BSA Gold Star 650: ಬುಲೆಟ್ ಬೈಕಿಗೆ ಪೈಪೋಟಿ ಕೊಡಲು ಬಂತು ಇನ್ನೊಂದು ಬೈಕ್, ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್
ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಠಕ್ಕರ್ ನೀಡಲು ಬಂತು ಹೊಸ BSA ಬೈಕ್
BSA Gold Star 650 Bike Launch In India: ಯುವಕರ ನೆಚ್ಚಿನ ಬೈಕ್ ಪಟ್ಟಿಯಲ್ಲಿ ರಾಯಲ್ ಏನ್ ಫೀಲ್ಡ್ (Royal Enfield) ಮೊದಲ ಸ್ಥಾನದಲ್ಲಿದೆ. ಇತ್ತೀಚಿಗೆ ಹೊಸ ವಿನ್ಯಾಸದ ವಿವಿಧ ಮಾದರಿಯಾ ಬೈಕ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ರಾಯಲ್ ಏನ್ ಫೀಲ್ಡ್ ಬೈಕ್ ಸ್ಥಾನವನ್ನು ಕಸಿದುಕೊಳ್ಳುತ್ತಿದೆ ಎನ್ನಬಹುದು.
ಹೌದು, ಅನೇಕ ಕಂಪನಿಗಳು ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಪೈಪೋಟಿ ನಿಡಲು ನೂತನ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೀಗ Classic Legends ತನ್ನ ನೂತನ ಮಾದರಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮೂಲಕ ಸಂಚಲನ ಮೂಡಿಸಲಿದೆ. ಈ ನೂತನ ಬೈಕ್ ಮಾರುಕಟ್ಟೆಯಲ್ಲಿ ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಠಕ್ಕರ್ ನೀಡುದರಲ್ಲಿ ಎರಡು ಮಾತಿಲ್ಲ ಎನ್ನಬಹುದು.
ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಠಕ್ಕರ್ ನೀಡಲು ಬಂತು ಹೊಸ BSA ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕ್ಲಾಸಿಕ್ ಲೆಜೆಂಡ್ಸ್ ತನ್ನ ಹೊಸ BSA Gold Star 650 Bike ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಹೊಸ BSA ಗೋಲ್ಡ್ ಸ್ಟಾರ್ 650 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ರಾಯಲ್ ಎನ್ಫೀಲ್ಡ್ 650 ಟ್ವಿನ್ ಮಾದರಿಗಳೊಂದಿಗೆ ಸ್ಪರ್ಧಿಸಲಿದೆ.
ಈ ಬೈಕ್ ನಲ್ಲಿ ಅಳವಡಿಸಲಾದ ನೂತನ ಫೀಚರ್ ಗಳು ಗ್ರಾಹಕರನ್ನು ಸೆಳೆಯಲಿದೆ. ಇನ್ನು BSA ಗೋಲ್ಡ್ ಸ್ಟಾರ್ 650 ಬೈಕ್ ಬಗ್ಗೆ ಹೇಳುವುದಾದರೆ, ಈ ಬೈಕ್ ಅನ್ನು 2022 ರಲ್ಲಿ UK ನಲ್ಲಿ ಪ್ರಾರಂಭಿಸಲಾಯಿತು ಮತ್ತು GBP 6500 (ಅಂದಾಜು 6.62 ಲಕ್ಷ ರೂ.) ಬೆಲೆಯಿತ್ತು. BSA ಗೋಲ್ಡ್ ಸ್ಟಾರ್ 650 ಆಧುನಿಕ-ರೆಟ್ರೋ ಬೈಕ್ ಆಗಿದ್ದು ಅದು ರೆಟ್ರೊ ಚಾರ್ಮ್ ಅನ್ನು ಪೂರ್ಣವಾಗಿ ಅಳವಡಿಸಿಕೊಂಡಿದೆ.
ಆಗಸ್ಟ್ 15 ರಂದು ಲಾಂಚ್ ಆಗಲಿದೆ ಈ ಬೈಕ್
ನೂತನ BSA ಗೋಲ್ಡ್ ಸ್ಟಾರ್ 650 ಬೈಕ್ ಎಲ್ಸಿಡಿ ಡಿಸ್ಪ್ಲೇ, ಡ್ಯುಯಲ್-ಚಾನೆಲ್ ಎಬಿಎಸ್, ಸ್ಲಿಪ್ಪರ್ ಕ್ಲಚ್, ಯುಎಸ್ಬಿ ಚಾರ್ಜರ್, ಎಲ್ಇಡಿ ಟೈಲ್ಯಾಂಪ್ ಮತ್ತು ಹೆಚ್ಚಿನವುಗಳೊಂದಿಗೆ ಆಧುನಿಕ ಮೋಟಾರ್ಸೈಕಲ್ ಆಗಿದೆ. ಭಾರತದಲ್ಲಿ, ಈ ಮಾದರಿಯು ಸುಮಾರು 3 ಲಕ್ಷ ಬೆಲೆಯೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ BSA ಗೋಲ್ಡ್ ಸ್ಟಾರ್ 650 ಬೈಕ್ ನ ಪವರ್ ಟ್ರೇನ್ ಸಂಖ್ಯೆಗಳು RE ಇಂಟರ್ ಸೆಪ್ಟರ್ 650 ಮಾದರಿಯನ್ನು ಹೋಲುತ್ತವೆ.
BSA ಗೋಲ್ಡ್ ಸ್ಟಾರ್ 650 ಬೈಕ್ 652cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, DOHC, 4-ವಾಲ್ವ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 6,000rpm ನಲ್ಲಿ 44.27 bhp ಮತ್ತು 4,000rpm ನಲ್ಲಿ 55 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ನೂತನ ಮಾದರಿ ಅತಿ ಹೆಚ್ಚು ಮೈಲೇಜ್ ನೀಡುವುದರಲ್ಲಿ ಸಂದೇಹವಿಲ್ಲ. ಇನ್ನು ಕಂಪನಿಯು BSA Gold Star 650 Bike ಅನ್ನು ಆಗಸ್ಟ್ 15 ರಂದು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ. ಗ್ರಾಹಕರು ಆದಷ್ಟು ಬೇಗ ಈ ಬೆಸ್ಟ್ ಬೈಕ್ ಅನ್ನು ಖರೀದಿಸಬಹುದಾಗಿದೆ.