BOB New Rule : ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಇದ್ದವರಿಗೆ ಬೇಸರದ ಸುದ್ದಿ, ಮುಂದಿನ 6 ಘಂಟೆ ಈ ಸೇವೆ ಲಭ್ಯವಿಲ್ಲ.

ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಈ ಸೇವೆ ಆರು ಘಂಟೆಗಳ ಕಾಲ ಲಭ್ಯವಿಲ್ಲ.

Bank Of Baroda RTGS: ದೇಶದ ಪ್ರತಿಷ್ಠಿತ ಬ್ಯಾಂಕ್  ನಲ್ಲಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ.ಬ್ಯಾಂಕ್ ಖಾತೆಯನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಬ್ಯಾಂಕ್ ನ ನಿಯಮಾವಳಿಗಳ ಬಗೆ ತಿಳಿಯುವುದು ಅಗತ್ಯ.

ದೇಶದ ಎಲ್ಲ ಸರ್ಕಾರೀ ಹಾಗೂ ಖಾಸಗಿ ಬ್ಯಾಂಕ್ ಗಳು ತಮ್ಮ ಬ್ಯಾಂಕ್ ನ ನಿಯಮಗಳನ್ನು ಆಗಾಗ ಬದಲಿಸುತ್ತಾ ಇರುತ್ತದೆ. ಇತ್ತೀಚೆಗಂತೂ RBI ಬ್ಯಾಂಕ್ ಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ವಹಿಸಿದ್ದು ಬ್ಯಾಂಕುಗಳು ಹೆಚ್ಚಿನ ಜಾಗ್ರತೆ ವಹಿಸುತ್ತಿದೆ.

Bank Of Baroda E-Auction
Image Credit: Abplive

ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಇದ್ದವರಿಗೆ ಬೇಸರದ ಸುದ್ದಿ
ಸದ್ಯ ದೇಶದ ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಆಗಿರುವ Bank Of Baroda ಇದೀಗ ಹೊಸ ನಿಯಮವನ್ನು ಹೊರಡಿಸಿದೆ. ಈ ಮೂಲಕ ಬ್ಯಾಂಕ್ ಖಾತೆದಾರರಿಗೆ ಬೇಸರದ ಸುದ್ದಿಯನ್ನು ನೀಡಿದೆ. BOB ಬ್ಯಾಂಕ್ ಗ್ರಾಹಕರು ಬ್ಯಾಂಕ್ ನ ಈ ಸೌಲಭ್ಯವನ್ನು ಸ್ವಲ್ಪ ಸಮಯದವರೆಗೆ ಪಡೆಯಲು ಸಾಧ್ಯವಿಲ್ಲ. ನೀವು BOB ಗ್ರಾಹಕರಾಗಿದ್ದರೆ ಈ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಮುಂದಿನ 6 ಘಂಟೆ BOB ಗ್ರಾಹಕರಿಗೆ ಈ ಸೇವೆ ಲಭ್ಯವಿಲ್ಲ
ಸದ್ಯ BOB ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. Bank Of Baroda (BOB) ಗ್ರಾಹಕರು ನಿಗದಿತ ಸಿಸ್ಟಮ್ ನಿರ್ವಹಣೆಯಿಂದಾಗಿ RTGS ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಆದರೆ ಗ್ರಾಹಕರು ನಿಧಿ ವರ್ಗಾವಣೆಗಾಗಿ ಇತರ ಡಿಜಿಟಲ್ ಚಾನೆಲ್‌ ಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.

RBI New Rule For BOB
Image Credit: Moneylife

RTGS ಎಂದರೆ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಮತ್ತು ಇದು ಮತ್ತೊಂದು ಬ್ಯಾಂಕ್‌ ನ ಖಾತೆದಾರರ ಖಾತೆಗೆ ಹಣವನ್ನು ತಕ್ಷಣವೇ ವರ್ಗಾಯಿಸುವ ವ್ಯವಸ್ಥೆಯಾಗಿದೆ. ಈ ನಿಧಿ ವರ್ಗಾವಣೆಯು ನೈಜ ಸಮಯದ ಆಧಾರದ ಮೇಲೆ ನಡೆಯುತ್ತದೆ. ಹೀಗಾಗಿ BOB ಗ್ರಾಹಕರಿಗೆ RTGS ಸೇವೆಯು ಮುಂದಿನ ಆರು ಗಂಟೆಯವರೆಗೆ ಲಭ್ಯವಾಗುದಿಲ್ಲ. ಗರ್ಹಕರು ಈ ಸೇವೆಯಿಂದ ವಂಚಿತರಾಗುತ್ತಾರೆ.

Join Nadunudi News WhatsApp Group

Bank Of Baroda ಟ್ವೀಟ್
ಬ್ಯಾಂಕ್ ಆಫ್ ಬರೋಡಾ ಟ್ವೀಟ್‌ ನಲ್ಲಿ ಈ ಬಗ್ಗೆ ಮಾಹಿತಿ ತಿಳಿಸಿದೆ. ‘ನಿಗದಿತ ಸಿಸ್ಟಮ್ ನಿರ್ವಹಣೆ ಚಟುವಟಿಕೆಯಿಂದಾಗಿ ನವೆಂಬರ್ 19 2023 ರಂದು ರಾತ್ರಿ 10 ರಿಂದ Navember 20 2023 ರಂದು ಬೆಳಿಗ್ಗೆ 4 ಗಂಟೆಯವರೆಗೆ Real Time Gross Settlement (RTGS) ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ನಿಧಿ ವರ್ಗಾವಣೆಗಾಗಿ NEFT, IMPS ಮತ್ತು UPI ನಂತಹ ಇತರ ಡಿಜಿಟಲ್ ಚಾನಲ್‌ ಗಳನ್ನು ಬಳಸಲು ನಾವು ನಮ್ಮ ಗ್ರಾಹಕರನ್ನು ವಿನಂತಿಸುತ್ತೇವೆ’ ಎಂದು ಟ್ವೀಟ್ ನ ಮೂಲಕ ಗ್ರಾಹಕರಿಗೆ ತಿಳಿಸಿದೆ.

Join Nadunudi News WhatsApp Group