Blue Aadhaar Card Rule: ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಹೊಸ ನಿಯಮ ಜಾರಿ, UIDAI ನಿಂದ ಜಾರಿ

ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಹೊಸ ನಿಯಮ ಜಾರಿ

Blue Aadhaar Card Rule For Children’s: ಮಕ್ಕಳಿಗಾಗಿಯೇ ವಿಶೇಷ ಆಧಾರ್ ಕಾರ್ಡ್ ಅನ್ನು UIDAI ಪರಿಚಯಿಸಿದೆ. ಮಕ್ಕಳ ಆಧಾರ್ ಕಾರ್ಡ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಬಹುದು. ಭಾರತದ ಪ್ರತಿಯೊಬ್ಬ ಪೋಷಕರು ಕೂಡ ಈ ವಿಶೇಷ ಆಧಾರ್ ಕಾರ್ಡ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಕಾರಣ 5 ವರ್ಷ ಒಳಗಿನ ಮಕ್ಕಳಿಗಾಗಿ ವಿಶೇಷ ಆಧಾರ್ ಕಾರ್ಡ್ ಅನ್ನು ಮಾಡಲಾಗಿದೆ. ಮಕ್ಕಳಿಗಾಗಿ ಪರಿಚಯಿಸಿರುವ ಆಧಾರ್ ಕಾರ್ಡ್ ಯಾವುದು..? ಅದು ಯಾವ ರೀತಿ ಇರುತ್ತದೆ..? ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವ ನಿಯಮವೇನೂ…? ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಒಂದಿಷ್ಟು ಡಿಟೈಲ್ಸ್ ನೀಡಲಿದ್ದೇವೆ.

Blue aadhar card
Image Credit: Informalnewz

ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಹೊಸ ನಿಯಮ ಜಾರಿ
ಈ ಹಿಂದೆ ನವಜಾತ ಶಿಶುಗಳಿಗೆ ಅಥವಾ 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಸೌಲಭ್ಯ ಇರಲಿಲ್ಲ. ಇನ್ನು 2018 ರಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಕ್ಕಳಿಗಾಗಿ ಆಧಾರ್ ಕಾರ್ಡ್ ಅನ್ನು ಬಿಡುಗಡೆ ಮಾಡಿತು. ಅದಕ್ಕೆ ಬಾಲ್ ಆಧಾರ್ ಕಾರ್ಡ್ ಎಂದು ಹೆಸರಿಡಲಾಗಿದೆ. ಇದು ನೀಲಿ ಬಣ್ಣದಲ್ಲಿ ಲಭ್ಯವಾಗುವುದರಿಂದ ಇದನ್ನು ನೀಲಿ ಆಧಾರ್ ಕಾರ್ಡ್ ಅಥವಾ ಬ್ಲೂ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ.

ಈ ನೀಲಿ ಆಧಾರ್ ಕಾರ್ಡ್ ವಯಸ್ಕರಿಗೆ ನೀಡಲಾಗುವ ಆಧಾರ್ ಕಾರ್ಡ್ ಗಿಂತ ಭಿನ್ನವಾಗಿರುತ್ತದೆ. ಈ ಆಧಾರ್ ಕಾರ್ಡ್ ಗಳಿಗೆ ಮಗುವಿನ ಐರಿಸ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನ್ ಅಗತ್ಯವಿಲ್ಲ. ಬಾಲ್ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಲು ಪೋಷಕರಲ್ಲಿ ಒಬ್ಬರು ತಮ್ಮ ಮೂಲ ಆಧಾರ್ ಕಾರ್ಡ್ ಮತ್ತು ಮಕ್ಕಳ ಅಧಿಕೃತ ಜನನ ಪ್ರಮಾಣ ಪತ್ರವನ್ನು ಒದಗಿಸಬೇಕಾಗುತ್ತದೆ.

Blue Aadhaar Card Rule
Image Credit: Medium

ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ…?
ಇನ್ನು ಸರ್ಕಾರ ಸಣ್ಣ ಮಕ್ಕಳಿಗೆ ಕೂಡ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಹೀಗಾಗಿ ಸರ್ಕಾರದ ಯೋಜನೆಗಳ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಲು ಮಕ್ಕಳಿಗೆ ಈ ಬಾಲ್ ಆಧಾರ್ ಕಾರ್ಡ್ ಅನ್ನು ಪರಿಚಯಿಸಲಾಗಿದೆ ಎನ್ನಬಹುದು. ಹಾಗೆಯೆ ಚಿಕ್ಕ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲು ಕೂಡ ಬಾಲ ಆಧಾರ್ ಕಾರ್ಡ್ ಅಗತ್ಯವಿದೆ. UIDAI ನ ಅಧಿಕೃತ Website https://uidai.gov.in/ ಗೆ ಭೇಟಿ ನೀಡಿ ನಿಮ್ಮ ಮಗುವಿಗೆ Baal Aadhaar ಪಡೆಯಲು ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Blue Aadhaar Card
Image Credit: The Hindu

Join Nadunudi News WhatsApp Group