BPL Ration Card: ಇಂತವರ BPL ಕಾರ್ಡುಗಳನ್ನ ರದ್ದುಮಾಡಲು ಆದೇಶ ಹೊರಡಿಸಿದೆ ಸಿದ್ದರಾಮಯ್ಯ, ಹೊಸ ನಿಯಮ

ಇಂತವರ BPL ಕಾರ್ಡುಗಳನ್ನ ರದ್ದುಮಾಡಲು ಆದೇಶ

BPL Ration Card Cancellation: ರಾಜ್ಯದಲ್ಲಿ BPL ಪಡಿತರ ಚೀಟಿಯು ಜನಸಾಮಾನ್ಯರಿಗೆ ಎಷ್ಟು ಪ್ರಯೋಜನಕಾರಿ ಆಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು BPL Ration Card ಹೊಂದುವುದು ಅತಿ ಅವಶ್ಯಕ.

ಹೀಗಿರುವಾಗ ಅರ್ಹರು ಪಡಿತರ ಚೀಟಿಯನ್ನು ಪಡೆಯಲು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ BPL ರೇಷನ್ ಕಾರ್ಡ್ ಪಡೆಯುವಲ್ಲಿ ಕೂಡ ಸ್ಯಾಮ್ ನಡೆಯುತ್ತಿದೆ. ಹೌದು, ರಾಜ್ಯದಲ್ಲಿ ಸಾಕಷ್ಟು ಅನರ್ಹರು ಕೂಡ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

CM Siddaramaiah Orders Cancellation of BPL Ration Cards
Image Credit: The Hindustangazette

ರಾಜ್ಯ ಸರ್ಕಾರದ ಹೊಸ ನಿಯಮ
ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದಿದೆ . ಚುನಾವಣೆಯ ನಂತರ ದೇಶದಲ್ಲಿ ಅನೇಕ ಯೋಜನೆಗಳ ಜೊತೆಗೆ ಬದಲಾವಣೆ ಕೂಡ ತರಲಾಗಿದೆ. ಸದ್ಯ ರಾಜ್ಯ ಸರ್ಕಾರ ಮುಖ್ಯವಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡುವುದರ ಜೊತೆಗೆ ಇಂತಹ ಕುಟುಂಬದ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಕೂಡ ಮುಂದಾಗಿದೆ.

ಈಗಾಗಲೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 1.03 ಕೋಟಿ ಆದ್ಯತಾ ಪಡಿತರ ಕುಟುಂಬಗಳು (ಬಿಪಿಎಲ್) ಮತ್ತು 10.83 ಲಕ್ಷ ಅಂತ್ಯೋದಯ ಕುಟುಂಬಗಳು ಒಟ್ಟಾಗಿ 1.14 ಕೋಟಿ ನಿಗದಿಪಡಿಸಿದೆ. ಆದರೆ ರಾಜ್ಯದಲ್ಲಿ ಈಗಾಗಲೇ ಕೇಂದ್ರದ ಮಿತಿ ಮೀರಿ 10.33 ಲಕ್ಷ ಹೆಚ್ಚುವರಿ ಬಿಪಿಎಲ್ ಕುಟುಂಬಗಳಿದ್ದು, ಅವರಿಗೆ ರಾಜ್ಯ ಸರಕಾರ ಪ್ರತಿ ತಿಂಗಳು ತನ್ನ ಸ್ವಂತ ಖರ್ಚಿನಲ್ಲಿ ಪಡಿತರ ನೀಡುತ್ತಿದೆ. ಇದೇ ವೇಳೆ ಲಕ್ಷಾಂತರ ಹೊಸ ಅರ್ಜಿಗಳು ಬಾಕಿ ಉಳಿದಿವೆ. ಹಾಗಾಗಿ ಅನರ್ಹರನ್ನು ಪತ್ತೆ ಹಚ್ಚಲು ಸಿದ್ಧತೆ ನಡೆಸಲಾಗುತ್ತಿದೆ.

BPL Ration Card Cancellation
Image Credit: India Todayne

ಇಂತವರ BPL ಕಾರ್ಡುಗಳನ್ನ ರದ್ದುಮಾಡಲು ಆದೇಶ ಹೊರಡಿಸಿದೆ ಸಿದ್ದರಾಮಯ್ಯ

Join Nadunudi News WhatsApp Group

ಅನರ್ಹ ಬಿಪಿಎಲ್ ಕಾರ್ಡ್ ದಾರರಿಗೆ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್ ನೀಡಿದ್ದಾರೆ. ಶೀಘ್ರದಲ್ಲೇ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ 4,37,23,911 ಮಂದಿ ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದು ಶೇ.80ರಷ್ಟು ಕುಟುಂಬಗಳು ಬಿಪಿಎಲ್ ಅಡಿಯಲ್ಲಿವೆ.

ಇನ್ನು 1.27 ಕೋಟಿ ಬಿಪಿಎಲ್ ಕುಟುಂಬಗಳಿವೆ. ಹೊಸ ಕಾರ್ಡ್‌ ಗಾಗಿ 2.95 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾದರೂ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಕಡಿಮೆಯಾಗದಿರಲು ಕಾರಣವೇನು…? ತಮಿಳುನಾಡಿನಲ್ಲಿ ಶೇ.40 ರಷ್ಟು ಬಿಪಿಎಲ್ ಇದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಅನರ್ಹರನ್ನು ಕೈಬಿಡಲು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಮೃತ ಸದಸ್ಯರ ಹೆಸರು ತೆಗೆಯುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದಿದ್ದಾರೆ.

BPL Ration Card
Image Credit: Kannada News

Join Nadunudi News WhatsApp Group