BPL Ration Card: ಈಗ ಹೊಸ BPL ಕಾರ್ಡ್ ಪಡೆಯಲು ಈ ದಾಖಲೆಗಳು ಕಡ್ಡಾಯ, ಸರ್ಕಾರದ ಇನ್ನೊಂದು ಆದೇಶ

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳೇನು...? ಅರ್ಜಿ ಸಲ್ಲಿಸುವ ವಿಧಾನ ಹೇಗೆ...?

BPL Ration Card Application: ಪ್ರಸ್ತುತ Ration Card ಗೆ ಹೆಚ್ಚಿನ ಮಹತ್ವವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು Ration Card ಅತಿ ಮುಖ್ಯವಾಗಿದೆ. ಇನ್ನು ಸರ್ಕಾರ BPL ಕಾರ್ಡ್ ಹೊಂದಿರುವವರಿಗಾಗಿ ಸಾಕಷ್ಟು ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಸುಮಾರು ಒಂದೂವರೆ ವರ್ಷದಿಂದ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯನ್ನು ನಿಲ್ಲಿಸಲಾಗಿತ್ತು.

ಆದರೆ ಇದೀಗ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸದ್ಯ ಹೊಸ BPL ಕಾರ್ಡ್ ಗಾಗಿ ಕಾಯುತ್ತಿರುವವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು ಇದೀಗ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಹಾಗಾದರೆ ನಾವೀಗ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳೇನು…? ಅರ್ಜಿ ಸಲ್ಲಿಸುವ ವಿಧಾನ ಹೇಗೆ…? ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು…? ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

BPL Ration Card Application
Image Credit: TV 9 Kannada

ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ
ಸದ್ಯ ದೇಶದಲ್ಲಿ ಲೋಕ ಸಭಾ ಚುನಾವಣೆ ನೆಡೆಯುತ್ತಿದೆ. ಈ ಚುನಾವಣೆಯ ಮತ ಎಣಿಕೆ ಮುಗಿದ ಬಳಿಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮಾಹಿತಿ ನೀಡಿದೆ. ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದಂತಹ ಉಚಿತ ಗ್ಯಾರಂಟಿ ಯೋಜನೆಯ ಲಾಭ ಪಡೆಯಲು BPL ರೇಷನ್ ಕಾರ್ಡ್ ಮುಖ್ಯವಾಗಿದೆ. ರೇಷನ್ ಕಾರ್ಡ್ ಇಲ್ಲದೆ ಅದೆಷ್ಟೋ ಮಂದಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹಾಗಾಗಿ ರೇಶನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಅಗತ್ಯ ದಾಖಲೆಗಳು…?
* ಗುರುತಿನ ಚೀಟಿ

* ಆಧಾರ್‌ ಕಾರ್ಡ್‌

Join Nadunudi News WhatsApp Group

* ಫೋಟೋ

* ಮೊಬೈಲ್‌ ನಂಬರ್‌

Ration Card Latest Update
Image Credit: News Next

ಅರ್ಹತೆ…?
*ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.

*ಪಡಿತರ ಚೀಟಿ ಹೊಂದಿಲ್ಲದವರು

*ಹೊಸದಾಗಿ ಮದುವೆಯಾದ ದಂಪತಿಗಳು

ಅರ್ಜಿಸಲ್ಲಿಸುವ ವಿಧಾನ…?
ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://ahara.kar.nic.in/ ಗೆ ಭೇಟಿ ನೀಡಬೇಕು. ನಂತರ ಆಯ್ಕೆ ಬಟನ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕೇಳಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ‌ ಅಪ್ಲೋಡ್ ಮಾಡಬೇಕು. ಆನ್ಲೈನ್ ನಲ್ಲಿ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ, ಆದರೆ ಪಡಿತರ ಚೀಟಿ ಬಂದ ಬಳಿಕ ಸಂಬಂಧಪಟ್ಟಂತಹ ಅಧಿಕಾರಿಗೆ 100 ರೂಪಾಯಿ ಪಾವತಿಸಬೇಕಾಗುತ್ತದೆ.

Document Required For New Ration Card Application
Image Credit: India TV

Join Nadunudi News WhatsApp Group