Araucana Chicken: ನೀಲಿ ಮೊಟ್ಟೆ ಇಡುವ ಈ ಕೋಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್, ಇದರ ಸಾಕಾಣಿಕೆ ಮಾಡಿದರೆ ಲಕ್ಷ ಲಕ್ಷ ಲಾಭ.
ನೀಲಿ ಮೊಟ್ಟೆ ಇಡುವ ಕೋಳಿ ಸಾಕಣೆ ಮಾಡಿದರೆ ಲಕ್ಷ ಲಕ್ಷ ಲಾಭ ಗಳಿಸಬಹುದು.
Blue Egg Araucana Chicken: ಸಾಮಾನ್ಯವಾಗಿ ಕೋಳಿ ಸಾಕಾಣಿಕೆಯ ಆಬಗ್ಗೆ ಎಲ್ಲರಿಗು ತಿಳಿದೇ ಇದೆ. ಕೋಳಿಗಳಲ್ಲಿ ವಿಭಿನ್ನ ತಳಿಯ ಕೋಳಿಗಳಿರುತ್ತದೆ. ಇನ್ನು ಸಾಮಾನ್ಯವಾಗಿ ಕೋಳಿಗಳು ಬಿಳಿ ಬಣ್ಣದಲ್ಲಿ ಮೊಟ್ಟೆಯನ್ನು ಇಡುತ್ತವೆ. ಆದರೆ ನಿಮಗೆ ಗೊತ್ತಾ? ದೇಶದಲ್ಲಿ ನೀಲಿ ಬಣ್ಣದಲ್ಲಿ ಮೊಟ್ಟೆ ಇಡುವ ಕೋಳಿಗಳು ಕೂಡ ಇದೆ.
ಹೌದು, ಮಾರುಕಟ್ಟೆಯಲ್ಲಿ ಈ ನೀಲಿ ಬಣ್ಣದ ಮೊಟ್ಟೆ ಇಡುವ ಕೋಳಿಗಳಿಗೆ ಬಾರಿ ಬೇಡಿಕೆ ಇದೆ ಎನ್ನಬಹುದು. ಏಕೆಂದರೆ ನೀಲಿ ಬಣ್ಣದ ಮೊಟ್ಟೆಗಳು ವಿಶೇಷ ಬಣವನ್ನು ಹೊಂದಿಯೋರುವುದರ ಜೊತೆಗೆ ಈ ಮೊಟ್ಟೆಯ ರುಚಿ ಕೂಡ ವಿಶೇಷವಾಗಿರುತ್ತದೆ. ಸದ್ಯ ಈ ನೀಲಿ ಬಣ್ಣದ ಮೊಟ್ಟೆ ಇಡುವ ಕೋಳಿ ಯಾವ ತಳಿಯದ್ದು? ಹಾಗೆಯೆ ಈ ಕೋಳಿಯ ಮೊಟ್ಟೆಯ ಬೆಲೆ ಎಷ್ಟಿರುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ನೀಲಿ ಮೊಟ್ಟೆ ಇಡುವ ಈ ಕೋಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್
ಸ್ಥಳೀಯ ಮತ್ತು ವಿದೇಶಿ ತಳಿಗಳ ಮೊಟ್ಟೆಗಳು ಆಕಾರ ಮತ್ತು ಬಣ್ಣದಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ. ಆದರೆ ನೀಲಿ ಮೊಟ್ಟೆಗಳನ್ನು ಇಡುವ ಕೋಳಿಗಳ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿ ಆಗುವುದಂತೂ ಖಂಡಿತ. ನೀಲಿ ಮೊಟ್ಟೆಗಳನ್ನು ಇಡುವ ಕೋಳಿಯ ಹೆಸರು ‘Araucana’ (ಅರೌಕಾನಾ). ಈ ಕೋಳಿಗಳು ಹೆಚ್ಚಾಗಿ ಚಿಲಿಯಲ್ಲಿ ಕಂಡುಬರುತ್ತವೆ.
ಕೋಳಿಯ ಮೊಟ್ಟೆ ನೀಲಿ ಬಣ್ಣವನ್ನು ಹೊಂದುವ ಬಗೆ ಹೇಗೆ..?
ಕೋಳಿಯಲ್ಲಿ ರೆಟ್ರೊ ವೈರಸ್ ದಾಳಿಯ ಹೆಚ್ಚಿನ ಸಾಧ್ಯತೆಯಿದೆ. ಇವುಗಳು ಒಂದೇ RNA ಆಗಿರುವ ವೈರಸ್ ಗಳು ಮತ್ತು ಕೋಳಿಗಳನ್ನು ಪ್ರವೇಶಿಸಿದ ನಂತರ ಅವು ತಮ್ಮ ಜೀನೋಮ್ ನ ರಚನೆಯನ್ನು ಬದಲಾಯಿಸುತ್ತವೆ. ಈ ರೆಟ್ರೊ ವೈರಸ್ ಗಳನ್ನೂ EAV-HP ಎಂದು ಕರೆಯಲಾಗುತ್ತದೆ. ಜೀನ್ ಗಳ ರಚನೆಯಲ್ಲಿನ ಪ್ರಮುಖ ಬದಲಾವಣೆಗಳಿಂದಾಗಿ ಕೋಳಿ ಮೊಟ್ಟೆಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ.
ಈ ಕೋಳಿ ಸಾಕಾಣಿಕೆ ಮಾಡಿದರೆ ಲಕ್ಷ ಲಕ್ಷ ಲಾಭ
ರೆಟ್ರೊ ವೈರಸ್ ಇದ್ದರು ಕೂಡ ಈ ಕೋಳಿಯ ಮೊಟ್ಟಿಯನ್ನು ತಿನ್ನುವುದು ಅಪಾಯಕಾರಿಯೇ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಈ ರೆಟ್ರೊವೈರಸ್ ಈ ವೈರಸ್ ಜೀನ್ ನ ಆಂತರಿಕ ರಚನೆಯನ್ನು ಮಾತ್ರ ಬದಲಾಯಿಸುತ್ತದೆ ಮತ್ತು ಅದರ ಬಣ್ಣವನ್ನು ಬದಲಾಯಿಸುತ್ತದೆ ಅಷ್ಟೇ.
ಹೀಗಾಗಿ ಈ ಕೋಳಿ ಮೊಟ್ಟೆಯ ಸೇವೆನೆಯಿಂದ ಯಾವುದೇ ತೊಂದರೆ ಇಲ್ಲ ಎನ್ನಬಹುದು. ಮಾರುಕಟ್ಟೆಯಲ್ಲಿ ಈ ನೀಲಿ ಬಣ್ಣದ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ ಈ Araucana ತಳಿಯ ಕೋಳಿಯನ್ನು ಸಾಕುವ ಮೂಲಕ ನೀವು ಲಕ್ಷ ಲಕ್ಷ ಲಾಭವನ್ನು ಗಳಿಸಬಹುದು.