Congress Defeat Reason Bihar: ಇದೀಗ ಬಿಹಾರದ 2025 ರ ಚುನಾವಣೆ ಫಲಿತಾಂಶ ರಾಜಕೀಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. NDA 202 ಸೀಟ್ ಪಡೆದುಕೊಂಡು ಬಾರಿ ಗೆಲುವನ್ನು ಸಾಧಿಸಿದೆ. ಮಹಾಗಥಬಂಧನ ಕೇವಲ 6 ಸೀಟ್ ಅನ್ನು ಪಡೆದುಕೊಂಡು ಸೋಲನ್ನು ಅನುಭವಿಸಿದೆ. ಹೌದು ಕಾಂಗ್ರೆಸ್ ಸರ್ಕಾರ 61 ಸೀಟ್ ಗಳಲ್ಲಿ ಕೇವಲ 6 ಸೀಟ್ ಅನ್ನು ಪಡೆದುಕೊಂಡಿರುವುದು ಪಕ್ಷಕ್ಕೆ ದೊಡ್ಡ ಆಘಾತವನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಇಂತಹ ಸೋಲನ್ನು ಅನುಭವಿಸಲು ಕಾರಣವೇನು ಅನ್ನುವ ಬಗ್ಗೆ ನಾವೀಗ ಸರಳವಾಗಿ ತಿಳಿದುಕೊಳ್ಳೋಣ.
NDA ಗೆ ಬಹುಮತದಿಂದ ಗೆಲುವು
ಮಹಿಳಾ ಹಾಗು ಯುವಕ ಮತದಿಂದ NDA ಭರ್ಜರಿ ಗೆಲುವನ್ನು ಸಾಧಿಸಿದೆ. ಇದು ಡಬಲ್ ಎಂಜಿನ್ ಸರ್ಕಾರದ ಶಕ್ತಿ – ಮೋದಿ ಅವರ ರಾಷ್ಟ್ರೀಯ ನಾಯಕತ್ವ ಮತ್ತು ನಿತೀಶ್ ಕುಮಾರ್ ಅವರ ಸ್ಥಳೀಯ ಆಕರ್ಷಣೆ. ಬಿಹಾರ್ ಚುನಾವಣೆಯಲ್ಲಿ ಉದ್ಯೋಗ, ಅಭಿವೃದ್ಧಿ, ಮತ್ತು ಕಲ್ಯಾಣ ಯೋಜನೆಗಳು NDA ಪಕ್ಷದಲ್ಲಿ ಪ್ರಮುಖ ವಿಷಯವಾಗಿದ್ದವು. ಬಿಹಾರದ ಮತದಾರರು ಅಭಿವೃದ್ಧಿ ಮತ್ತು ಉದ್ಯೋಗಗಳನ್ನು ಆಯ್ಕೆ ಮಾಡಿಕೊಂಡು ಮತವನ್ನು ಹಾಕಿದ್ದಾರೆ.
ಸೀಟ್ ಹಂಚಿಕೆ
NDA ಅಲ್ಲಿ BJP ಮತ್ತು JD ( U ) ತಲಾ 101 ಸೀಟ್ ಗಳಲ್ಲಿ ಸ್ಪರ್ದಿಸಿದ್ದು ಇದು ಐತಿಹಾಸಿಕ ಸಮತೋಲನವಾಗಿದೆ. BJP ಸ್ಟ್ರೈಕ್ ರೇಟ್ 90 % + , JD (U) 85 % , ಇದು 2020 ರ 125 ಸೀಟ್ ಗಳಿಂದ ಏರಿಕೆ. ಮಹಿಳಾ ಮತದಾರರು 66.91 % ಟರ್ನ್ ಔಟ್ ನೊಂದಿಗೆ NDA ಗೆ ಬೆಂಬಲವನ್ನ ನೀಡಿದ್ದಾರೆ.
ಕಾಂಗ್ರೆಸ್ ಸೋಲಿನ ಮುಖ್ಯ ಕಾರಣ
2020 ರಲ್ಲಿ 70 ಸೀಟ್ ಗಳಲ್ಲಿ 19 ಸೀಟ್ ಗೆದಿದ್ದ ಈ ಪಕ್ಷ ಈ ಬಾರಿ 61 ಸೀಟ್ ಗಳಲ್ಲಿ 9.8 % ಸ್ಟ್ರೈಕ್ ಔಟ್ ನೊಂದಿಗೆ 6 ಸೀಟ್ ಗಳನ್ನ ಮಾತ್ರ ಗೆದ್ದಿದೆ. ಸ್ಥಳೀಯ ನಾಯಕರೊಂದಿಗೆ ಸಮನ್ವಯ ಕೊರತೆ. ಅಭ್ಯರ್ಥಿ ಆಯ್ಕೆಯಲ್ಲಿ ಭಿನ್ನಾಭಿಪ್ರಾಯಗಳು ಕಾರ್ಯಕರ್ತರನ್ನು ನಿರಾಶಗೊಳಿಸಿದವು. ಚುನಾವಣಾ ಆಯೋಗದ ವಿರುದ್ಧ ಆರೋಪಗಳು (SIR ವಿವಾದ) ಮುಸ್ಲಿಂ ಮತ್ತು ಇತರ ಮತಗಳನ್ನು ದೂರ ಮಾಡಿದವು. ರಾಹುಲ್ ಗಾಂಧಿ ಅವರ ವೋಟ್ ಚೋರಿ ಅಭಿಯಾನ ಮತ್ತು ವೋಟರ್ ಅಧಿಕಾರ್ ಯಾತ್ರೆ ಯುವಕರನ್ನು ಆಕರ್ಷಿಸಿದೆ ಆದರೆ ಇದು ಸಾಮಾನ್ಯ ಮತದಾರರಲ್ಲಿ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಿದೆ. ಹಾಗೆ ಬಿಹಾರದ ಸ್ಥಳೀಯ ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಕಡಿಮೆ ಒತ್ತು ನೀಡಿತ್ತು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

