Ration Card Delete: ಡಿಸೆಂಬರ್ ತಿಂಗಳಲ್ಲಿ ರದ್ದಾಗಿದೆ ಇಂತಹ ಕುಟುಂಬಗಳ BPL ಕಾರ್ಡ್, ಜನವರಿಯಿಂದ ಉಚಿತ ಅಕ್ಕಿ ಇಲ್ಲ

ಇಂತಹ ಕುಟುಂಬಗಳ ರೇಷನ್ ರದ್ದು ಮಾಡಿದ ಸರ್ಕಾರ, ಜನವರಿಯಿಂದ ಉಚಿತ ಅಕ್ಕಿ ಇಲ್ಲ

BPL Ration Card Delete In December 2023: ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿ ತಾನು ವಾಸಿಸುವ ದೇಶಕ್ಕೆ ಸಂಬಂಧಪಟ್ಟ ಕೆಲವು ಗುರುತಿನ ಪುರಾವೆಯನ್ನು ಹೊಂದಿರಬೇಕಾಗುತ್ತದೆ. ನಮ್ಮ ದೇಶದಲ್ಲಿಯೋ ಆಧಾರ್ ಕಾರ್ಡ್, ಪಾನ್ ಕಾರ್ಡ್, ಓಟರ್ ಐಡಿ, ಚಾಲನಾ ಪರವಾನಿಗೆ, ಪಾಸ್ಪೋರ್ಟ್ ಎಷ್ಟು ಮುಖ್ಯವಾಗಿದೆಯೋ ರೇಷನ್ ಕಾರ್ಡ್ (Ration Card) ಕೂಡ ಅಷ್ಟೇ ಮುಖ್ಯ ದಾಖಲೆಯಾಗಿದೆ. ಸರ್ಕಾರದ ಅನೇಕ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಅತಿ ಅಗತ್ಯವಾಗಿದೆ.

ರೇಷನ್ ಕಾರ್ಡ್ ನಲ್ಲಿ ಕೂಡ 3 ವಿಧವಾಗಿ ವಿಂಗಡಿಸಿದ್ದಾರೆ ಅವುಗಳೆಂದರೆ APL ಕಾರ್ಡ್, BPL ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್. APL ಕಾರ್ಡ್ ಅನ್ನು ಬಡತನ ರೇಖೆಗಿಂತ ಮೇಲಿರುವವರಿಗೆ, BPL ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುತ್ತದೆ, ಹಾಗೆ ಅಂತ್ಯೋದಯ ಕಾರ್ಡ್ ಅನ್ನು ಅದಕ್ಕೂ ಕೆಳ ಮಟ್ಟದಲ್ಲಿರುವವರಿಗೆ ನೀಡಲಾಗುತ್ತದೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಯ ಲಾಭ ಪಡೆಯಲು BPL ಕಾರ್ಡ್ ಬಹಳ ಅವಶ್ಯಕವಾಗಿದೆ.

BPL Ration Card Delete In December 2023
Image Credit: Siasat

ಡಿಸೆಂಬರ್ ತಿಂಗಳಲ್ಲಿ ರದ್ದಾಗಿದೆ ಇಂತಹ ಕುಟುಂಬಗಳ BPL ಕಾರ್ಡ್
ಅನೇಕ ಜನರು ತಮ್ಮ ವಾಸ್ತವ ವಿಚಾರವನ್ನು ಮರೆಮಾಚಿ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಲಾಭ ಪಡೆದುಕೊಳ್ಳಲು BPL ಕಾರ್ಡ್ ಪಡೆದುಕೊಂಡಿದ್ದಾರೆ. ಇದೀಗ ಸರ್ಕಾರ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೌದು ಅನರ್ಹ ರೇಷನ್ ಕಾರ್ಡ್ (Ration Card) ಗಳನ್ನೂ ರದ್ದು ಪಡಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಆಹಾರ ಇಲಾಖೆಯ ಅಧಿಕಾರಿಗಳು ಈಗಾಗಲೇ ಪರಿಶೀಲನೆ ನೆಡೆಸಿ ಸುಮಾರು 4 ಲಕ್ಷ ಪಡಿತರ ಚೀಟಿಯನ್ನು ರದ್ದುಪಡಿಸಿದ್ದಾರೆ. ಒಂದು ವೇಳೆ ನಿಮ್ಮ ಕಾರ್ಡ್ ಇದೆ ತಿಂಗಳು ರದ್ದಾದರೆ ನಿಮಗೆ ಡಿಸೆಂಬರ್ ತಿಂಗಳ ಗೃಹ ಲಕ್ಷ್ಮಿ, ಅನ್ನಭಾಗ್ಯ ಹಣ ಜಮಾ ಆಗುದಿಲ್ಲ. ಹಾಗಾದರೆ ನೀವೀಗ ನಿಮ್ಮ ಕಾರ್ಡ್ ರದ್ದಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಈ ಕೆಳಗಿನ ವಿಧಾನವನ್ನು ಅನುಸರಿಸಿ.

BPL Ration Card Delete Latest News Update
Image Credit: Original Source

ಪಡಿತರ ಚೀಟಿ ಸ್ಟೇಟಸ್ ಚೆಕ್ ಮಾಡುವ ವಿಧಾನ
*ಮೊದಲು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in/Home/EServices ಗೆ ಭೇಟಿನೀಡಬೇಕು.

Join Nadunudi News WhatsApp Group

*ಅಲ್ಲಿ ನಿಮಗೆ ಕಾಣಿಸುವ ಮೂರೂ ಗೆರೆಗಳ ಮೇಲೆ ಕ್ಲಿಕ್ ಮಾಡಬೇಕು.

*ನಂತರ ರದ್ದು ಮಾಡಲಾದ ಪಡಿತರ ಚೀಟಿ, ತಡೆ ಹಿಡಿಯಲಾದ ಪಡಿತರ ಚೀಟಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

*ಜಿಲ್ಲೆ, ತಾಲೂಕು, ಹೋಬಳಿಯನ್ನು ಭರ್ತಿ ಮಾಡಬೇಕು.

*ಈಗ ನಿಮಗೆ ರದ್ದಾದ ಪಡಿತರ ಚೀಟಿಯ ಲಿಸ್ಟ್ ಕಾಣಿಸುತ್ತದೆ. ಇದರಲ್ಲಿ ನಿಮ್ಮ ಹೆಸಲು ಇದೆಯೇ..? ಇಲ್ಲವೇ..? ಎಂದು ನೀವು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

Join Nadunudi News WhatsApp Group