BPL Card: BPL ರೇಷನ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಿ, ಇಲ್ಲದವಾದರೆ ರದ್ದಾಗಲಿದೆ ನಿಮ್ಮ BPL ಕಾರ್ಡ್.

ಇಂತವರ ರೇಷನ್ ಕಾರ್ಡ್ ರದ್ದುಗೊಳಿಸಲು ನಿರ್ಧರಿಸಿದ ಆಹಾರ ಇಲಾಖೆ

BPL Ration Card Cancelled: ಸರ್ಕಾರ ಎಲ್ಲ ಯೋಜನೆಗಳ ಲಾಭ ಪಡೆಯಲು ಬೇಕಾಗಿರುವ ಮುಖ್ಯ ದಾಖಲೆ ಎಂದರೆ ಅದು Ration Card. ಸರ್ಕಾರ BPL Ration Card ಹೊಂದಿರುವವರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಲೇ ಇರುತ್ತದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರ BPL Ration card ಅನ್ನು ನೀಡುತ್ತದೆ. ಜನರು ಈ BPL ಪಡಿತರ ಚೀಟಿಯ ಮೂಲಕ ಸರ್ಕಾರದ ಉಚಿತ ಯೋಜನೆಗಳ ಲಾಭವನ್ನು ಪಡೆಯಲು ಸಹಾಯವಾಗುತ್ತದೆ.

ಸದ್ಯ ಆಹಾರ ಇಲಾಖೆ ಇಂತವರ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸಲು ನಿರ್ಧರಿಸಿದೆ. ನೀವು ಈ ಸಾಲಿನಲ್ಲಿ ಸೇರಿದ್ದಾರೆ ಆದಷ್ಟು ಬೇಗ ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಒಮ್ಮೆ ರೇಷನ್ ಕಾರ್ಡ್ ನಿಷ್ಕ್ರಿಯವಾದರೆ ನೀವು ಸರ್ಕಾರದ ಯಾವುದೇ ಉಚಿತ ಗ್ಯಾರಂಟಿ ಯೋಜನೆಗಳ ಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

BPL Ration Card Latest Update
Image Credit: Original Source

BPL ರೇಷನ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಿ
ಸದ್ಯ ಅನ್ನ ಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಉಚಿತ 5 kg ಅಕ್ಕಿ ಹಾಗೂ 5kg ಅಕ್ಕಿಯ ಬದಲಾಗಲಿ ಹಣವನ್ನು ನೀಡುತ್ತಿದೆ. ಪ್ರತಿ ಕೆಜಿಗೆ 34 ರೂ. ಗಳಂತೆ 174 ರೂ. ಗಳನ್ನೂ ನೀಡಲು ಕಾಂಗ್ರೆಸ್ ಸರ್ಕಾರ ಯೋಜನೆ ಹೂಡಿದೆ. ಐದು ಕೆಜಿ ಅಕ್ಕಿಯ ಬದಲು ಕಾರ್ಡುದಾರರ ಖಾತೆಗೆ ಹಣವನ್ನ ಜಮಾ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಅನರ್ಹರು ಕೂಡ BPL Ration Card ಹೊಂದಿರುದರಿಂದ ಸರ್ಕಾರಕ್ಕೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಹೀಗಾಗಿ ಅನರ್ಹರ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ BPL ರೇಷನ್ ಕಾರ್ಡ್ ಹೊಂದಲು ಸರ್ಕಾರ ಕೆಲವು ಮಾನದಂಡವನ್ನು ವಿಧಿಸಿದೆ. ಸರ್ಕಾರ ನಿಯಮಾನುಸಾರ ಅರ್ಹರು ಮಾತ್ರ BPL ರೇಷನ್ ಕಾರ್ಡ್ ಅನ್ನು ಹೊಂದಬಹುದಾಗಿದೆ.

BPL Ration Card Cancelled
Image Credit: Kannada News Today

ರದ್ದಾಗಲಿದೆ ನಿಮ್ಮ BPL ಕಾರ್ಡ್
ಇನ್ನು ಪ್ರತಿ ತಿಂಗಳು ಪಡಿತರ ಚೀಟಿದಾರರು ಪಡಿತರನ್ನು ಪಡೆಯುತ್ತಾರೆ. ಕೆಲವರು ಒಂದು ತಿಂಗಳಿನಲ್ಲಿ ಪಡೆದರೆ ಇನ್ನೊಂದು ತಿಂಗಳಿನಲ್ಲಿ ಪಡೆಯುವುದಿಲ್ಲ. ಇದೀಗ ಇಂತವರಿಗೆ ಸರ್ಕಾರ ಹೊಸ ನಿಯಮ ತಂದಿದೆ. ಕಳೆದ 6 ತಿಂಗಳಿನಿಂದ ಯಾರು ಪಡಿತರನ್ನು ಪಡೆಯುವುದಿಲ್ಲವೋ ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಸುಮಾರು 1.27 ಕೋಟಿಗೂ ಅಧಿಕ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳಿದ್ದು, 4.37 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಈಗಾಗಲೇ 6 ತಿಂಗಳಿನಿಂದ ಪಡಿತರ ಪಡೆಯದ ಸುಮಾರು 3.26 ಲಕ್ಷ BPL ಹಾಗೂ ಅಂತ್ಯೋದಯ ಕಾರ್ಡ್ ಗಳನ್ನೂ ಸರ್ಕಾರ ಈಗಾಗಲೇ ರದ್ದುಪಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group