Shine Shetty Restaurant: ಹೋಟೆಲ್ ವಿಡಿಯೋ ಶೇರ್ ಮಾಡಿದ ಶೈನ್ ಶೆಟ್ಟಿ, ಅಪ್ಪು ನನಗೆ ಸ್ಫೂರ್ತಿ ಅಂದ ಶೈನ್ ಶೆಟ್ಟಿ.

Shine Shetty Galli Kitchen Restaurant: ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ (Bigg Boss Season 7 Winner Shine Shetty) ಇದೀಗ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಸೀಸನ್ 7 ರಲ್ಲಿ ವಿನ್ ಆಗುವ ಮೂಲಕ ನಟ ಶೈನ್ ಶೆಟ್ಟಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ನಂತರ ಶೈನ್ ಶೆಟ್ಟಿ ಅವರಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಬಂದಿದೆ. ಹಲವು ಸಿನಿಮಾದಲ್ಲಿ ಶೈನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದೀಗ ಶೈನ್ ಶೆಟ್ಟಿ ಅವರ ಗಲ್ಲಿ ಕಿಚನ್ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ.

Shine Shetty Galli Kitchen Restaurant
Image Source: India Today

ಗಲ್ಲಿ ಕಿಚನ್ ಬಗ್ಗೆ ಪೋಸ್ಟ್ ಹಾಕಿಕೊಂಡ ಶೈನ್ ಶೆಟ್ಟಿ
2019 ರಲ್ಲಿ ಸಣ್ಣದೊಂದು ಗಾಡಿಯಲ್ಲಿ ನನ್ನನ್ನು ಸೇರಿ ಇಬ್ಬರೇ ಕೆಲಸಗಾರರಿಂದ ಬನಶಂಕರಿ 2 ನೇ ಹಂತದಲ್ಲಿ ಯಾವುದೇ ಮುಂದಾಲೋಚನೆಗಳಿಲ್ಲದೆ ಶುರುವಾದ ನನ್ನ ಈ ಗಲ್ಲಿ ಕಿಚನ್ ಪಯಣ ಶುರುವಾಯಿತು ಎಂದು ಶೈನ್ ಶೆಟ್ಟಿ ಪೋಸ್ಟ್ ಮಾಡಿಕೊಂಡಿದ್ದಾರೆ.

Shine Shetty Galli Kitchen Restaurant
Image Source: Instagram

 

View this post on Instagram

 

A post shared by SHINE SHETTY (@shineshettyofficial)

ಪುನೀತ್ ರಾಜಕುಮಾರ್ ಅವರ ಮಾತು ನನಗೆ ಸ್ಪೂರ್ತಿ ಎಂದ ಶೈನ್ ಶೆಟ್ಟಿ
ಗಲ್ಲಿ ಕಿಚನ್ ಇಂದು ಗುರು ಹಿರಿಯರು ನಿಮ್ಮೆಲ್ಲರ ಪ್ರೀತಿ ಆಶೀರ್ವಾದದಿಂದ ಒಂದು ರೆಸ್ಟೋರೆಂಟ್ ಆಗಿ ರಾಜರಾಜೇಶ್ವರಿ ನಗರದಲ್ಲಿ ಮುಂದೆ ಸಾಗುತ್ತಿದೆ. ಬನಶಂಕರಿ ಶಾಖೆಯ ಉದ್ಘಾಟನೆಗೆ ಬಂದಾಗ ಪುನೀತ್ ರಾಜಕುಮಾರ್ ಅವರು ಹೇಳಿದ ಮಾತು ನನಗೆ ಸ್ಪೂರ್ತಿ ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.

Join Nadunudi News WhatsApp Group

Shine Shetty Galli Kitchen Restaurant
Image Source; Instagram

ಅಲ್ಲದೆ ರಾಜರಾಜೇಶ್ವರಿ ನಗರದ ರೆಸ್ಟೋರೆಂಟ್ ಉದ್ಘಾಟನೆಗೆ ಬಂದು ಸಹಕರಿಸಿದ ಅಸ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದ ಎಂದು ಶೈನ್ ಶೆಟ್ಟಿ ಖುಷಿ ಹಂಚಿಕೊಂಡಿದ್ದಾರೆ.

ನಾನು ಇವತ್ತು ಏನೆ ಏಳಿಗೆಯನ್ನು ಕಂಡರೂ ಇದಕ್ಕೆ ಕಾರಣ ನನ್ನ ತಾಯಿ ಕುಟುಂಬದವರು, ಸ್ನೇಹಿತರು ನನಗೆ ನೀಡಿದ ಬೆಂಬಲ, ಬಿಗ್ ಬಾಸ್ ನ ಅವಕಾಶದ ಮೂಲಕ ನಾನು ಗಳಿಸಿದ ಜನರ ಪ್ರೀತಿ ಎಂದು ಅವರು ಪೋಸ್ಟ್ ಹಾಕಿ ಕೊಂಡಿದ್ದಾರೆ.

Shine Shetty Galli Kitchen Restaurant
Image Source: Instagram

Join Nadunudi News WhatsApp Group