ರಾಜ್ಯದಲ್ಲಿ ಲಕ್ಷಾಂತರ ಜನರು ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುವುದು. ಹೌದು 60 ವರ್ಷ ಮೇಲ್ಪಟ್ಟ ವೃದ್ದರು ವೃದ್ದಾಪ್ಯ ವೇತನ, ವಿಧವೆಯರು ವಿಧವಾ ವೇತನ ಮತ್ತು ಅಂಗವಿಕಲರು ಮತ್ತು ವಿಕಲ ಚೇತನರು ಪ್ರತಿ ತಿಂಗಳು ಸರ್ಕಾರ ಪಿಂಚಣಿ ಯೋಜನೆಯಾದ ಸಂದ್ಯಾ ಸುರಕ್ಷಾ ಮತ್ತು ಇತರೆ ಯೋಜನೆಯ ಅಡಿಯಲ್ಲಿ ಪಿಂಚಣಿ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈಗ ಪ್ರತಿ ತಿಂಗಳು ಪಿಂಚಣಿ ಹಣವನ ಪಡೆಯುತ್ತಿರುವ ಬಿಪಿಎಲ್ ಕಾರ್ಡುದಾರರಿಗೆ ಶಾಕಿಂಗ್ ಸುದ್ದಿ ಬಂದಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಪಿಂಚಣಿ ಹಣ ರದ್ದಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಸೂಚನೆಯನ್ನ ನೀಡಿದೆ.
ಹಾಗಾದರೆ ಸರ್ಕಾರ ನೀಡಿರುವ ಆ ಆದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸರ್ಕಾರದ ಈ ಆದೇಶದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಸರ್ಕಾರದಿಂದ ವಿವಿಧ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಪಿಂಚಣಿ ಪಡೆದುಕೊಳ್ಳುವ ಯಾವುದೇ ವ್ಯಕ್ತಿಯ ವಾರ್ಷಿಕ ಆದಾಯ 38 ಸಾವಿರ ರೂಪಾಯಿಯ ಒಳಗೆ ಇರಬೇಕು ಮತ್ತು ಅದಕ್ಕಿಂತ ಜಾಸ್ತಿ ಇರುವ ವ್ಯಕ್ತಿ ಪ್ರತಿ ತಿಂಗಳು ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಈಗ ಸರ್ಕಾರದ ಯೋಜನೆಯನ್ನ ದುರುಪಯೋಗ ಮಾಡಿಕೊಳ್ಳುತ್ತಿರುವವರಿಗೆ ಸರಿಯಾದ ಪಾಠ ಕಲಿಸಲು ಸರ್ಕಾರ ಈಗ ನಿರ್ಧಾರವನ್ನ ಮಾಡಿದ್ದು ಹೊಸ ನಿಯಮಾವನಂ ಜಾರಿಗೆ ತಂದಿದೆ.
ಹೌದು ತಮ್ಮ ವಾರ್ಷಿಕ ಆದಾಯ ಹೆಚ್ಚಿದ್ದು ಅದನ್ನ ತಿಳಿಸದೇ ಅದೆಷ್ಟೋ ಜನರು ಬಿಪಿಎಲ್ ಕಾರ್ಡುಗಳನ್ನ ಮಾಡಿಸಿಕೊಂಡು ಪ್ರತಿ ತಿಂಗಳು ರೇಷನ್ ಪಡೆಯುವುದನ್ನ ಗಮನಯಿಸಿದ ಸರ್ಕಾರ ಲಕ್ಷಣತ ಜನರ ರೇಷನ್ ಕಾರ್ಡುಗಳನ್ನ ರದ್ದು ಮಾಡಿದ್ದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಇನ್ನು ಇಂತಹ ಜನರ ರೇಷನ್ ಕಾರ್ಡುಗಳು ರದ್ದಾಗುವುದು ಮಾತ್ರವಲ್ಲದೆ ಅಂತಹ ರೇಷನ್ ಕಾರ್ಡಿನಲ್ಲಿ ಯಾರಾದರೂ ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳುತ್ತಿದ್ದರೆ ಅಂತವರ ಪಿಂಚಣಿ ಹಣ ಕೂಡ ಮುಂದಿನ ದಿನಗಳಲ್ಲಿ ರದ್ದಾಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರ ನಿಯಮಗಳ ಪ್ರಕಾರ ಆರ್ಥಿಕವಾಗಿ ಸಬಲರಾಗಿದ್ದು ವಾರ್ಷಿಕ ಆದಾಯ ಹೆಚ್ಚಿರುವವರು ಸರ್ಕಾರದ ಪಿಂಚಣಿ ಹಣವನ್ನ ಪಡೆಯಲು ಅರ್ಹರಾಗಿರುವುದಿಲ್ಲ ಮತ್ತು ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ಗೆ ವರ್ಗಾವಣೆ ಆದವರು ಕೂಡ ಪಿಂಚಣಿ ಹಾನವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಅದೆಷ್ಟೋ ಕುಟುಂಬ ವಾರ್ಷಿಕ ಆದಾಯ ಕಡಿಕೆ ಇದ್ದರು ಕೂಡ ಅವರ ರೇಷನ್ ಕಾರ್ಡ್ ರದ್ದಾಗಿದ್ದು ಪಿಂಚಣಿ ಹಣ ಕೂಡ ರದ್ದಾಗಿರುವುದು ಗಮನಕ್ಕೆ ಬಂದಿದೆ ಮತ್ತು ಅಂತಹ ಸಮಸ್ಯೆ ಆದಷ್ಟು ಬೇಗ ನಿವಾರಣೆ ಆಗಲಿದೆ. ಸರ್ಕಾರಕ್ಕೆ ಆಗುತ್ತಿರುವ ಮೋಸವನ್ನ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈ ನಿಯಮವನ್ನ ಜಾರಿಗೆ ತಂದಿದ್ದು ಕೆಲವು ಬಡವರು ಕೂಡ ಇದಕ್ಕೆ ತುತ್ತಾಗಿರುವುದು ಗಮನಕ್ಕೆ ಬಂದಿದೆ. ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ಕೂಡ ಬಿಪಿಎಲ್ ಕಾರ್ಡ್ ಗೆ ಬದಲಾಗಿದ್ದರೆ ಸರ್ಕಾರದ ಈ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.