Rani Durgavati: ಪ್ರತಿ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಸಿಗಲಿದೆ 1.5 ಲಕ್ಷ ರೂ, ಜಾರಿಗೆ ಬಂತು ರಾಣಿ ದುರ್ಗಾವತಿ ಯೋಜನೆ.
ಹೆಣ್ಣು ಮಕಾಳಿಗಾಗಿ ಜಾರಿಗೆ ಬಂತು ರಾಣಿ ದುರ್ಗಾವತಿ ಸ್ಕೀಮ್.
BJP Govt Rani Durgavati Scheme: ಸದ್ಯ ದೇಶದಲ್ಲೂ ಚುನಾವಣೆಯ ಕಾವು ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಚುನಾವಣೆಯ ಉದ್ದೇಶದಿಂದ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಸರ್ಕಾರ ಹಲವು ಯೋಜನೆಗಳ ಘೋಷಣೆಯನ್ನ ಮಾಡುತ್ತಿದ್ದು ಇದು ಜನರಿಗೆ ವರದಾನವಾಗುತ್ತಿದೆ ಎಂದು ಹೇಳಬಹುದು. ಸದ್ಯ ಇದರ ನಡುವೆ ಕಾಂಗ್ರೆಸ್ ಗೆ ಪೈಪೋಟಿ ನೀಡಲು ಈಗ ಬಿಜೆಪಿ ಭರ್ಜರಿ ಗ್ಯಾರಂಟಿ ಘೋಷಣೆ ಮಾಡಿದ್ದು ಇದು ಮಹಿಳೆಯರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಕಾಂಗ್ರೆಸ್ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಎದುರಿಸಲು ಸದ್ಯ BJP ಸರ್ಕಾರ Modi Guarantee ಶೀರ್ಷಿಕೆಯೊಂದಿಗೆ ಹತ್ತು ಹಲವು ಯೋಜನೆಯನ್ನು ಜನರಿಗಾಗಿ ಘೋಷಿಸಿದೆ. ಈ ಬಾರಿ BJP ಸರ್ಕಾರ ತನ್ನ ಅಧಿಕಾರವನ್ನು ಪಡೆಯಲು ಪಟ್ಟುಹಿಡಿದಿದೆ. BJP ಪ್ರಣಾಳಿಕೆಯನ್ನು ನೀಡಲಾದ ಭರವಸೆಯ ಯೋಜನೆಗಳು ಈ ಬಾರಿ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಹೊಡೆತವನ್ನೇ ನೀಡಲಿದೆ. ಸದ್ಯ ಛತ್ತೀಸಗಡದಲ್ಲಿ ಯುವತಿಯರಿಗಾಗಿ ವಿಶೇಷ ಯೋಜನೆಯನ್ನು BJP ಸರ್ಕಾರ ಘೋಷಿಸಿದೆ. ಈ ಯೋಜನೆಯಡಿ ರಾಜ್ಯದ ಯುವತಿಯರು ಧನ ಸಹಾಯವನ್ನು ಪಡೆಯಬಹುದು.
ರಾಜ್ಯದ ಯುವತಿಯರಿಗೆ ಸಿಗಲಿದೆ 1,50,000
ಛತ್ತೀಸಗಡ ರಾಜ್ಯ ಸರ್ಕಾರ ಸದ್ಯ ರಾಜ್ಯದಲ್ಲಿ ವಿವಿಧ ಭರವಸೆಗಳನ್ನು ನೀಡುತ್ತಾ ಜನರನ್ನು ಸೆಳೆಯುತ್ತಿದೆ. ಜನರ ಅಗತ್ಯಕ್ಕೆ ಅನುಗುಣವಾಗಿ ಯೋಜನೆಯನ್ನು ಘೋಷಿಸುತ್ತಿದೆ. ಇನ್ನು ರಾಜ್ಯದಲ್ಲಿ BJP ಸರ್ಕಾರ “ರಾಣಿ ದುರ್ಗಾವತಿ ಯೋಜನೆಗೆ ಚಾಲನೆ ನೀಡಲಿದೆ.
ಈ ಯೋಜನೆಯಡಿ ಹುಡುಗಿಯರಿಗೆ 1,50,000 ರೂ. ಗಳ ಸಹಾಯಧನ ನೀಡುವುದಾಗಿ ಘೋಷಿಸಿದೆ. ಛತ್ತೀಸಗಡ ರಾಜ್ಯದಲ್ಲಿ BPL Ration Card ಹೊಂದಿರುವ ಯುವತಿಯರು ಪ್ರೌಡಾವಸ್ಥೆಗೆ ಬಂದಾಗ ರಾಣಿ ದುರ್ಗಾವತಿ ಯೋಜನೆಯಡಿ ಅರ್ಹ ಯುವತಿಯರಿಗೆ 1,50,000 ರೂ. ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಈ ಮೂಲಕ ಹೆಣ್ಣುಮಕ್ಕಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಹೆಣ್ಣು ಮಕ್ಕಳು ವ್ಯವಹಾರವನ್ನ ಮಾಡಲು ಈ ಯೋಜನೆಯ ಮೂಲಕ ಆರ್ಥಿಕ ನೆರವು ಪಡೆದುಕೊಳ್ಳಬಹುದು.
BJP ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳು
*ಗ್ಯಾಸ್ ಸಿಲಿಂಡರ್ ಬೆಲೆಯ ಏರಿಕೆಯ ಕಾರಣ ರಾಜ್ಯದ ಜನತೆಗೆ 500 ರೂ. ಗೆ ಗ್ಯಾಸ್ ಸಿಲಿಂಡರ್.
*ಎರಡು ವರ್ಷಗಳಲ್ಲಿ ಒಂದು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ.
*ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ ರೂ. 12,000 ಆರ್ಥಿಕ ನೆರವು,
*ಭೂರಹಿತ ಕೃಷಿ ಕಾರ್ಮಿಕರಿಗೆ ವಾರ್ಷಿಕ ರೂ 10,000 ಮತ್ತು ಕೃಷಿ ಉನ್ನತಿ ಯೋಜನೆಯಡಿ ಭತ್ತ ಖರೀದಿಗೆ ಪ್ರತಿ ಕ್ವಿಂಟಲ್ ಗೆ ರೂ 3,100 ನಿಗದಿಪಡಿಸಿದೆ.
*ರಾಜ್ಯದ ಬಡ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
*ಆಯುಷ್ಮನ್ ಭಾರತ್ ಯೋಜನೆಯಡಿ 5 ಲಕ್ಷ ರೂ. ವಿಮೆ ನೀಡಲಾಗುತ್ತದೆ.
*500 ಕ್ಕೂ ಹೆಚ್ಚು ಜನೌಷಧಿ ಕೇಂದ್ರದ ಸ್ಥಾಪನೆ.