Electric Scooter: ದೇಶಕ್ಕೆ ಬಂತು ಇನ್ನೂಂದು BMW ಬೈಕ್, 90 ಕೀ ಮೀ ಮೈಲೇಜ್ ಮತ್ತು ಬೆಲೆ ಕೊಂಚ ಅಧಿಕ.
ದೇಶಿಯ ಮಾರುಕಟ್ಟೆಗೆ ಲೈಸೆನ್ಸ್ ಬೇಕಿರದ BMW ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.
BMW Electric Scooter: ದೇಶದ ಪ್ರತಿಷ್ಠ ಕಂಪೆನಿಯಾದ BMW ಇದೀಗ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ನ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು ಒಂದೇ ಬ್ಯಾಟರಿ ಪ್ಯಾಕ್ ನೊಂದಿಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಸದ್ಯದಲ್ಲೇ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡುವ ಮೂಲಕ ಈ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಸಂಚಲನ ಮೂಡಿಸಲಿದೆ.
ಲೈಸೆನ್ಸ್ ಬೇಕಿರದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
BMW ಎಲೆಕ್ಟ್ರಿಕ್ ಸ್ಕೂಟರ್ ನ ಗರಿಷ್ಟ ವೇಗ ಗಂಟೆಗೆ 45 ಕಿಲೋಮೀಟರ್ ಆಗಿದೆ. ಹೀಗಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ ಚಲಾಯಿಸಲು ಯಾವುದೇ ಪರವಾನಗಿಯ ಅಗತ್ಯ ಇರುವುದಿಲ್ಲ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ 25 ಕಿಲೋಮೀಟರ್ ಗಿಂತ ಕಡಿಮೆ ವ್ಯಾಪ್ತಿಯನ್ನು ಹೊಂದಿರುವ ಸ್ಕೂಟರ್ ಚಲಾವಣೆಗೆ ಲೈಸೆನ್ಸ್ ಅಗತ್ಯವಿರುವುದಿಲ್ಲ.
ಇನ್ನು BMW ce2 (BMW CE02) ಡ್ಯುಯಲ್ ಬ್ಯಾಟರಿ ಪ್ಯಾಕ್ ರೂಪಾಂತರವನ್ನು ಸಹ ಬಿಡುಗಡೆ ಮಾಡಲು ಸಜ್ಜಾಗಿದೆ. ಡ್ಯುಯಲ್ ಬ್ಯಾಟರಿ ಪ್ಯಾಕ್ ರೂಪಾಂತರದ ಈ ಸ್ಕೂಟರ್ 90 ಕಿಮೀ ವ್ಯಾಪ್ತಿಯನ್ನು ನೀಡಲಿದೆ. ಇದರಲ್ಲಿ ಅಳವಡಿಸಲಾಗಿರುವ ಮೋಟಾರ್ 15 ಎಚ್ ಪಿ ವರೆಗೆ ಪವರ್ ನೀಡಲಿದೆ. ಇದರಲ್ಲಿ ನಿಮಗೆ 1.5 kW ಚಾರ್ಜಿಂಗ್ ಕೇಬಲ್ ನೀಡಲಾಗಿದೆ, ಇದು 5 ಗಂಟೆ 12 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. ಇನ್ನು ಫಾಸ್ಟ್ ಚಾರ್ಜರ್ ನ ಮೂಲಕ ಕೇವಲ 3 ಗಂಟೆ 30 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.
BMW ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ
BMW ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ದುಬಾರಿಯಾಗಿದ್ದು ಸುಮಾರು 7 ಲಕ್ಷ ಮೌಲ್ಯದ್ದಾಗಿದೆ. ಈ ಸ್ಕೂಟರ್ 3 .25 ಇಂಚಿನ TFT ಪರದೆಯನ್ನು ಹೊಂದಿದೆ. ಸ್ಪೋರ್ಟಿ ಲುಕ್ ಮತ್ತು ಸಿಂಗಲ್ ಪೀಸ್ ಸೀಟ್ ಹೊಂದಿದ್ದು, ವಿಶೇಷ ವಿನ್ಯಾಸದ ಎಲ್ ಇಡಿಯನ್ನು ಕಾಣಬಹುಡಗಿದೆ. ಇನ್ನು ಕಮಣಿಯು ಈ ಸ್ಕೂಟರ್ ನ ಬಗ್ಗೆ ಹೆಚ್ಚಿನ ಮಾಹಿತಿಯ್ನು ಬಹಿರಂಗಪಡಿಸಿಲ್ಲ.ಸದ್ಯದಲ್ಲೇ BMW ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.