BJP Guarantee: ಪ್ರತಿಯೊಬ್ಬರಿಗೂ 15 ಲಕ್ಷ ಉಚಿತ ವಿಮೆ ಮತ್ತು 500 ರೂ ಗೆ ಗ್ಯಾಸ್, ಬಿಜೆಪಿ ಯಿಂದ ಭರ್ಜರಿ ಆಫರ್.

ವಿಧಾನ ಸಭಾ ಚುನಾವಣೆಯನ್ನು ಗೆಲ್ಲುವ ಸಲುವಾಗಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ BJP.

BJP Election Promotion: ಸದ್ಯ ದೇಶದಲ್ಲಿ ವಿವಿಧ ರಾಜ್ಯಗಳು ವಿಧಾನಸಭಾ ಚುನಾವಣಾ ಸಿದ್ದತೆಯಲ್ಲಿ ಬ್ಯುಸಿ ಆಗಿದೆ. ಈಗಾಗಲೇ ಚುನಾವಣೆಯ ಕಾರಣ ರಾಜಕೀಯ ಪಕ್ಷಗಳುತನ್ನ ಪ್ರಣಾಳಿಕೆಯನ್ನು ಘೋಷಿಸಿದೆ. ಸದ್ಯ ಛತ್ತೀಸ್‌ ಗಢದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ BJP ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಕೇಂದ್ರ ಸಚಿವ ಅಮಿತ್ ಷಾ (Amit Shah) ರಾಜ್ಯದ ಜನತೆಗೆ ಭರವಸೆಗಳ ಬಗ್ಗೆ ಘೋಷಣೆ ಹೊರಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿರುವ ಪ್ರಣಾಳಿಕೆಗಿಂತ ಬಿಜೆಪಿ ಸರಕಾರ ವಿವರ ಸೌಲಭ್ಯವನ್ನು ಘೋಷಿಸಿದೆ.

BJP Guarantee In Chhattisgarh
Image Credit: Economictimes

ಬಿಜೆಪಿ ಪಕ್ಷದಿಂದ ಉಚಿತ ಗ್ಯಾರಂಟಿಗಳ ಸುರಿಮಳೆ
ಈಗಾಗಲೇ ದೇಶದಲ್ಲಿ ವಿವಿಧ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಪೂರ್ಣವಾಗಿ ರೆಡಿ ಆಗುತ್ತಿದೆ. ಮತದಾರರನ್ನು ಸೆಳೆಯಲು ಈ ಬಾರಿ ಉಚಿತ ಗ್ಯಾರಂಟಿ ಯೋಜನಗಳನ್ನೇ ಪಕ್ಷಗಳು ಅಸ್ತ್ರವನ್ನಾಗಿ ಉಪಯೋಗಿಸಿಕೊಳ್ಳುತ್ತಿವೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಹಲವಾರು ಉಚಿತ ಗ್ಯಾರಂಟಿ ಯೋಜನೆಯನ್ನು ಘೋಷಿಸುತ್ತ ಮತದಾರರನ್ನು ತನ್ನತ ಸೆಳೆಯುತ್ತಿದೆ.

ಸದ್ಯ ಬಿಜೆಪಿ ಪಕ್ಷ ಕೂಡ ಕಾಂಗ್ರೆಸ್ ಪಕ್ಷದಂತೆ ಸದ್ಯ ಹೊಸ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಸೆಳೆಯುವ ಪ್ರಯತ್ನವನ್ನು BJP ಸರ್ಕಾರ ಕೂಡ ನಡೆಸುತ್ತಿದೆ. ಈ ಬಾರಿ ಜನರು ಯಾವ ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ ಎನ್ನುವುದೇ ಕುತೂಹಲವಾಗಿದೆ. ಇದೀಗ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಯಾವ ಯಾವ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Chhattisgarh BJP Govt
Image Credit: The Statesman

15 ಲಕ್ಷ ವಿಮೆಯ ಜೊತೆಗೆ 500 ರೂ. ಗೆ ಸಿಗಲಿದೆ ಗ್ಯಾಸ್ ಸಿಲಿಂಡರ್
*ರಾಜ್ಯದ ಬಡ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

Join Nadunudi News WhatsApp Group

*ಆಯುಷ್ಮನ್ ಭಾರತ್ ಯೋಜನೆಯಡಿ 5 ಲಕ್ಷ ರೂ. ವಿಮೆ ನೀಡಲಾಗುತ್ತದೆ.

*ಗ್ಯಾಸ್ ಸಿಲಿಂಡರ್ ಬೆಲೆಯ ಏರಿಕೆಯ ಕಾರಣ ರಾಜ್ಯದ ಜನತೆಗೆ 500 ರೂ. ಗೆ ಗ್ಯಾಸ್ ಸಿಲಿಂಡರ್.

*ರಾಣಿ ದುರ್ಗಾವತಿ ಯೋಜನೆಯಡಿ ವೃದ್ಧ ಮಹಿಳೆಯರಿಗೆ 1,50,000 ರೂ. ಸಹಾಯಧನ.

Join Nadunudi News WhatsApp Group