ಮಾರುಕಟ್ಟೆಗೆ ಬಂತು ಬೂಮ್ ಎಲೆಕ್ಟ್ರಿಕ್ ಸ್ಕೂಟರ್, ಒಮ್ಮೆ ಚಾರ್ಜ್ ಮಾಡಿದರೆ ದಿನಪೂರ್ತಿ ಚಲಿಸಬಹುದು, ಬೆಲೆ ತುಂಬಾ ಕಡಿಮೆ.

ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಹೌದು ಪೆಟ್ರೋಲ್ ಮತ್ತು ಡೀಸೆಲ್ ಗಗನಕ್ಕೆ ಏರಿದ ಬೆನ್ನಲ್ಲೇ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದು ಜನರಕ್ ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚು ಹೆಚ್ಚು ಖರೀದಿ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಈಗ ಹಲವು ಕಂಪನಿಗಳ ಎಲೆಕ್ಟ್ರಿಕ್ ವಾಹನಗಳು ಚಾಲ್ತಿಯಲ್ಲಿ ಇದ್ದು ಕೆಲವು ವಾಹನಗಳು ಜನರ ಮನವನ್ನ ತಮ್ಮತ್ತ ಸೆಳೆಯುವಲ್ಲಿ ಯಶಸ್ಸನ್ನ ಸಾಧಿಸಿದೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಈಗ ಇನ್ನೊಂದು ಅತೀ ಕಡಿಮೆ ಬೆಲೆಯ ಅತೀ ಹೆಚ್ಚು ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದ್ದು ಜನರು ಈ ಸ್ಕೂಟರ್ ಗೆ ಫುಲ್ ಫಿದಾ ಆಗಿದ್ದಾರೆ ಎಂದು ಹೇಳಬಹುದು.

ಹಾಗಾದರೆ ಈ ಸ್ಕೂಟರ್ ಯಾವುದು ಮತ್ತು ಇದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಬೂಮ್‌ ಮೋಟಾರ್ ಸಂಸ್ಥೆಯು ಹೊಸ ಕಾರ್ಬೆಟ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಬಿಡುಗಡೆ ಮಾಡಿದೆ. ಬೂಮ್‌ ಮೋಟಾರ್ ಸಂಸ್ಥೆಯು 2.3ಕಿಲೋ ವ್ಯಾಟ್‌ ಮತ್ತು 4.6 ಕಿಲೋ ವ್ಯಾಟ್‌ ಬ್ಯಾಟರಿ ಹೊಂದಿರುವ ಎರಡು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ.

Bhoom eletric

ಇನ್ನು 2.3 ಕಿಲೋ ವ್ಯಾಟ್‌ ಬ್ಯಾಟರಿ ಹೊಂದಿರುವ ಸ್ಕೂಟರ್‌ ಒಮ್ಮೆ ಪೂರ್ತಿ ಚಾರ್ಜ್‌ ಆದರೆ 200 ಕಿಲೋ ಮೀಟರ್ ಚಲಿಸುತ್ತದೆ ಎಂದು ಸ್ಕೂಟರ್ ಕಂಪನಿ ಹೇಳಿಕೊಂಡಿದೆ. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, 2.3 ಕಿಲೋ ವ್ಯಾಟ್‌ ಬ್ಯಾಟರಿ ಹೊಂದಿರುವ ಸ್ಕೂಟರ್‌ ನ ಬೆಲೆ 89,999 ರೂಪಾಯಿ ಆಗಿದೆ. ಇನ್ನು ಈ ಸ್ಕೂಟರ್ ನ ವಿಶೇಷತೆ ಏನು ಅಂದರೆ, ಈ ಸ್ಕೂಟರ್‌ ಅನ್ನು ಮನೆಯ ಯಾವುದೇ ಚಾರ್ಜಿಂಗ್‌ ಸ್ಲಾಟ್‌ ಮೂಲಕ ಚಾರ್ಜ್‌ ಮಾಡಬಹುದು ಎಂದೂ ಸಂಸ್ಥೆ ತಿಳಿಸಿದೆ.

ಇನ್ನು 4.6 ಕಿಲೋ ವ್ಯಾಟ್‌ ಬ್ಯಾಟರಿ ಹೊಂದಿರುವ ಸ್ಕೂಟರ್ ನ ಬೆಲೆ ಇನ್ನು ನಿಗದಿಯಾಗಿಲ್ಲ ಮತ್ತು ಇನ್ನೇನು ಕೆಲವೇ ದಿನಗಳಲ್ಲಿ ಇದರ ಬೆಲೆ ನಿಗದಿ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಇತರೆ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಕೆ ಮಾಡುವುದಾದರೆ ಈ ಸ್ಕೂಟರ್ ನ ಬೆಲೆ ಕೊಂಚ ಕಡಿಮೆ ಎಂದು ಹೇಳಬಹುದು. ಪೆಟ್ರೋಲ್ ಬೆಲೆ ಏರಿಕೆ ಆಗುತ್ತಿರುವ ಈ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಬಹಳ ಮಾರಾಟ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾಮುಖ್ಯತೆಯನ್ನ ಹೊಂದಿರುವ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರಲಿದೆ ಎಂದು ಹೇಳಬಹುದು. ಸ್ನೇಹಿತರೆ ಈ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ವಾಹನ ಪ್ರಿಯರಿಗೆ ತಲುಪಿಸಿ.

Join Nadunudi News WhatsApp Group

Bhoom eletric

Join Nadunudi News WhatsApp Group