ್ಪರ್ಧಿಗಳು ಇದ್ದಾರಾ ಇಲ್ಲವ ಎನ್ನುವುದನ್ನು ಸೀಸನ್ ಅನೌನ್ಸ್ಮೆಂಟ್ ಆಗುವ ವರೆಗೂ ಕಾದು ನೋಡಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಸ್ಪರ್ದಿಗಳ ಬಗ್ಗೆ ಕುತೂಹಲ ಇರುವ ಸಂದರ್ಭದಲ್ಲಿ ಇದೀಗ ಬಿಗ್ ಬಾಸ್ ಸೀಸನ್ 10 ರಲ್ಲಿ ಹೊಸ ಟ್ವಿಸ್ಟ್ ಲಭಿಸಿದೆ. ಬಿಗ್ ಬಾಸ್ ಸೀಸನ್ 10 ರಲ್ಲಿ ಮಹತ್ತರ ಬದಲಾವಣೆ ಆಗುವ ಬಗ್ಗೆ ಮಾಹಿತಿ ಲಭಿಸಿದೆ.
ಬಿಗ್ ಬಾಸ್ ಸೀಸನ್ 10 ರಲ್ಲಿ ಬಿಗ್ ಚೇಂಜಸ್
ಇನ್ನು ಕಳೆದ ಸೀಸನ್ 9 ರಲ್ಲಿ ಓಟಿಟಿ ಮೂಲಕ ಸ್ಪರ್ಧಿಗಳು ಪರಿಚಯವಾಗಿದ್ದರು. ಮೊದಲು ಮೊಬೈಲ್ ಗಳಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು ಅಲ್ಲಿನ ಆಯ್ಕೆಯಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ ಓಟಿಟಿ ಬರೋಬ್ಬರಿ 45 ದಿನಗಳು ನೆರವೇರಿತ್ತು. 45 ದಿನಗಳ ಬಳಿಕ ಆಯ್ಕೆಗೊಂಡ ಸ್ಪರ್ದಿಗಳು ಬಿಗ್ ಬಾಸ್ ಟಿವಿ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ ಈ ಬಾರಿ ವಾಹಿನಿ ಓಟಿಟಿ ಕಾನ್ಸೆಪ್ಟ್ ಅನ್ನು ಕೈಬಿಟ್ಟಿದೆ ಎನ್ನಲಾಗುತ್ತಿದೆ. ನೇರವಾಗಿ ಸ್ಪರ್ಧಿಗಳು ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಸದ್ಯದಲ್ಲೇ ಬಿಗ್ ಬೋಸ್ ಸೀಸನ್ 10 ರ ಪ್ರೊಮೊ ರಿಲೀಸ್ ಆಗುವ ಸಾಧ್ಯತೆ ಇದೆ. ಇನ್ನು ಕಿಚ್ಚನ ಚಿತ್ರೀಕರಣದ ಶೆಡ್ಯೂಲ್ ಮುಗಿದ ಬಳಿಕ ಬಿಗ್ ಬಾಸ್ ಬಗ್ಗೆ ಹೆಚ್ಚಿನ ಅಪ್ಡೇಟ್ ಸಿಗಲಿದೆ. ಇನ್ನು ಅಕ್ಟೊಬರ್ ನಲ್ಲಿ ಕಿಚ್ಚನ ಖಡಕ್ ದ್ವನಿಯ ನೀರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 10 ಅನ್ನು ವೀಕ್ಷಿಸಬಹುದುದಾಗಿದೆ.