BPL Card Close: ಡಿಸೆಂಬರ್ ಅಂತ್ಯದೊಳಗೆ ರದ್ದಾಗಲಿದೆ ಇಂತಹ ಕುಟುಂಬಗಳ BPL ರೇಷನ್ ಕಾರ್ಡ್, ಕೇಂದ್ರದ ಖಡಕ್ ಆದೇಶ.
ಡಿಸೆಂಬರ್ ಅಂತ್ಯದೊಳಗೆ ರದ್ದಾಗಲಿದೆ ಇಂತಹ ಕುಟುಂಬಗಳ BPL ರೇಷನ್ ಕಾರ್ಡ್.
BPL Ration Card Delete Rules: ಸದ್ಯ ಕೇಂದ್ರ ಸರ್ಕಾರದಿಂದ ದೇಶದ ಬಡ ಕುಟುಂಬಕ್ಕೆ ಉಚಿತ ಪಡಿತರ ವಿತರಣೆ ಸೌಲಭ್ಯ ಜಾರಿಯಾಗಿದೆ. 2020 ರಲ್ಲಿಘೋಷಣೆ ಮಾಡಿರುವ ಉಚಿತ ಪಡಿತರ ವಿತರಣೆಯನ್ನು ಈಗಲೂ ಕೂಡ ಕೇಂದ್ರ ಸರ್ಕಾರ ಮುಂದುವರೆಸಿಕೊಂಡು ಹೋಗುತ್ತಿದೆ.
ಈ ಬಾರಿಯಂತೂ ಮುಂದಿನ 5 ವರ್ಷದವರೆಗೂ ಉಚಿತ ಪಡಿತರ ವಿತರಣೆ ಮಾಡಲಾಗುತ್ತದೆ ಏನದು ಮೊನ್ನೆಯಷ್ಟೇ ಛತ್ತಿಸಗಡ ವಿಧಾಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಮೋದಿ ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ.
ಉಚಿತ ಪಡಿತರ ಲಾಭ ಪಡೆಯುವ ಅನರ್ಹರ ಸಂಖ್ಯೆ ಹೆಚ್ಚುತ್ತಿದೆ
ಸದ್ಯ ದೇಶದಲ್ಲಿ BPL ಪಡಿತರ ಚೀಟಿದಾರರು ಅಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಪಡಿತರನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಉಚಿತ 5KG ಅಕ್ಕಿಯನ್ನು ಬಡ ಕುಟುಂಬಕ್ಕೆ ಪ್ರತಿ ತಿಂಗಳು ನೀಡುತ್ತಿದೆ.
ಇನ್ನು BPL Ration Card ಹೊಂದಿರುವವರಿಗೆ ವಿವಿಧ ಯೋಜನೆಗಳು ಪರಿಚಯವಾದ ಕಾರಣ ಜನರು ಹೆಚ್ಚಾಗಿ BPL Ration Card ಅನ್ನು ಹೊಂದಲು ಇಷ್ಟಪಡುತ್ತಿದ್ದಾರೆ. ಇದಕ್ಕಾಗಿ ಲಕ್ಷಾಂತರ ಜನರು BPL Ration Card ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಅನರ್ಹರು ಕೂಡ BPL Ration Card ಗೆ ಅರ್ಜಿ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈಗಾಗಲೇ BPL Ration Card ಪಡೆಯಲು ಸರ್ಕಾರ ವಿವಿಧ ಮಾನದಂಡವನ್ನು ವಿಧಿಸಿದೆ.
ಅನರ್ಹರ ರೇಷನ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ
ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಸುಳ್ಳು ಮಾಹಿತಿ ನೀಡಿ ಆರ್ಥಿಕವಾಗಿ ಸಬಲರಾಗಿರುವವರು BPL ಪಡಿತರ ಚೀಟಿಯನ್ನು ಹೊಂದಿರುವ ಸಾಕಷ್ಟು ಪ್ರಕರಣಗಳು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಅನರ್ಹರಾಗಿದ್ದರು ಯಾರು ಉಚಿತ ಪಡಿತರ ಲಾಭವನ್ನು ಪಡೆಯುತ್ತಾರೋ ಅಂತವರು ತಾವೇ ತಮ್ಮ BPL Ration Card ಅನ್ನು ರದ್ದುಪಡಿಸಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ನಿಯಮ ಅನುಸರಿಸದಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಅವರ ರೇಷನ್ ಕಾರ್ಡ್ ಅನ್ನು ರದ್ದುಪಡಿಸಿ ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆನೀಡಿದೆ.
ಈ ನಾಲ್ಕು ಸಂದರ್ಭದಲ್ಲಿ ರದ್ದಾಗಲಿವೆ ನಿಮ್ಮ ರೇಷನ್ ಕಾರ್ಡ್
*ಸ್ವಂತ ಆದಾಯದಿಂದ ಗಳಿಸಿದ 100 ಚದರ ಮೀಟರ್ ಪ್ಲಾಟ್ ಅಥವಾ ಮನೆ ಹೊಂದಿರುವವರು BPL Ration card ಪಡೆಯಲು ಅನರ್ಹರಾಗಿರುತ್ತಾರೆ.
*ನಾಲ್ಕು ಚಕ್ರ ವಾಹನ ಅಥವಾ ಟ್ರಾಕ್ಟರ್, ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರು BPL ration Card ಪಡೆದುಕೊಳ್ಳುವಂತಿಲ್ಲ.
*ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ. ಮತ್ತು ನಗರದಲ್ಲಿ 3 ಲಕ್ಷ ರೂ. ಗಿಂತ ಹೆಚ್ಚಿದ್ದರೆ BPL ration Card ಪಡೆದುಕೊಳ್ಳುವಂತಿಲ್ಲ.
*ಆದಾಯ ತೆರಿಗೆ ಪಾವತಿಸುವವರು ಕೂಡ BPL Ration card ಪಡೆಯಲು ಅನರ್ಹರಾಗಿರುತ್ತಾರೆ.