BMTC: ಬೆಂಗಳೂರು ಜನರಿಗೆ ಗುಡ್ ನ್ಯೂಸ್ ನೀಡಿದ BMTC, ಈಗ ಟ್ರ್ಯಾಕ್ ಮಾಡಿ ನಿಮ್ಮ ಬಸ್.
ಈಗ ಬೆಂಗಳೂರು ಜನರು ಬಸ್ ಎಲ್ಲಿದೆ ಅನ್ನುವುದನ್ನ ಬಿಎಂಟಿಸಿ ಟ್ರಾಕಿಂಗ್ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬಹುದು.
BMTC Mobile Appliaction: ಇನ್ನುಮುಂದೆ ಜನರಿಗೆ ಬಿಎಂಟಿಸಿ (BMTC) ಬಸ್ ನಲ್ಲಿ ಸಂಚರಿಸಲು ಯಾವೂದೆತೊಂದರೆ ಆಗುವುದಿಲ್ಲ. ಏಕೆಂದರೆ ಪ್ರಯಾಣಿಕರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಂಸ್ಥೆ ಹೊಸ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ.
ನಮ್ಮ ಬಿಎಂಟಿಸಿ ಮೊಬೈಲ್ ಆಪ್ ಅನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಿಡುಗಡೆ ಮಾಡಿದೆ. ಬಸ್ ಗಳನ್ನೂ ಟ್ರ್ಯಾಕ್ ಮಾಡಲು ಈ ಆಪ್ ಸಹಾಯ ಮಾಡಲಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆಪ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಆಪ್ ಮೂಲಕ ಪ್ರಯಾಣಿಕರು ಬಸ್ ಎಲ್ಲಿದೆ ಯಾವ ಸಮಯಕ್ಕೆ ಬರಲಿದೆ ಎಂಬುದನ್ನು ತಿಳಿಯಬಹುದಾಗಿದೆ.
ಬಿಎಂಟಿಸಿ ಮೊಬೈಲ್ ಆಪ್ ಉಪಯೋಗ ಮತ್ತು ವಿಶೇಷತೆ
ಬಿಎಂಟಿಸಿ ಮೊಬೈಲ್ ಆಪ್ ನಿಂದ ಬಳಕೆದಾರರು ನೈಜ ಸಮಯದಲ್ಲಿ ಬಸ್ ಟ್ರ್ಯಾಕ್ ಮಾಡಲು ಸಹಾಯ ಆಗಲಿದೆ. ಪ್ರಯಾಣವನ್ನು ತೊಂದರೆಯಿಂದ ಮುಕ್ತವಾಗಿಸಲು ಇತರ ಆಯ್ಕೆ ಸಹ ಇದೆ. ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿ ಲಭ್ಯವಿರಲಿದೆ. ಬಿಎಂಟಿಸಿ ಎಲ್ಲ ಬಸ್ಸುಗಳ ಮಾಹಿತಿ ಈ ಅಪ್ಲಿಕೇಶನ್ ನಲ್ಲಿ ಇದ್ದು, ಎಲ್ಲಾ ಬಸ್ಸುಗಳ ಮಾಹಿತಿಯನ್ನ ಪ್ರಯಾಣಿಕರು ತಿಳಿದುಕೊಳ್ಳಬಹುದು.
ನಮ್ಮ ಬಿಎಂಟಿಸಿ ಆಪ್
ನಮ್ಮ ಬಿಎಂಟಿಸಿ ಆಪ್ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಲಭ್ಯವಿದೆ. ಇನ್ನು ಭಾಷೆ ಬದಲಾಯಿಸಲು ಇದರಲ್ಲಿ ಸರಳವಾದ ಆಯ್ಕೆಯನ್ನು ಸಹ ನೀಡಲಾಗಿದೆ. ಸೈನ್ ಇನ್ ಮಾಡುವುದರೊಂದಿಗೆ ಅಥವಾ ಗೆಸ್ಟ್ ಯೂಸರ್ ಆಗಿಯೂ ಬಳಸಬಹುದು.
ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ಎಸ್ ಓ ಎಸ್ ವೈಶಿಷ್ಟ್ಯ ಎಂಬೆಡ್ ಮಾಡಲಾಗಿದೆ. ಬಿಎಂಟಿಸಿ ಸಹಾಯವಾಣಿಗಳಿಗೆ ಸಂರ್ಕಿಸಲು ಆಪ್ ನಲ್ಲಿ ಲಿಂಕ್ ಸಹ ನೀಡಲಾಗಿದೆ. ವಾಹನ ನಿಲುಗಡೆ ವಿಶ್ರಾಂತಿ ಕೊಠಡಿ, ಎಟಿಎಂ ಗಳ ಬಗ್ಗೆಯೂ ಮಾಹಿತಿ ಪಡೆಯಬಹುದು.