Board Exam: SSLC ಮತ್ತು PUC ಪರೀಕ್ಷೆ ನಿಯಮದಲ್ಲಿ ಬಹುದೊಡ್ಡ ಬದಲಾವಣೆ, ಕೇಂದ್ರ ಸರ್ಕಾರದ ಖಡಕ್ ಆದೇಶ.

SSLC ಮತ್ತು PUC ಪರೀಕ್ಷೆ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ.

Board Exams Twice A Year: ಸದ್ಯ 2023 -24 ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ವಿದ್ಯಾರ್ಥಿ ಜೀವನದಲ್ಲಿ SSLC ಹಾಗೂ PUC ಎಷ್ಟು ಮುಖ್ಯ ಎನ್ನುವುದು ಎಲ್ಲರಿಗು ತಿಳಿದೇ ಇದೆ. ವಿದ್ಯಾರ್ಥಿ ಜೀವನದಲ್ಲಿ SSLC ಹಾಗೂ PUC ಮುಖ್ಯ ಘಟ್ಟ ಎನ್ನಬಹುದು.

SSLC ಮತ್ತು PUC ಯಲ್ಲಿ ಉತ್ತಮ ಅಂಕವನ್ನು ಗಳಿಸಿದೆ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇದೀಗ ಕೇಂದ್ರ ಸರ್ಕಾರ SSLC ಹಾಗು PUC ವಿದ್ಯಾರ್ಥಿಗಳಿಗೆ ಒಂದು ಪ್ರಮುಖ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ.

Board Exam Twice A Year
Image Credit: NDTV

SSLC ಹಾಗೂ PUC ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ನೀಡಿದ ಕೇಂದ್ರ
ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಒಂದು ಪ್ರಮುಖವಾದ ಅವಕಾಶವನ್ನು ನೀಡಿದೆ. ಹೌದು ಇದೀಗ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು 10 ಮತ್ತು 12 ನೇ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಯನ್ನು ತೆಗೆದುಕೊಳ್ಳುವ ಆಯ್ಕೆಯನ್ನು ನೀಡಿದ್ದಾರೆ. ಈ ನಿರ್ಧಾರವು ಒಂದೇ ಅವಕಾಶದ ಭಯದಿಂದ ಉಂಟಾಗುವ ಒತ್ತಡವನ್ನು ನಿವಾರಿಸುವ ಗುರಿ ಹೊಂದಿದೆ.

ವರ್ಷಕ್ಕೆ 2 ಬಾರಿ ಬೋರ್ಡ್ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಲ್ಲ
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು PTI ಗೆ ನೀಡಿದ ಸಂದರ್ಶನದಲ್ಲಿ ಡಮ್ಮಿ ಶಾಲೆಗಳ ವಿಷಯವನ್ನು ನಿರ್ಲಕ್ಷಿಸುವುದಿಲ್ಲ ಹಾಗೆ ಅದರ ಬಗ್ಗೆ ಗಂಭೀರ ಚರ್ಚೆ ನೆಡೆಸುವ ಸಮಯ ಬಂದಿದೆ ಎಂದಿದ್ದಾರೆ. ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ಆಯ್ಕೆಯನ್ನು ನೀಡಲಾಗುತ್ತದೆ.

SSLC And PUC Exam Latest Update
Image Credit: Newindianexpress

ಇದು ಸಂಪೂರ್ಣವಾಗಿ ಐಚ್ಚಿಕವಾಗಿರುತ್ತದೆ, ಯಾವುದೇ ರೀತಿಯ ಒತ್ತಾಯ ಇರುದಿಲ್ಲ. ವಿದ್ಯಾರ್ಥಿಯು ತಾನು ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ ಮತ್ತು ಮೊದಲ ಸೆಟ್ ಪರೀಕ್ಷೆಯಲ್ಲಿ ಸ್ಕೋರ್‌ನಿಂದ ತೃಪ್ತನಾಗಿದ್ದೇನೆ ಎಂದು ಭಾವಿಸಿದರೆ ಅವನು ಮುಂದಿನ ಪರೀಕ್ಷೆಗೆ ಹಾಜರಾಗದಿರಲು ಆಯ್ಕೆ ಮಾಡಬಹುದು. ಒಂದೇ ಅವಕಾಶದ ಭಯದಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ ಎಂದು ಪ್ರಧಾನ್ ಹೇಳಿದ್ದಾರೆ.

Join Nadunudi News WhatsApp Group

ಹೊಸ ಪಠ್ಯಕ್ರಮ ಚೌಕಟ್ಟಿಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆ
ಹೊಸ ಪಠ್ಯಕ್ರಮ ಚೌಕಟ್ಟನ್ನು ಘೋಷಣೆ ಮಾಡಿದ ನಂತರ ಶಿಕ್ಷಣ ಸಚಿವರು ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದರು. ವಿದ್ಯಾರ್ಥಿಗಳಿಂದ ಈ ಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಹಾಗೆ ಈ ವ್ಯವಸ್ಥೆಯನ್ನು 2024 ರಿಂದ ಪರಿಚಯಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

Join Nadunudi News WhatsApp Group