Brother’s Property: ಅಣ್ಣನ ಆಸ್ತಿಯಲ್ಲಿ ತಮ್ಮನಿಗೆ ಪಾಲು ಸಿಗುತ್ತಾ, ಯಾವಾಗ ಅಣ್ಣನ ಆಸ್ತಿಯಲ್ಲಿ ಪಾಲು ಪಡೆಯಬಹುದು.
ತಮ್ಮನಿಗೆ ಅಣ್ಣನ ಆಸ್ತಿಯಲ್ಲಿ ಯಾವಾಗ ಪಾಲು ಸಿಗುತ್ತದೆ ಮತ್ತು ಇದರ ಬಗ್ಗೆ ಕಾನೂನು ಹೇಳುವುದೇನು.
Brother’s Property Right: ಕಾನೂನಿಯ ನಿಯಮದ ಪ್ರಕಾರ ಮಕ್ಕಳು ತಂದೆಯ ಆಸ್ತಿಯ ಮೇಲೆ ಹುಟ್ಟಿನಿಂದಲೇ ತಮ್ಮ ಹಕ್ಕನ್ನು ಹೊಂದಿರುತ್ತಾರೆ. ಆಸ್ತಿ ಹಂಚಿಕೆಯ ಸಮಯದಲ್ಲಿ ಕಾನೂನಿನ ನಿಯಮದ ಪ್ರಕಾರ ಆಸ್ತಿ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ.
ಇನ್ನು ಕಾನೂನು ಬಾಹಿರವಾಗಿ ಯಾವುದೇ ಆಸ್ತಿಯು ಹಂಚಿಕೆಯಾಗಿದ್ದರೆ ಕಾನೂನಿನಲ್ಲಿ ಮೊಕ್ಕದ್ದಮ್ಮೆಯನ್ನು ಹೂಡುವ ಅವಕಾಶ ಇರುತ್ತದೆ. ಇನ್ನು ಅಣ್ಣನ ಆಸ್ತಿಯ ಮೇಲೆ ತಮ್ಮನ ಅಧಿಕಾರದ ಬಗ್ಗೆ ಕಾನೂನಿನಲ್ಲಿ ನಿಯಮವಿದೆ. ಆಸ್ತಿಯಲ್ಲಿ ಸ್ವ- ಸ್ವಾದೀನ ಆಸ್ತಿ ಮತ್ತು ಪೂರ್ವಜರ ಆಸ್ತಿ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.
ವ್ಯಕ್ತಿಯು ಸ್ವಯಂ ಸಂಪಾಧಿಸಿದ ಆಸ್ತಿಯನ್ನು ಸ್ವ- ಸ್ವಾದೀನ ಆಸ್ತಿ ಎನ್ನಲಾಗುತ್ತದೆ ಹಾಗೆಯೆ ಹಲವಾರು ತಲೆಮಾರುಗಳಿಂದ ಅಂದರೆ ತಾತ, ಮುತ್ತಾತ ತಂದೆಯಿಂದ ಪಡೆದ ಆಸ್ತಿ ಪೂರ್ವಜರ ಆಸ್ತಿ ಆಗಿರುತ್ತದೆ. ಇನ್ನು ತಂದೆಯ ಆಸ್ತಿ ಹಾಗೂ ಪೂರ್ವಜರ ಆಸ್ತಿಯಲ್ಲಿ ಮಕ್ಕಳು ಸಮಾನ ಹಕ್ಕನ್ನು ಹೊಂದಿರುತ್ತಾರೆ.
ಅಣ್ಣನ ಆಸ್ತಿಯಲ್ಲಿ ತಮ್ಮನಿಗೆ ಪಾಲು ಸಿಗಲಿದೆಯೇ
ಭಾರತೀಯ ಕಾನೂನಿನ ಪ್ರಕಾರ ಅಣ್ಣನ ಸ್ವಾಯಾರ್ಜಿತ ಆಸ್ತಿಯಲ್ಲಿ ತಮ್ಮ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ವ್ಯಕ್ತಿಯು ಸ್ವಂತವಾಗಿ ಖರೀದಿಸಿದ ಆಸ್ತಿಯು ಸ್ವಯಾರ್ಜಿತ ಆಸ್ತಿ ಆಗುತ್ತದೆ. ಇನ್ನು ಸ್ವಯಾರ್ಜಿತ ಆಸ್ತಿಯ ಮಾಲೀಕನ ಮರಣದ ನಂತರ ಆಸ್ತಿಯು ಆತನ ಪತ್ನಿಗೆ ತಲುಪುತ್ತದೆ. ಪತ್ನಿಯ ಮರಣದ ನಂತರ ಆತನ ಮಕ್ಕಳು ಆಸ್ತಿಯ ಹಕ್ಕನ್ನು ಪಡೆಯುತ್ತಾರೆ.
ಒಂದು ವೇಳೆ ಆತ ಮದುವೆ ಆಗದಿದ್ದರೆ ತಂದೆ ತಾಯಿಗೆ ಆತನ ಸ್ವಯಾರ್ಜಿತ ಆಸ್ತಿ ಸೇರುತ್ತದೆ. ಆದರೆ ಅಣ್ಣನ ಸ್ವಯಾರ್ಜಿತ ಆಸ್ತಿಯಲ್ಲಿ ತಮ್ಮನು ಯಾವುದೇ ರೀತಿಯ ಹಕ್ಕನ್ನು ಪಡೆಯುವುದಿಲ್ಲ. ಅಣ್ಣನು ಸ್ವಂತವಾಗಿ ದುಡಿದು ಆಸ್ತಿಯನ್ನು ಸಂಪಾದಿಸಿದ್ದರೆ ಆ ಆಸ್ತಿಯ ಮೇಲೆ ಅಣ್ಣನಿಗೆ ಮಾತ್ರ ಅಧಿಕಾರವಿರುತ್ತದೆ. ಅಣ್ಣನ ಸ್ವಇಚ್ಚೆಯ ಮೇರೆಗೆ ಆತನು ಆಸ್ತಿಯನ್ನು ಹಂಚಬಹುದು.