ಮನೆಯಲ್ಲಿ ವಿದ್ಯುತ್ ಬಳಸುವ ಮತ್ತು ಬಳಸದಿರುವ ಎಲ್ಲರಿಗೂ ಬಂಪರ್ ಸಿಹಿಸುದ್ದಿ ನೀಡಿದ ಬೊಮ್ಮಾಯಿ, ಬಂದಿದೆ ಬೆಳಕು ಯೋಜನೆ.
ನಮ್ಮ ರಾಜ್ಯ ಸರ್ಕಾರ ಈಗಾಗಲೇ ಹಲವು ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಗಳ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ದೇಶದ ಪ್ರತಿಯೊಬ್ಬರ ಮನೆಗೆ ಬೆಳಕು ನೀಡುವ ಉದ್ದೇಶದಿಂದ ಈಗಾಗಲೇ ಹಲವು ಯೋಜನೆಯನ್ನ ಜಾರಿಗೆ ತರಲಾಗಿದ್ದು ಈಗಲೂ ಅನೇಕ ಕುಟುಂಬಗಳು ಮನೆಯಲ್ಲಿ ವಿದ್ಯುತ್ ಬೆಳಕು ಇಲ್ಲದೆ ಜೀವನವನ್ನ ಸಾಗಿಸುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಕೆಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಇದ್ದುಕೂಡ ಸರಿಯಾಗಿ ವಿದ್ಯುತ್ ಸರಬರಾಜು ಆಗದೆ ಇರುವುದು ಕೂಡ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಬಹುದು.
ಇನ್ನು ಈಗ ರಾಜ್ಯದ ಜನರಿಗೆ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಬಂಪರ್ ಗುಡ್ ನ್ಯೂಸ್ ನೀಡಿದ್ದು ರಾಜ್ಯದ ಜನರಿಗಾಗಿ ಬೆಳಕು ಯೋಜನೆಯನ್ನ ಜಾರಿಗೆ ತಂದಿದ್ದಾರೆ. ಹಾಗಾದರೆ ಏನಿದು ಬೆಳಕು ಯೋಜನೆ ಮತ್ತು ಈ ಯೋಜನೆಯ ಅಡಿಯಲ್ಲಿ ಜನರಿಗೆ ಏನೇನು ಲಾಭ ಸಿಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ರೈತರಿಗೆ ಹಾಗೂ ಬಡ ಕುಟುಂಬಗಳಿಗೆ ಬೆಳಕು ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ.
ಗುರುತಿನ ಚೀಟಿ ಹೊಂದಿದ ತೋಟ ಪಟ್ಟಿ ಮನೆಗಳು, ಹೊರವಲಯದ ಮನೆಗಳು, ಹಾಗೂ ವಿದ್ಯುತ್ ಸಂಪರ್ಕ ಇಲ್ಲದ ಪ್ರತಿ ಮನೆಗಳಿಗೆ ಬೆಳಕು ಯೋಜನೆ ಮೂಲಕ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಇನ್ನು ಈ ಯೋಜನೆಯ ಅಡಿಯಲ್ಲಿ ರೈತರ ಪಂಪ್ ಸೆಟ್, ರೈತರ ಮನೆಗಳ ವಿದ್ಯುತ್, ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. ಇನ್ನು ಈ ಯೋಜನೆಯ ಅಡಿಯಲ್ಲಿ ಬೀದಿ ಕಂಬಗಳು, ವಿದ್ಯುತ್ ಪರಿವರ್ತಕ ದುರಸ್ತಿ ಹಾಗೂ ಯಾವುದೇ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಂದು ಹೇಳಿದರು.
ಇನ್ನು ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಿಸುವವರು ಗ್ರಾಮ ಪಂಚಾಯತಿಯಲ್ಲಿ ಎನ.ಓ.ಸಿ ಪಡೆಯದೇ ವಿಧ್ಯುತ ಸಂಪರ್ಕ ಒದಗಿಸುವಂತಹ ಮಹತ್ತರ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಇನ್ನು ರೈತರ ಹೊಲಗಳಲ್ಲಿರುವ ಟಿ.ಸಿ. ಸುಟ್ಟುಹೋದರೆ ಕೇವಲ ಇಪ್ಪತ್ತನಾಲ್ಕು ಗಂಟೆಯಲ್ಲಿ ಬದಲಾಯಿಸುವ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿದ್ದು. ಇನ್ನು ಈ ಯೋಜನೆಯ ಅಡಿಯಲ್ಲಿ ಬಡವರ ಮತ್ತು ರೈತರ ಮನೆಗಳಲ್ಲಿ ವಿದ್ಯುತ್ ಹಾಳಾದರೆ ದಿನದ 24 ಘಂಟೆಯಲ್ಲಿ ಅದನ್ನ ಸರಿ ಮಾಡಿಕೊಡಲಾಗುತ್ತದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು. ಸ್ನೇಹಿತರೆ ಬೆಳಕು ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.