Urvashi Rautela In Kantara 2: ಕಾಂತಾರ 2 ನಲ್ಲಿ ಐರಾವತ ಚಿತ್ರದ ಬೆಡಗಿ ಊರ್ವಶಿ ರೌಟೇಲಾ, ರಿಷಬ್ ಜೊತೆಗಿನ ಫೋಟೋ ಹಂಚಿಕೊಂಡ ನಟಿ.

Rishab Shetty And Urvashi Rautela: ದೇಶದೆಲ್ಲೆಡೆ ಪ್ರಸಿದ್ದಿ ಪಡೆದ ಕಾಂತಾರ (Kantara) ಇದೀಗ ಇನ್ನೊಂದು ಭಾಗದ ತಯಾರಿಯಲ್ಲಿದೆ. ಕಾಂತಾರ 2 ಚಿತ್ರವನ್ನು ಸಿನಿಪ್ರಿಯರು ಕಾಯುತ್ತಿದ್ದಾರೆ.

ಇನ್ನು ರಿಷಬ್ ಶೆಟ್ಟಿ (Rishab Shetty) ಕಾಂತಾರ 2 ಚಿತ್ರದ ಕೆಲಸ ಶುರು ಮಾಡಿದ್ದಾರೆ. ಇದೀಗ ಕಾಂತಾರ 2 (Kantara 2) ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಕಾಂತಾರ 2 ಚಿತ್ರದಲ್ಲಿ ಬಾಲಿವುಡ್ ನಟಿಯ ಆಗಮನ ಆಗಿದೆ ಎನ್ನಲಾಗುತ್ತಿದೆ.

Bollywood actress Urvashi Rautela seen with Rusiab Shetty
Image Credit: instagram

ರಿಷಬ್ ಶೆಟ್ಟಿ ಕಾಂತಾರ 2
ಕನ್ನಡದ ಹೆಮ್ಮೆಯ ಕಾಂತಾರ ಚಿತ್ರ ವೀಕ್ಷಿಸಿದ ಸಿನಿಪ್ರಿಯರಲ್ಲಿ ಕಾಂತಾರ 2 ಬಗ್ಗೆ ಹೆಚ್ಚಿನ ನಿರೀಕ್ಷೆ ಇದ್ದಿದ್ದವು. ಇನ್ನು ಕಾಂತಾರ ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ  ಕಾಂತಾರ 2 ಬಗ್ಗೆ ಮಾಹಿತಿ ನೀಡಿದ್ದರು.

ಕಾಂತಾರ 2 ನೀವು ನೋಡಿದ್ದೀರಿ ಇನ್ನು ಕಾಂತಾರ ಪಾರ್ಟ್ 1 ಬರಲಿದೆ. ಶೀಘ್ರವೇ ಕೆಲಸ ಶುರು ಮಾಡುತ್ತೇವೆ ಎಂದು ರಿಷಬ್ ಶೆಟ್ಟಿ ಹೇಳಿದ್ದರು. ಇದೀಗ ಕಾಂತಾರ 2 ಚಿತ್ರದಲ್ಲಿ ಹೊಸ ಹೊಸ ಪಾತ್ರಧಾರಿಗಳ ಆಗಮನ ಆಗುತ್ತಿದೆ. ಈ ಸಾಲಿನಲ್ಲಿ ಬಾಲಿವುಡ್ ನಟಿ ಸೇರಿಕೊಂಡಿದ್ದಾರೆ.

Famous Bollywood actress Urvashi Rautela will act in Kantara 2
Image Credit: instagram

ಕಾಂತಾರ 2 ನಲ್ಲಿ ಬಾಲಿವುಡ್ ನಟಿ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಸಿದ್ದಿ ಪಡೆದಿತ್ತು. ಕಾಂತಾರ ಚಿತ್ರಾ ಅದೆಷ್ಟೋ ಸಿನಿಮಾಗಳ ದಾಖಲೆ ಮುರಿದಿದೆ. ಇದೀಗ ರಿಷಬ್ ಶೆಟ್ಟಿ ಕಾಂತಾರ 2 ಚಿತ್ರೀಕರಣ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಕಾಂತಾರ 2 ನಲ್ಲಿ ಬಾಲಿವುಡ್ ನಟಿಯ ಆಗಮನದ ಬಗ್ಗೆ ಸುಳಿವು ಸಿಕ್ಕಿದೆ.

Join Nadunudi News WhatsApp Group

Actress Urvashi Rautela hinted to act in Kantara 2
Image Credit: instagram

ಕಾಂತಾರ 2 ನಲ್ಲಿ ಐರಾವತ ಚಿತ್ರದ ಬೆಡಗಿ ಊರ್ವಶಿ ರೌಟೇಲಾ (Urvashi Rautela)
ಕಾಂತಾರ 2 ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದಲ್ಲಿ ನಟಿಸಿರುವ ನಟಿ ಊರ್ವಶಿ ರೌಟೇಲಾ ನಟಿಸಲಿದ್ದಾರೆ. ಈ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ರಿಷಬ್ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

Urvashi Rautela shared a photo with Rishabh Shetty on Instagram
Image Credit: instagram

ರಿಷಬ್ ಜೊತೆಗಿನ ಫೋಟೋ ಹಂಚಿಕೊಂಡ ನಟಿ
ಕಾಂತಾರ 2 ಎಂಬ ಹ್ಯಾಶ್ ಟ್ಯಾಗ್ ಜೊತೆಗೆ ರಿಷಬ್ ಹೆಸರು ಮತ್ತು ಹೊಂಬಾಳೆ ಫಿಲ್ಮ್ಸ್ ಅನ್ನು ನಮೂದಿಸಿ, ಕಾಂತಾರ 2 ಲೋಡಿಂಗ್ ಎಂದು ರಿಷಬ್ ಶೆಟ್ಟಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇನ್ನು ಕಾಂತಾರ 2 ಚಿತ್ರೀಕರಣವನ್ನು ಜೂನ್ ತಿಂಗಳಿಂದ ಆರಂಭಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇನ್ನು ಸಿನಿಪ್ರಿಯರು ಕಾಂತಾರ ಮುಂದಿನ ಭಾಗದ ನಿರೀಕ್ಷೆಯಲ್ಲಿದ್ದಾರೆ. ಊರ್ವಶಿ ರೌಟೇಲಾ ಕಾಂತಾರ 2 ನಲ್ಲಿ ಯಾವ ಪಾತ್ರ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group