Ration Card: ರೇಷನ್ ಕಾರ್ಡ್ ಹೊಂದಿರುವ ಸರ್ಕಾರೀ ನೌಕರರಿಗೆ ಹೊಸ ರೂಲ್ಸ್, ಸಂಕಷ್ಟದಲ್ಲಿ ಸರ್ಕಾರೀ ನೌಕರರು.
ಸರ್ಕಾರೀ ನೌಕರರಿಗೆ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದ ಸರ್ಕಾರ.
BPL Ration Card Latest Update: ಸದ್ಯ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ಬಳಿಕ ರೇಷನ್ ಕಾರ್ಡ್ ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ Ration Card ಸಂಬಂಧಿತ ಅನೇಕ ರೀತಿಯ ಹೊಸ ಹೊಸ ಅಪ್ಡೇಟ್ ಗಳು ಹೊರಬೀಳುತ್ತಿದೆ.
ರೇಷನ್ ಕಾರ್ಡ್ ಇತ್ತೀಚಿಗೆ ಬಹುಮುಖ್ಯ ದಾಖಲೆಯಾಗುತ್ತಿದೆ. ರಾಜ್ಯ ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ಹೆಚ್ಚಿನ ಯೋಜನೆಗಳನ್ನು ಹೊಸ ಹೊಸ ಸೌಲಭ್ಯವನ್ನು ಕೂಡ ನೀಡುತ್ತಿದೆ. ಸದ್ಯ ರೇಷನ್ ಕಾರ್ಡ್ ವಿಷಯವಾಗಿ ಕರ್ನಾಟಕ ಸರ್ಕಾರ ಇನ್ನೊಂದು ಆದೇಶವನ್ನ ಹೊರಡಿಸಿದ್ದು ಇದು ಸರ್ಕಾರೀ ನೌಕರರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಸರ್ಕಾರ ಹೊರಡಿಸಿರುವ ಆದೇಶ ಏನು ಅನ್ನುವುದರ ಬಗ್ಗೆ ತಿಳಿಯೋಣ.
BPL Ration Card ಅರ್ಜಿ ಸಲ್ಲಿಕೆ
ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡುವ ಯೋಜನೆಗಳು ಹೆಚ್ಚುತ್ತಿರುವ ಕಾರಣ ಹೆಚ್ಚಾಗಿ ಎಲ್ಲರೂ BPL Ration Card ಪಡೆಯಲು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈಗಾಗಲೇ ಸರ್ಕಾರ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.
ಸದ್ಯ ಲಕ್ಷಾಂತರ ಜನರು ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚುವರಿಯಾಗಿ ಈಗಾಗಲೇ ರೇಷನ್ ಕಾರ್ಡ್ ನೀಡಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆ ಹೆಚ್ಚಾಗಿದೆ. ಇದೀಗ ಸರ್ಕಾರ ಹೊಸ ಪಡಿತರ ಚೀಟಿ ಅರ್ಜಿದಾರರಿಗೆ ಶಾಕ್ ನೀಡಿದೆ. ಅದರಲ್ಲೂ ಸರ್ಕಾರೀ ನೌಕರರಿಗೆ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.
BPL Ration Card ಹೊಂದಿರುವವರ ಗಮನಕ್ಕೆ
ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿಯ ಅನುಕೂಲವನ್ನು ಅನೇಕ ಜನರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅನರ್ಹರು ಕೂಡ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇನ್ನು ಇಂತಹ ವಂಚನೆಯನ್ನು ತಡೆಯಲು ಸರ್ಕಾರ ಈಗಾಗಲೇ ಸಾಕಷ್ಟು ಕ್ರಮವನ್ನು ಕೈಗೊಂಡಿದೆ. BPL Ration Card ಪಡೆಯಲು ಸರ್ಕಾರ ಮಾನದಂಡಗಳನ್ನು ಕೂಡ ವಿಧಿಸಿತ್ತು.
BPL Card ಹೊಂದಿರುವ ಸರ್ಕಾರೀ ನೌಕರರಿಗೆ ಸರ್ಕಾರದಿಂದ ಶಾಕ್
ವೈಟ್ ಬೋರ್ಡ್ ಕಾರ್ ಹೊಂದಿರುವವರು, ವಾರ್ಷಿಕವಾಗಿ 1 .2 ಲಕ್ಷ ಆದಾಯ ಮೀರಿದವರು, 3 ಹೆಕ್ಟೇರ್ ಗಿಂತ ಹೆಚ್ಚಿನಾ ಕ್ರಷಿ ಭೂಮಿಯನ್ನು ಹೊಂದಿದ್ದವರು, ಸರ್ಕಾರೀ ನೌಕರರು, ಆದಾಯ ತೆರಿಗೆ, ಐಟಿ ರಿಟರ್ನ್, ವಾಣಿಜ್ಯ ತೆರಿಗೆ ಪಾವತಿದಾರರು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹರಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.
ಸರ್ಕಾರದ ಈ ನಿಯಮವನ್ನು ಉಲ್ಲಂಘಿಸಿ ಇಂತವರು BPL Ration Card ಪಡೆದರೆ ಅಂತವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸದ್ಯ BPL Ration Card ಹೊಂದಿರುವ ಸರ್ಕಾರೀ ನೌಕರರು, ಉದ್ಯಮಿಗಳು, ಖಾಸಗಿ ನೌಕರರಿಗೆ ಆಹಾರ ನಾಗರೀಕ ಸಾರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ದಂಡ ವಿಧಿಸಿದೆ. BPL ವ್ಯಾಪ್ತಿಗೆ ಅರ್ಹರಲ್ಲದ ಎಲ್ಲ ಪಡಿತರಾದಾರರಿಗೆ ಇಲಾಖೆ 8 ರಿಂದ 10 ಸಾವಿರ ದಂಡ ವಿಧಿಸಿದೆ. ಇನ್ನು ಸರ್ಕಾರಕ್ಕೆ ಮೋಸ ಮಾಡಿದವರ ಮೇಲೆ ಕೇಸ್ ಕೂಡ ದಾಖಲು ಮಾಡಲು ತೀರ್ಮಾನವನ್ನ ಮಾಡಲಾಗಿದೆ.