Ads By Google

Board Exam Update: 5, 8, ಮತ್ತು 9ನೇ ತರಗತಿಯ ಮಕ್ಕಳಿಗೆ ಗುಡ್ ನ್ಯೂಸ್, ಪರೀಕ್ಷಾ ನಿಯಮದಲ್ಲಿ ದೊಡ್ಡ ಬದಲಾವಣೆ

Ads By Google

Board Exam Cancelled For 5, 8, And 9th Students: 2024 -25 ಶೈಕ್ಷಣಿಕ ವರ್ಷದಲ್ಲಿ SSLC ಮತ್ತು ದ್ವಿತೀಯ PUC ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ನಡೆಸುವುದಲ್ಲದೆ ರಾಜ್ಯ ಪಠ್ಯಕ್ರಮ ಹೊಂದಿರುವ ಶಾಲೆಗಳ 5, 8, ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆಗಳನ್ನು ನಡೆಸುವಂತೆ ಆದೇಶ ಹೊರಡಿಸಲಾಗಿತ್ತು.

ಆದರೆ ಇದೀಗ 5, 8, ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ 5, 8, ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದೆ.

Image Credit: Varthabharati

5, 8, ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ವರ್ಷ ಬೋರ್ಡ್ ಪರೀಕ್ಷೆ ಇಲ್ಲ…!
ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ಮಕ್ಕಳ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ 2024-25ನೇ ಸಾಲಿನಲ್ಲಿ ಎಲ್ಲ ತರಗತಿಗಳಿಗೂ ಮೌಲ್ಯಮಾಪನ ಮುಂದುವರಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಈ ವರ್ಷದಲ್ಲಿ 5, 8, ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಇಲ್ಲ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಇನ್ನು 5, 8, ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಈ ವರ್ಷದಲ್ಲಿ ಬೋರ್ಡ್ ಪರೀಕ್ಷೆಯನ್ನು ಎದುರಿಸಬೇಕಾಗಿಲ್ಲ. ಕೇವಲ ಮೌಲ್ಯಮಾಪನ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸಬೇಕಾಗುತ್ತದೆ. 2024-25 ನೇ ಶೈಕ್ಷಣಿಕ ವರ್ಷದಲ್ಲಿ, ಕರ್ನಾಟಕ ರಾಜ್ಯ ಪಠ್ಯಕ್ರಮದ 1 ರಿಂದ 10 ನೇ ತರಗತಿಗಳಿಗೆ 2024-25 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಶೈಕ್ಷಣಿಕ ಮಾರ್ಗದರ್ಶಿಯನ್ನು ಉಲ್ಲೇಖಗಳ ಪ್ರಕಾರ ಬಿಡುಗಡೆ ಮಾಡಲಾಗಿದೆ.

Image Credit: Deccanherald

ಶಾಲಾ ಮಕ್ಕಳಿಗೆ ಹೊಸ ಯೋಜನೆ
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಸಂಭ್ರಮ ಶನಿವಾರ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ರಹಿತ ದಿನದ ಆಚರಣೆ ಬಗ್ಗೆ ಮಹತ್ವದ ಸುತ್ತೋಲೆ ಹೊರಡಿಸಿದೆ. ಪ್ರತಿ ತಿಂಗಳ ಮೂರನೇ ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಆದೇಶಿಸಲಾಗಿದೆ. ಮಕ್ಕಳಿಗೆ ಬ್ಯಾಗ್ ಹೊರೆಯಾಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಬ್ಯಾಗ್ ರಹಿತ ದಿನಾಚರಣೆಯನ್ನು ಆಚರಿಸಲು ಮಾಹಿತಿ ಹೊರಡಿಸಿದೆ.

2024 – 25 ನೇ ಸಾಲಿನಲ್ಲಿ ಪ್ರತಿ ತಿಂಗಳು 3 ನೇ ಶನಿವಾರ ಶಾಲಾ ಹಂತದಲ್ಲಿ ಸದರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿದ್ದು, ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡೈಲ್ ಗಳನ್ನೂ ಹಾಗು ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಗಳನ್ನು ಸಿದ್ದಪಡಿಸಲಾಗಿದೆ.

Image Credit: Bangladeshpost
Ads By Google
Nagarathna Santhosh

Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: 8 And 9th Students Board Exam Cancelled For 5 board exam for students board exam rules board exam update karnataka students students board exam

Recent Stories

  • Education
  • Headline
  • Information
  • Main News

Lakshmi Hebbalkar: ರಾಜ್ಯದ ಅಂಗನವಾಡಿ ಮಕ್ಕಳಿಗೆ ಗುಡ್ ನ್ಯೂಸ್, ಶೀಘ್ರದಲ್ಲೇ ಹೊಸ ಯೋಜನೆ ಜಾರಿ

Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…

2024-07-07
  • Entertainment
  • Headline
  • Information
  • Main News

Pavithra Gowda Friend: ಜೈಲಿನಲ್ಲಿ ದರ್ಶನ್ ಅವರನ್ನ ಭೇಟಿಯಾದ ಈ ಮಹಿಳೆ ಯಾರು ಗೊತ್ತಾ…?

Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…

2024-07-07
  • Business
  • Headline
  • Information
  • Main News
  • money
  • Regional

Pension Rule: ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರಿಗೆ ರಾತ್ರೋರಾತ್ರಿ ಹೊಸ ನಿಯಮ, ತಕ್ಷಣ ಈ ಕೆಲಸ ಮಾಡಿ.

New Rule For Pensioners: ಕೇಂದ್ರ ಮತ್ತು ರಾಜ್ಯ ಸರ್ಕಾರ ಆಗಾಗ ಸರ್ಕಾರೀ ನೌಕರರಿಗೆ ಹಾಗೆಯೆ ಪಿಂಚಣಿದಾರರಿಗೆ ಹೊಸ ಹೊಸ…

2024-07-07
  • Business
  • Headline
  • Information
  • Main News
  • money

RBI New Rule: HDFC, Axis ಮತ್ತು Yes ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್, RBI ಆದೇಶ.

RBI New Rule For Bank: ದೇಶದಲ್ಲಿ July 1 ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ನಿಯಮಗಳು ಬದಲಾಗಿವೆ.…

2024-07-07
  • Headline
  • Information
  • Main News
  • Press
  • Regional
  • Technology

Ev Ban: ಇನ್ಮುಂದೆ ಇಂತಹ ಎಲೆಕ್ಟ್ರಿಕ್ ವಾಹನಗಳನ್ನ ರಸ್ತೆಗೆ ತರುವಂತಿಲ್ಲ, ಹೊಸ ನಿಯಮ ಜಾರಿ

Ev Ban In Karnataka: ಜನಸಾಮನ್ಯರು ಸರ್ಕಾರಕ್ಕೆ ವಿವಿಧ ಬೇಡಿಕೆಯನ್ನು ಮನವಿ ಇಟ್ಟಿರುತ್ತಾರೆ. ಆದರೆ ಸರ್ಕಾರ ಜನಸಾಮನ್ಯರ ಬೇಡಿಕೆಗೆ ಹೆಚ್ಚಿನ…

2024-07-07
  • Entertainment
  • Headline
  • Information
  • Main News
  • Press
  • Regional

Darshan Sim Card Secret: ಬಯಲಾಯ್ತು ದರ್ಶನ್ ಬಳಸುತ್ತಿದ್ದ ಸಿಮ್ ಕಾರ್ಡ್ ಸೀಕ್ರೆಟ್, ದರ್ಶನ್ ಯಾರ ಹೆಸರಿನ ಸಿಮ್ ಕಾರ್ಡ್ ಬಳಸುತ್ತಿದ್ರು ಗೊತ್ತಾ…?

Darshan Sim Card Secret New Update: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಜುಲೈ 4…

2024-07-07