Boult: 7 ದಿನ ಚಾರ್ಜ್ ಮಾಡುವ ಅಗತ್ಯವಿಲ್ಲ, 1500 ರೂಪಾಯಿಗೆ ಆಕರ್ಷಕ ಸ್ಮಾರ್ಟ್ ವಾಚ್ ಲಾಂಚ್.

ಒಮ್ಮೆ ಚಾರ್ಜ್ ಮಾಡಿದರೆ ಒಂದು ವಾರದ ತನಕ ಬಳಕೆ ಮಾಡಬಹುದಾದ ನೂತನ ಸ್ಮಾರ್ಟ್ ವಾಚ್.

Boult Mirage Smart Watch: ಸದ್ಯ ಮಾರುಕಟ್ಟೆಯಲ್ಲಿ Smart Watch ಗಳ ಟ್ರೆಂಡ್ ಇನ್ನು ಕಡಿಮೆ ಆಗಿಲ್ಲ. ಹೆಚ್ಚಿನ ಜನರು ಸ್ಮಾರ್ಟ್ ವಾಚ್ ಗಳನ್ನೂ ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಸ್ಮಾರ್ಟ್ ವಾಚ್ ಗಳು ಎಂಟ್ರಿ ಕೊಟ್ಟಿರುವ ಕಾರಣ ಸಾಮಾನ್ಯ ವಾಚ್ ಗಳು ಮೂಲೆಗುಂಪಾಗಿದೆ ಎನ್ನಬಹುದು. ಸದ್ಯ ಇದೀಗ ದೇಶದ ಜನಪ್ರಿಯ ಬ್ರಾಂಡ್ ಆಗಿರುವ BOULT ತನ್ನ ನೂತನ ಸ್ಮಾರ್ಟ್ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್ ವಾಚ್ ನ ಸಂಪೂರ್ಣ ವಿವರ ಇಲ್ಲಿದೆ.

boat mirage smartwatch review
Image Credit: Indianews

Boult Mirage Smart Watch
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ Boult Mirage Smart Watch ಪರಿಚಯವಾಗಿದೆ. ಈ Boult Mirage Smart Watch ವಿಶೇಷವಾಗಿ ಬ್ಲೂಟುಥ್ ಕರೆಯನ್ನು ಬೆಂಬಲಿಸಿದ್ದು, ಹೆಚ್ಚಿನ ಫೀಚರ್ ಅನ್ನು ಹೊಂದಿದೆ. ಇನ್ನು Boult Mirage Smart Watch ಭಾರತದಲ್ಲಿ 1,799 ರೂ.ಗೆ ಲಭ್ಯವಾಗಲಿದೆ. ಆದರೆ ಲಾಂಚ್ ಆಫರ್‌ ನ ವಿಶೇಷಕ್ಕಾಗಿ ಕಂಪನಿಯ ಅಧಿಕೃತ ವೆಬ್‌ ಸೈಟ್‌ ನಲ್ಲಿ 1,599 ರೂ. ಬೆಲೆಗೆ ಖರೀದಿಸಬಹುದು. ಬ್ಲೂ, ಐನಾಕ್ಸ್ ಸ್ಟೀಲ್ ಮತ್ತು ಕೋಲ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ನೀವು Boult Mirage Smart Watch ಅನ್ನು ಖರೀದಿಸಬಹುದು.

Boult Mirage ಸ್ಮಾರ್ಟ್ ವಾಚ್ ವಿಶೇಷತೆ
Boult Mirage Smart Watch 1.39 ಇಂಚಿನ TFT LCD ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 360 × 360 ಪಿಕ್ಸೆಲ್ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಡಿಸ್ಪ್ಲೇ 500 ನಿಟ್ಸ್ ಬ್ರೈಟ್ನೆಸ್ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್ ವಾಚ್ ವೃತ್ತಾಕಾರದ ಡಯಲ್ ಅನ್ನು ಹೊಂದಿದೆ ಮತ್ತು ಮೆಟಾಲಿಕ್ ಬ್ಯಾಂಡ್‌ ಗಳೊಂದಿಗೆ ಎರಡು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ವಿಶೇಷವಾಗಿ ಬ್ಲೂಟೂಥ್ ಕರೆಗಾಗಿ ಅಂತರ್ಗತ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಹೊಂದಿದೆ.ಸ್ಮಾರ್ಟ್‌ವಾಚ್ ಮೂಲಕವೇ ಸ್ಮಾರ್ಟ್‌ ಫೋನ್ ಕರೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

boat mirage smartwatch
Image Credit: Cashify

7 ದಿನ ಚಾರ್ಜ್ ಮಾಡುವ ಅಗತ್ಯ ಇಲ್ಲ
ಸ್ಮಾರ್ಟ್ ವಾಚ್ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, BP ಟ್ರ್ಯಾಕಿಂಗ್, ನಿದ್ರೆ ಮಾನಿಟರಿಂಗ್ ಮತ್ತು ಸ್ತ್ರೀ ಋತುಚಕ್ರದ ಟ್ರ್ಯಾಕಿಂಗ್‌ ನಂತಹ ಪ್ರಮುಖ ಆರೋಗ್ಯ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್ ವಾಚ್ 120 ಕ್ರೀಡಾ ವಿಧಾನಗಳು ಮತ್ತು ಸ್ಮಾರ್ಟ್ ಅಧಿಸೂಚನೆ ಬೆಂಬಲವನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್ ವಾಚ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP67 ರೇಟಿಂಗ್ ಹೊಂದಿದೆ. ಈಗ ಸ್ಮಾರ್ಟ್ ವಾಚ್ ಆಪಲ್ ಹೆಲ್ತ್ ಮತ್ತು ಗೂಗಲ್ ಫಿಟ್‌ ಗೆ ಹೊಂದಿಕೊಳ್ಳುತ್ತದೆ. ಈ ಸ್ಮಾರ್ಟ್ ವಾಚ್ ಒಮ್ಮೆ ಚಾರ್ಜ್ ಮಾಡಿದರೆ 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group