Bike Parcel: ರೈಲಿನಲ್ಲಿ ಬೈಕ್ ಪಾರ್ಸೆಲ್ ಮಾಡಲು ಏನು ಮಾಡಬೇಕು…? ಇಲ್ಲಿದೆ ನೋಡಿ ರೈಲ್ವೆ ನಿಯಮ

ಈ ರೀತಿಯಾಗಿ ರೈಲಿನ ಮೂಲಕ ನಿಮ್ಮ ಬೈಕ್ ಪಾರ್ಸೆಲ್ ಮಾಡಿ

Bike Parcel In Train: ರೈಲಿನಲ್ಲಿ ಜನ ಸಾಮಾನ್ಯರು ಪ್ರಯಾಣ ಮಾಡಲು ಹೇಗೆ ಸೂಕ್ತವೋ ಹಾಗೆ ವಾಹನಗಳನ್ನು ಸಾಗಿಸಲು ಕೂಡ ಅಷ್ಟೇ ಅನುಕೂಲಕರ ಆಗಿದೆ. ಹಲವು ಬಾರಿ ನಾವು ನಮ್ಮ ಮೋಟಾರ್ ಸೈಕಲ್ ಅನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ.

ಇದಕ್ಕಾಗಿ ಖಾಸಗಿ ಪಾರ್ಸೆಲ್ ಕಂಪನಿಯ ನೆರವು ಪಡೆದರೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಬಹುದು. ಆದರೆ ಭಾರತೀಯ ರೈಲ್ವೇಯಿಂದ ಕಡಿಮೆ ಹಣದಲ್ಲಿ ನಿಮ್ಮ ಬೈಕ್ ಅನ್ನು ಸುಲಭವಾಗಿ ಪಾರ್ಸಲ್ ಮಾಡಬಹುದು. ಇದರಲ್ಲಿ ನೀವು ನಿಮ್ಮ ಬೈಕನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಲಗೇಜ್ ರೂಪದಲ್ಲಿ ಪಾರ್ಸೆಲ್ ಮಾಡಬಹುದು.

Bike Parcel In Train
Image Credit: TV9hindi

ಎಷ್ಟು ಖಚ್ಚಾಗುತ್ತದೆ…?
ರೈಲ್ವೇ ಮೂಲಕ ಬೈಕ್ ಕಳುಹಿಸುವ ದರವನ್ನು ಅದರ ತೂಕ ಮತ್ತು ದೂರಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ. ಬೈಕು ಸಾಗಿಸಲು ಲಗೇಜ್ ಶುಲ್ಕಗಳ ಪಾರ್ಸೆಲ್‌ಗಳಿಗಿಂತ ಹೆಚ್ಚು. 500 ಕಿಲೋಮೀಟರ್ ದೂರಕ್ಕೆ ಬೈಕ್ ಕಳುಹಿಸಲು ಸರಾಸರಿ ದರ 1200 ರೂ. ಆದರೆ, ಬೈಕಿನ ದೂರ ಮತ್ತು ತೂಕದ ಆಧಾರದ ಮೇಲೆ ವ್ಯತ್ಯಾಸವಿರಬಹುದು. ಇದಲ್ಲದೇ ಬೈಕ್ ಪ್ಯಾಕಿಂಗ್ ಗೆ 300-500 ರೂ.ಪಾವತಿಸಬೇಕು.

ಈ ರೀತಿಯಾಗಿ ರೈಲಿನ ಮೂಲಕ ನಿಮ್ಮ ಬೈಕ್ ಪಾರ್ಸೆಲ್ ಮಾಡಿ
ಭಾರತೀಯ ರೈಲ್ವೆ ಮೂಲಕ ಪ್ರತಿದಿನ ಲಕ್ಷಾಂತರ ಪಾರ್ಸೆಲ್‌ಗಳು ಹೋಗುತ್ತವೆ. ನೀವು ರೈಲಿನಲ್ಲಿ ಬೈಕ್ ಪಾರ್ಸೆಲ್ ಮಾಡಲು ಮೊದಲು ನಿಮ್ಮ ಹತ್ತಿರದ ರೈಲು ನಿಲ್ದಾಣಕ್ಕೆ ಹೋಗಬೇಕು. ಅನಂತರ ಪಾರ್ಸೆಲ್ ಕಚೇರಿಯಿಂದ ಮಾಹಿತಿ ಪಡೆದು ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ವಾಹನದ RC ಪುಸ್ತಕ, ವಿಮೆಯ ಮೂಲ ಪ್ರಮಾಣಪತ್ರವನ್ನು ಹೊಂದಿರಬೇಕು. ಹೀಗೆ ನೀವು ನಿಮಗೆ ಬೇಕಾದ ಸ್ಥಳಗಳಿಗೆ ಬೈಕ್ ಅನ್ನು ಸಾಗಿಸಬಹುದಾಗಿದೆ.

Bike Transport by Train Service
Image Credit: Indiamart

ಬೈಕ್ ಪ್ಯಾಕ್ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
ನೀವು ಬೈಕ್ ಅನ್ನು ಪಾರ್ಸೆಲ್ ಮಾಡಲು ಪ್ಯಾಕಿಂಗ್ ಗೆ ನೀಡುತ್ತಿರಿ, ಹೀಗೆ ನೀಡುವ ಮುನ್ನ ಅದರಲ್ಲಿರುವ ಇಂಧನವನ್ನು ನೀವು ಸಂಪೂರ್ಣವಾಗಿ ಖಾಲಿಮಾಡಿಕೊಂಡು ಕೊಡಬೇಕು. ಏಕೆಂದರೆ ಪೆಟ್ರೋಲ್ ನಿಂದ ಕೆಲವು ಅನಾಹುತಗಳು ಸಂಭವಿಸಬಹುದು. ಇದಕ್ಕಾಗಿ ದಂಡ ಕೂಡ ವಿಧಿಸಬಹುದು. ಪಾರ್ಸೆಲ್ ಮಾಡಿದ ನಂತರ ರೈಲ್ವೆ ಸಿಬ್ಬಂದಿ ನೀಡುವ ರಸೀದಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು, ಏಕೆಂದರೆ ಬೈಕ್ ಹಿಂಪಡೆಯುವಾಗ ಆ ರಶೀದಿಯನ್ನು ತೋರಿಸಬೇಕಾಗುತ್ತದೆ.

Join Nadunudi News WhatsApp Group

Bike Parcel Charge In Train
Image Credit: Indiamart

Join Nadunudi News WhatsApp Group