Birth Certificate: ಇನ್ನುಮುಂದೆ ಈ ಕೆಲಸಗಳಿಗೆ ಜನ ಪ್ರಮಾಣಪತ್ರ ಕಡ್ಡಾಯ, ಕೇಂದ್ರ ಸರ್ಕಾರದ ಹೊಸ ನಿಯಮ.
ಇನ್ನುಮುಂದೆ ಈ ದಾಖಲೆ ಹೊಂದುವುದು ಕಡ್ಡಾಯ, ಅಕ್ಟೊಬರ್ 1 ರಿಂದ ಹೊಸ ನಿಯಮ ಜಾರಿ.
Birth Certificate Latest Update: ಭಾರತೀಯ ಪ್ರಜೆಯಾದ ಪ್ರತಿಯೊಬ್ಬರಿಗೂ Aadhar Card, Pan Card, Ration Card, Voter Id ಸೇರಿದಂತೆ ಇನ್ನಿತರ ವೈಯಕ್ತಿಕ ದಾಖಲೆಗಳು ಮುಖ್ಯ. ಎಲ್ಲಾ ವೈಯಕ್ತಿಕ ಸರಿ ಇದ್ದರೆ ಮಾತ್ರ ಯಾವುದೇ ತೊಂದರೆ ಇಲ್ಲದೆ ಕೆಲಸಗಳು ಪೂರ್ಣಗೊಳುತ್ತದೆ.
ಇನ್ನು ಕೇಂದ್ರ ಸರ್ಕಾರ ಇತೀಚೆಗೆ ಸಾಕಷ್ಟು ನಿಯಮವನ್ನು ಜಾರಿಗೊಳಿಸಿದೆ. ಎಲ್ಲ ವೈಯಕ್ತಿಕ ಮಾಹಿತಿಗಳಿಗೆ Aadhaar Card ಲಿಂಕ್ ಆಗಿರುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ಕೇಂದ್ರ ಗೃಹ ಸಚಿವಾಲಯ ಜನಸಮಾನ್ಯರಿಗೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. ಆಧಾರ್ ಕಾರ್ಡ್ ನ ಪ್ರಾಮುಖ್ಯತೆಯ ಜೊತೆಗೆ ಇನ್ನುಮುಂದೆ ಈ ದಾಖಲೆ ಕೂಡ ಮುಖ್ಯವಾಗಲಿದೆ.
ಇನ್ನುಮುಂದೆ ಈ ದಾಖಲೆ ಹೊಂದುವುದು ಕಡ್ಡಾಯ
ಕೇಂದ್ರ ಗೃಹ ಸಚಿವಾಲಯ ಇದೀಗ Birth certificate ಸಂಬಂಧಿತ ಮಹತ್ವದ ಆದೇಶವನ್ನು ಹೊರಡಿಸಿದೆ. ವ್ಯಕ್ತಿಯ ವೈಯಕ್ತಿಕ ದಾಖಲೆಯಲ್ಲಿ Birth certificate ಎಷ್ಟು ಮುಖ್ಯ ದಾಖಲೆ ಎನ್ನುವ ಬಗ್ಗೆ ಜನರಿಗೆ ಕೇಂದ್ರ ಗೃಹ ಸಚಿವಾಲಯ ತಿಳಿಸಲು ಮುಂದಾಗಿದೆ.
ಇನ್ನುಮುಂದೆ ಜನನ ಪ್ರಮಾಣ ಪತ್ರ ಏಕೈಕ ಮೂಲಾಧಾರವಾಗಲಿದೆ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಜನಸಾಮಾನ್ಯರು ಜನನ ಪ್ರಮಾಣ ಪಾತ್ರದ ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕಿದೆ. ಇನ್ನುಮುಂದೆ ಇಂತಹ ಎಲ್ಲ ಕೆಲಸಗಳಿಗೂ Birth certificate ಅನ್ನೂ ಕಡ್ಡಾಯಗೊಳಿಸಿದೆ. ಜನನ ಪ್ರಮಾಣಪತ್ರ ಇಲ್ಲದಿದ್ದರೆ ಇನ್ನುಮುಂದೆ ಈ ಕೆಲಸಗಳು ಪೂರ್ಣಗೊಳ್ಳುವುದಿಲ್ಲ.
ಅಕ್ಟೊಬರ್ 1 ರಿಂದ ಹೊಸ ನಿಯಮ ಜಾರಿ
ಕೇಂದ್ರ ಗೃಹ ಸಚಿವಾಲಯ ಅಕ್ಟೋಬರ್ 1 ರಿಂದಲೇ ಈ ಹೊಸ ನಿಯಮವನ್ನು ಜಾರಿಗೊಳಿಸಲು ನಿರ್ಧರಿಸಿದೆ. ಅಕ್ಟೋಬರ್ 1 ರಿಂದಲೇ ಕಾಯ್ದೆಯ ನಿಬಂಧನೆಗಳು ಜಾರಿಗೆ ಬರಲಿದೆ. ಈ ಹೊಸ ನಿಯಮ ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಡೇಟಾಬೇಸ್ ಅನ್ನು ರಚಿಸಲು ಸಹಾಯ ಮಾಡಲಿದೆ. ಇನ್ನುಮುಂದೆ ಪ್ರತಿ ಮಗುವಿನ ಜನನ ನಂತರ ಪೋಷಕರು ಮಕ್ಕಳ ಜನನ ಪ್ರಮಾಣ ಪತ್ರವನ್ನು ಮಾಡಿಸಬೇಕಿದೆ.
ಈ ಎಲ್ಲ ಕೆಲಸಗಳಿಗೂ Birth certificate ಕಡ್ಡಾಯ
*ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು.
* ವಾಹನ ಚಾಲನಾ ಪರವಾನಗಿ ಪಡೆಯಲು
*ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು.
*ಆಧಾರ್ ಸಂಖ್ಯೆ ನೋಂದಣಿ ಮಾಡಲು.
*ನವ ವದು ವರರ ವಿವಾಹ ನೋಂದಣಿ ಮಾಡಿಸಲು.
*ಸರ್ಕಾರೀ ಉದ್ಯೋಗ ನೇಮಕಾತಿ ಮಾಡಲು.