BSNL: ದಿನಕ್ಕೆ 5 ರೂಪಾಯಿ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ BSNL, ಸಿಗಲಿದೆ 10GB ಉಚಿತ ಡೇಟಾ.
10GB ಡೇಟಾ ಪ್ಯಾಕ್ ಉಚಿತವಾಗಿ ಸಿಗುವ 5 ರೂಪಾಯಿಯ ರಿಚಾರ್ಜ್ ಅನ್ನು ಈಗ bsnl ಪರಿಚಯ ಮಾಡಿದೆ.
BSNL 147 Recharge Plan: ಬಿಎಸ್ಎನ್ಎಲ್ (BSNL) ಟೆಲಿಕಾಂ ಕಂಪನಿ ಇದೀಗ ಗ್ರಾಹಕರಿಗೆ ಅಗ್ಗದ ರಿಚಾರ್ಜ್ ಪ್ಲ್ಯಾನ್ ಒಂದನ್ನು ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ ಗ್ರಹಕರು ಈ ಅಗ್ಗದ ರಿಚಾರ್ಜ್ ಪ್ಲ್ಯಾನ್ ನ ಉಪಯೋಗವನ್ನು ಪಡೆಯಬಹುದು. ಗ್ರಾಹಕರು ಕೇವಲ 5 ರೂಪಾಯಿಯಲ್ಲಿ ಅನಿಯಮಿತ ಕರೆ 10 ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ.
ಅಗ್ಗದ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ ಬಿಎಸ್ಎನ್ಎಲ್ ಕಂಪನಿ
ದೇಶದಲ್ಲಿ ಹಲವಾರು ಟೆಲಿಕಾಂ ಕಂಪನಿಗಳಿವೆ. ಅದರಲ್ಲಿ ಏರ್ ಟೆಲ್, ಜಿಯೋ ಮತ್ತು ಬಿಎಸ್ಎನ್ಎಲ್ ಕಂಪನಿಗಳು ಸಹ ಒಂದು. ಇದರಲ್ಲಿ ಸರ್ಕಾರೀ ಸ್ವಾಮ್ಯದ ಕಂಪೆನಿಯಾಗಿರುವ ಬಿಎಸ್ಎನ್ಎಲ್ ಗ್ರಾಹಕರಿಗೆ ಅಗ್ಗದ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡುವ ಮೂಲಕ ಭಾರಿ ಜನಪ್ರಿಯತೆಯನ್ನು ಪಡೆದಿದೆ.
ದಿನಕ್ಕೆ 5 ರೂಪಾಯಿ ವೆಚ್ಚದ ಹೊಸ ರಿಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ ತನ್ನ ಗ್ರಹಕರಿಗೆ 147 ರೂಪಾಯಿಯ ಪ್ರೀಪೈಡ್ ಯೋಜನೆಯನ್ನು ನೀಡುತ್ತಿದೆ. ಇದರ ಮೂಲಕ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯ ವ್ಯಾಲಿಡಿಟಿ 30 ದಿನಗಳು ಈ ಪ್ಲ್ಯಾನ್ ಮೂಲಕ ರಿಚಾರ್ಜ್ ಮಾಡಿದರೆ ಯಾವುದೇ ನೆಟ್ ವರ್ಕ್ ಗು ಅನಿಯಮಿತ ಕರೆ ಮಾಡುವ ಸೌಲಭ್ಯ ಸಿಗಲಿದೆ.
ಹಾಗೆಯೇ ಈ ಯೋಜನೆಯಲ್ಲಿ 10 GB ಡೇಟಾ ಪ್ರಯೋಜನಗಳು ಸಹ ಸಿಗಲಿದೆ. ಈ ಪ್ಲ್ಯಾನ್ ಮೂಲಕ ನೀವು bsnl ಟ್ಯೂನ್ ಗಳನ್ನೂ ಉಚಿತವಾಗಿ ಪಡೆಯಬಹುದು. ಇನ್ನು ಈ ಪ್ಲ್ಯಾನ್ ರಿಚಾರ್ಜ್ ಮಾಡಿದರೆ ದಿನಕ್ಕೆ ಕೇವಲ 5 ರೂಪಾಯಿಯಂತೆ ವೆಚ್ಚವಾಗುತ್ತದೆ.