Ration Card: ರಾಜ್ಯದಲ್ಲಿ ಇನ್ನುಮುಂದೆ ಎರಡು ವಿಧದಲ್ಲಿ ಸಿಗಲಿದೆ BPL ರೇಷನ್ ಕಾರ್ಡ್, ಬದಲಾಗಲಿದೆ ನಿಮ್ಮ ಕಾರ್ಡ್.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಅವರು ಬಿಪಿಎಲ್ ಕಾರ್ಡ್ ಎರಡು ಗುಂಪುಗಳಾಗಿ ವಿಭಜಿಸುವ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.
BPL Ration Card: ಸರ್ಕಾರದಿಂದ ಹೊಸ ಹೊಸ ನಿಯಮಗಳು ಜಾರಿ ಆಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ರಾಜ್ಯದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲು ಸರ್ಕಾರ ಮುಂದಾಗಿದೆ. ಇದೀಗ ಪಡಿತರ ಚೀಟಿದಾರರಿಗೆ ಸರ್ಕಾರ ಹೊಸ ಮಾಹಿತಿ ಒಂದನ್ನು ಹೊರ ಹಾಕಿದೆ.
ರಾಜ್ಯ ಸರ್ಕಾರ ಹೊಸ ನಿರ್ಧಾರ
2017 ರಿಂದ ಸಲ್ಲಿಕೆಯಾಗಿರುವ ಬಿಪಿಎಲ್ ಕಾರ್ಡ್ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ಹಂಚಿಕೆ ಮಾಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲಿಯೇ ಬಿಪಿಎಲ್ ಕಾರ್ಡ್ ಎರಡು ಗುಂಪುಗಳಾಗಿ ವಿಭಜಿಸುವ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿಗಳನ್ನು ಎರಡು ಗುಂಪುಗಳಾಗಿ ವಿಭಜಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಸಚಿವ ಮುನಿಯಪ್ಪ ಹೇಳಿದ್ದಾರೆ. ಒಂದು ರೀತಿಯ ಬಿಪಿಎಲ್ ಕಾರ್ಡ್ ನಲ್ಲಿ ವೈದ್ಯಕೀಯ ಮತ್ತು ಇತರ ಸರ್ಕಾರೀ ಸವಲತ್ತುಗಳನ್ನು ಪಡೆಯಲು ಅವಕಾಶ ನೀಡಿದರೆ ಮತ್ತೊಂದು ರೀತಿಯ ಬಿಪಿಎಲ್ ಕಾರ್ಡ್ ನಲ್ಲಿ ಪಡಿತರ ಜೊತೆಗೆ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಬಹುದು.
ಬಿಪಿಎಲ್ ಕಾರ್ಡ್ ನಲ್ಲಿ ಎರಡು ಗುಂಪುಗಳನ್ನಾಗಿ ಮಾಡಲು ಸರ್ಕಾರ ನಿರ್ಧಾರ
ಈಗಾಗಲೇ ಆಂದ್ರಪ್ರದೇಶದಲ್ಲಿ ಈ ರೀತಿಯಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲಿ ಬಿಪಿಎಲ್ ಕಾರ್ಡ್ ನಲ್ಲಿ ಎರಡು ಗುಂಪುಗಳನ್ನಾಗಿ ಮಾಡಲಾಗಿದೆ. ಒಂದು ವರ್ಗಕ್ಕೆ ಈ ಕಾರ್ಡ್ ನಲ್ಲಿ ಆಹಾರ ದಾನ್ಯಗಳು ಸಿಗುವುದಿಲ್ಲ. ಆದರೆ ವೈದ್ಯಕೀಯ, ಮೀಸಲಾತಿ ಮತ್ತು ಆದಾಯ ಪ್ರಮಾಣಪತ್ರಗಳಂತಹ ಇತರ ಪ್ರಯೋಜನಗಳನ್ನು ಪಡೆಯಲು ಕಾರ್ಡ್ ಬಳಸುತ್ತಾರೆ. ಮತ್ತೊಂದು ವರ್ಗದ ಪಡಿತರ ಚೀಟಿಗೆ ಆಹಾರ ಧಾನ್ಯಗಳು ಮತ್ತು ಇತರ ಪ್ರಯೋಜನಗಳು ದೊರೆಯಲಿದೆ ಎಂದು ಮುನಿಯಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ನಂತರ, ನಿಖರವಾದ ಸಂಖ್ಯೆಗಳನ್ನು ತಿಳಿಯಲು ಎರಡೂ ಗುಂಪುಗಳನ್ನು ಗುರುತಿಸಲು ನಾವು ಮನೆ ಮನೆಗೆ ಸಮೀಕ್ಷೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಸಮೀಕ್ಷೆಗೆ ಕಾಲಮಿತಿ ಇರುವುದಿಲ್ಲ, ಆದರೆ ಶೀಘ್ರದಲ್ಲೇ ಇದನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.