Beer Bike: ಬಿಯರ್ ನಿಂದ ಚಲಿಸುವ ಬೈಕ್ ತಯಾರಿಸಿದ ಸಂಶೋಧಕ, ಬಿಯರ್ ಹಾಕಿದರೆ ಓಡುತ್ತದೆ ಈ ಬೈಕ್.

ಅಮೆರಿಕಾದ ಸಂಶೋಧಕರೊಬ್ಬರು ಬಿಯರ್ ಮೂಲಕ ಚಲಿಸುವ ಬೈಕ್ ಅನ್ನು ಕಂಡುಹಿಡಿದಿದ್ದಾರೆ.

Beer Powered Motorcycle: ಬೈಕ್ (Bike) ಚಲಿಸಲು ಮುಖ್ಯವಾಗಿ ಅದಕ್ಕೆ ಪೆಟ್ರೋಲ್ ಹಾಕಬೇಕು. ಆದರೆ ಇದೀಗ ಇಲ್ಲೊಂದು ಬೇರೆ ಸಂಶೋಧನೆಯೇ ಆಗಿದೆ. ಅಮೇರಿಕಾದ ಮಿನ್ನೇಸೋಟ ಪ್ರಾಂತ್ಯದ ಬ್ಲೂಮಿಂಗ್ಟನ್ ನಗರದ ವ್ಯಕ್ತಿಯೊಬ್ಬ ಬಿಯರ್ ನಿಂದ ಚಲಿಸುವ ಮೋಟಾರ್ ಸೈಕಲ್ ಅನ್ನು ಆವಿಷ್ಕರಿಸಿದ್ದಾನೆ. ರಾಕೆಟ್ ಮ್ಯಾನ್ ಎಂದೇ ಕರೆಯಲ್ಪಡುವ ಕಿ ಮೈಕೆಲ್ಸನ್ ಈ ನೂತನ ಸಂಶೋಧನೆ ಮಾಡಿದ್ದಾರೆ.

Beer Powered Motorcycle
Image Source: UPI.COM

ಬಿಯರ್ ನಿಂದ ಚಲಿಸುವ ಹೊಸ ಬೈಕ್
ಇದು 14 ಗ್ಯಾಲನ್ ಕೆಗ್ ಸಾಮರ್ಥ್ಯದ ಟ್ಯಾಂಕ್ ಹೊಂದಿದ್ದು ಅನಿಲ ಚಾಲಿತ ಎಂಜಿನ್ ಬದಲಿಗೆ ಹೀಟಿಂಗ್ ಕಾಯಿಲ್ ಅನ್ನು ಹೊಂದಿದೆ. ಈ ಕಾಯಿಲ್ ಬಿಯರ್ ಅನ್ನು 300 ಡಿಗ್ರಿಯ ವರೆಗೆ ಬಿಸಿ ಮಾಡುತ್ತದೆ. ಅದು ನಂತರ ಬೈಕ್ ಅನ್ನು ಮುಂದಕ್ಕೆ ಚಲಿಸುವಂತೆ ಮಾಡಲು ಸೂಪರ್ ಹೀಟೆಡ್ ಸ್ಟೀಮ್ ಆಗುತ್ತದೆ ಎಂದು ಮೈಕೆಲ್ಸನ್ ತಿಳಿಸಿದ್ದಾರೆ.

ಈ ಬೈಕ್ ಗಂಟೆಗೆ 240 ಕೀ. ಮೀ ವೇಗದಲ್ಲಿ ಚಲಿಸುತ್ತದೆ. ಪೆಟ್ರೋಲ್ ಮತ್ತು ಅನಿಲ ಅದರ ಏರಿಕೆ ಆಗುತ್ತಿದೆ, ಹೀಗಾಗಿ ಇದಕ್ಕಿಂತ ಕಡಿಮೆ ದರದ ಇಂಧನ ಆವಿಷ್ಕಾರಕ್ಕಾಗಿ ಈ ಸಂಶೋಧನೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

Beer Powered Motorcycle
Image Source: India tv hindi

ಇನ್ನು ಈ ಬಿಯರ್ ನಿಂದ ಚಲಿಸುವ ಬೈಕ್ ಅನ್ನು ಮೈಕೆಲ್ಸನ್ ಇದುವರೆಗೂ ರಸ್ತೆಗೆ ಇಳಿಸಿಲ್ಲ. ಪರೀಕ್ಷೆಯಾಗಿ ಶೀಘ್ರವೇ ರಸ್ತೆ ತರಲಾಗುವುದು. ಇದನ್ನು ಕೆಲವು ವಾಹನ ಪ್ರದರ್ಶನಗಳಲ್ಲಿ ಪ್ರದರ್ಶಿಸಲಾಗಿದ್ದು ಈ ಆವಿಷ್ಕಾರಕ್ಕೆ ಪ್ರಥಮ ಬಹುಮಾನ ಬಂದಿದೆ ಎಂದು ತಿಳಿಸಿದ್ದಾರೆ. ಬಹುತೇಕ ಈ ಆವಿಷ್ಕಾರವು ಸಾರ್ವಜನಿಕ ಬಳಕೆಗೆ ಸಿಗುವುದು ಅನುಮಾನವಾಗಿದೆ.

Beer Powered Motorcycle
Image Source: Drivespark

Join Nadunudi News WhatsApp Group

Join Nadunudi News WhatsApp Group