BPL Card: ಬಿಪಿಎಲ್ ಪಡಿತರ ಕಾರ್ಡ್ ಅರ್ಜಿ ಹಾಕಿದವರಿಗೆ ಈ ತಿಂಗಳೊಳಗೆ ಸಿಗಲಿದೆ ಹೊಸ ಕಾರ್ಡ್
ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್‌ಗಳನ್ನು ನೀಡುವುದಾಗಿ ಆಹಾರ ಮತ್ತು ನಾಗರಿಕರ ಇಲಾಖೆ ಮಾಹಿತಿ ನೀಡಿದೆ
BPL Ration Card: ಇಂದು ರೇಷನ್ ಕಾರ್ಡ್(Ration Card) ಎಂಬುದು ಎಲ್ಲರ ಅಗತ್ಯ ದಾಖಲೆ ಯಾಗಿದೆ, ರೇಷನ್ ಕಾರ್ಡ್ ಇದ್ರೆ ಹೆಚ್ಚಿನ ಸೌಲಭ್ಯ ಗಳು ನಿಮಗೆ ದೊರೆಯುತ್ತದೆ, ಈಗಾಗಲೇ ಹೊಸ ರೇಷನ್ ಕಾರ್ಡ್ ಯಾವಾಗ ದೊರೆಯುತ್ತದೆ ಎಂಬ ಕುತೂಹಲ ಜನರಲ್ಲಿತ್ತು, ಇನ್ನು ವಿಧಾನಸಭೆ ಚುನಾವಣೆಗೂ ಮೊದಲು ಬಿಪಿಎಲ್ ಪಡಿತರ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆಮಾಡಿದ್ದರು, ಇದೀಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಮತ್ತೆ ಅವಕಾಶ ವನ್ನು ನೀಡಲಾಗಿದ್ದು, ಜನರಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ.
ಸಿಗಲಿದೆ ಹೊಸ ಕಾರ್ಡ್
ಈಗಾಗಲೇ ಚುನಾವಣೆ ಮೊದಲು ಕೆಲವರು ಹೊಸ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು, ಇದೀಗ ಹೊಸದಾಗಿ 2.95 ಲಕ್ಷ ಮಂದಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಕಾರ್ಡ್‌ಗಳ ಪರಿಶೀಲನೆ ಕೂಡ ನಡೆಯುತ್ತಿದ್ದು, ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್‌ಗಳನ್ನು ನೀಡುವುದಾಗಿ ಆಹಾರ ಮತ್ತು ನಾಗರಿಕರ ಇಲಾಖೆ ಮಾಹಿತಿ ನೀಡಿದೆ
ಮೊತ್ತೊಂದು ಅವಕಾಶ
ಇದೀಗ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ನೀಡಲಾಗಿದೆ, ಆಯಾ ಜಿಲ್ಲೆಗಳಿಗೆ ನಿಗದಿತ ದಿನಾಂಕಗಳನ್ನು ನೀಡಿದ್ದು, ನಿಗದಿ ಪಡಿಸಿರುವ ದಿನಾಂಕದಂದು ಮಾತ್ರ ಹೆಸರು ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 5 ರಿಂದ 7ವರೆಗೂ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ, ನಿಗದಿತ ದಿನಾಂಕ ದಂದು ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಸಂಜೆ 6ರವರೆಗೆ ತಿದ್ದುಪಡಿ ಮಾಡಲು ಅವಕಾಶ ಇದೆ, ತಿದ್ದುಪಡಿ ಮಾಡಲು ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿಅರ್ಜಿ ಸಲ್ಲಿಸಬಹುದು.
ಹೊಸ ಅರ್ಜಿ ಸಲ್ಲಿಕೆ ಇದೆಯೇ?
ಇನ್ನು ರೇಷನ್ ಕಾರ್ಡ್ ಹೊಸದಾಗಿ ಅರ್ಜಿ ಸಲ್ಲಿಸಲು ಹಲವು ಜನ ಕಾಯ್ತಾ ಇದ್ದಾರೆ, ಗ್ಯಾರಂಟಿ ಯೋಜನೆಗಳಿಗೂ ಮುಖ್ಯವಾಗಿ ರೇಷನ್ ಕಾರ್ಡ್ ಅವಶ್ಯಕ ವಾಗಿದ್ದು, ಹೊಸ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವಾಗ ಎಂದು ಜನ ಕಾಯ್ತಾ ಇದ್ದಾರೆ, ಇನ್ನು ಸದ್ಯದಲ್ಲೆ ಈ ಪ್ರಕ್ರಿಯೆ ಆರಂಭ ವಾಗಲಿದೆ,
ಮೊದಲನೇ ಹಂತ ಅ. 5 ರಿಂದ 7ರ ವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, 2ನೇ ಹಂತದಲ್ಲಿ ಅ.8 ರಿಂದ ಅ.10ರ ವರೆಗೆ ನಡೆಯಲಿದ್ದು, ಬೆಳಗಾವಿ, ಬಾಗಲಕೋಟೆ, ಚಾಮರಾಜನಗರ, , ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಹೀಗೆ ಒಟ್ಟು 15 ಜಿಲ್ಲೆಗಳು, ಹೀಗೆ ಬೇರೆ ಬೇರೆ ಜಿಲ್ಲೆಗಳಿಗೆ ಅವಕಾಶ ನೀಡಿದೆ