BPL Card: ಹೊಸ BPL ಕಾರ್ಡ್ ನಿರೀಕ್ಷೆಯಲ್ಲಿ ಇದ್ದವರಿಗೆ ಬಂಪರ್ ಗುಡ್ ನ್ಯೂಸ್, ಸರ್ಕಾರದ ಇನ್ನೊಂದು ನಿರ್ಧಾರ.
BPL ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಅಗತ್ಯ ಮಾಹಿತಿ.
BPL Ration Card Distribution: ಕಾಂಗ್ರೆಸ್ ನ ಗ್ಯಾರಂಟಿ ಜಾರಿಯದಾಗಿನಿಂದ ಬಿಪಿಎಲ್ ಪಡಿತರ ಚೀಟಿ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ರಾಜ್ಯದ ಜನತೆ ಸರ್ಕಾರದ ಯೋಜನೆಯ ಲಾಭ ಪಡೆಯಲು ಬಿಪಿಎಲ್ ಪಡಿತರ ಚೀಟಿಗೆ (Ration Card) ಅರ್ಜಿ ಸಲ್ಲಿಸುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಅನೇಕ ಸೌಲಭ್ಯವನ್ನು ಒದಗಿಸುತ್ತಿದೆ.
ಇನ್ನು ಇತ್ತೀಚಿಗೆ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಬಗ್ಗೆ ಸಾಕಷ್ಟು ಅಪ್ಡೇಟ್ ಗಳನ್ನೂ ನೀಡುತ್ತಿದೆ. ಬಿಪಿಎಲ್ ರೇಷನ್ ಕಾರ್ಡ್ ಅರ್ಜಿದಾರರಿಗೆ ವಿವಿಧ ರೀತಿಯ ನಿಯಮವನ್ನು ಅಳವಡಿಸಿದೆ. ಬಡತನ ರೇಖೆಗಿಂತ ಕೆಳಗಿರುವವರು ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಅರ್ಹರು ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲುಸುತ್ತಿರುವ ಕಾರಣ ಅರ್ಜಿ ಸಲ್ಲಿಕೆಯಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
ಹೊಸ BPL ಕಾರ್ಡ್ ನಿರೀಕ್ಷೆಯಲ್ಲಿ ಇದ್ದವರಿಗೆ ಬಂಪರ್ ಗುಡ್ ನ್ಯೂಸ್
ಇನ್ನು ವಿಧಾನಸಭ ಚುನಾವಣೆಯ ಕಾರಣ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಸ್ಥಗಿತಗೊಂಡಿತ್ತು. ಕಳೆದ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ನೀಡಿತ್ತು. ಇನ್ನು ಲಕ್ಷಾಂತರ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಶೀಘ್ರದಲ್ಲೇ ಬಿಪಿಎಲ್ ಪಡಿತರ ಚೀಟಿ ವಿತರಣೆ
ಶೀಘ್ರದಲ್ಲೇ ಬಿಪಿಎಲ್ ಪಡಿತರ ಚೀಟಿ ವಿತರಿಸುವುದಾಗಿ ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ಅವರು ಮಾಹಿತಿ ನೀಡಿದ್ದಾರೆ. ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪರಿಶೀಲನೆಯ ಕೊನೆಯ ಹಂತದಲ್ಲಿದೆ. ‘ಬಿಜೆಪಿ ಸರ್ಕಾರದ ಅವಧಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ಹೊಸದಾಗಿ ಬಿಪಿಎಲ್, ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಜನರಿಗೆ ಇನ್ನು ಮೂರು ತಿಂಗಳಲ್ಲಿ ಅರ್ಹರಿಗೆ ಬಿಪಿಎಲ್, ಎಪಿಎಲ್ ಕಾರ್ಡ್ ನೀಡಲಾಗುತ್ತದೆ’ ಎಂದು ಸಚಿವರು ಘೋಷಣೆ ಹೊರಡಿಸಿದ್ದಾರೆ.
ಆನ್ಲೈನ್ ನಲ್ಲಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯ ವಿಧಾನ
*ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮೊದಲಿಗೆ https://ahara.kar.nic.in/ ವೆಬ್ ಸೈಟ್ ಗೆ ಭೇಟಿ ನೀಡಿ E -Service ಆಯ್ಕೆ ಮಾಡಬೇಕು.
*ನಂತರ ಆಧಾರ್ ಕಾರ್ಡ್ ವಿವರವನ್ನು ನೀಡಬೇಕು. ಇದಾದ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
*ಒನ್ಟೈಮ್ ಪಾಸ್ವರ್ಡ್ ಟು ಮೊಬೈಲ್ ನಂಬರ್ ರಿಜಿಸ್ಟರ್ಡ್ ವಿಥ್ ದ ಆಧಾರ್ ಕಾರ್ಡ್ ಆಯ್ಕೆಯನ್ನು ಆರಿಸಿ ನಿಮ್ಮ ಫಿಂಗರ್ ಪ್ರಿಂಟ್ ಆಯ್ಕೆಯನ್ನು ನೀಡಿ ಇದಾದ ಬಳಿಕ ನಿಮ್ಮ ಕುಟುಂಬದ ಸದಸ್ಯರ ವಿವರವನ್ನು ನೀಡಬೇಕು.
*ಈ ಪ್ರಕ್ರಿಯೆ ಮುಗಿದ ಬಳಿಕ ರೇಷನ್ ಕಾರ್ಡ್ ಸಂಬಂದಿತಾ ಮಾಹಿತಿ ಕೇಳುತ್ತದೆ. ಎಲ್ಲ ಮಾಹಿತಿಯನ್ನು ನಮೂದಿಸಿದ ನಂತರ ಜನರೇಟ್ RC ಆಯ್ಕೆ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಮುಗಿಯುತ್ತದೆ.