BSNL Plan: 1 ವರ್ಷ ರಿಚಾರ್ಜ್ ಮಾಡುವ ಅಗತ್ಯ ಇಲ್ಲ, BSNL ಗ್ರಾಹಕರಿಗೆ ಇನ್ನೊಂದು ಅನಿಯಮಿತ ರಿಚಾರ್ಜ್ ಪ್ಲ್ಯಾನ್.

BSNL ತನ್ನ ಗ್ರಾಹಕರ ಅನುಕೂಲಕ್ಕಾಗಿ 1 ವರ್ಷದ ರಿಚಾರ್ಜ್ ಪ್ಲಾನ್ ಅನ್ನು ಘೋಷಣೆ ಮಾಡಿದೆ.

BSNL  1570 Annual Plan: ದೇಶದಲ್ಲಿ ವಿವಿಧ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಿವೆ. Airtel, Jio, Vi, BSNL ಟೆಲಿಕಾ ಕಂಪನಿಗಳು ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸುತ್ತಿದೆ. ಎಲ್ಲ ನೆಟ್ವರ್ಕ್ ನಲ್ಲಿಯೂ ಮಾಸಿಕ, ತ್ರೈಮಾಸಿ, ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಗಳು ಲಭ್ಯವಿರುತ್ತದೆ. ಇನ್ನು ಸರ್ಕಾರಿ ಟೆಲಿಕಾಂ ಕಂಪನಿಯಾದ BSNL ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲ್ಯಾನ್ ಅನ್ನು ನೀಡುತ್ತದೆ.

BSNL 1570 Annual Plan
Image Credit: Navbharattimes

1 ವರ್ಷ ರಿಚಾರ್ಜ್ ಮಾಡುವ ಅಗತ್ಯ ಇಲ್ಲ
ಬೇರೆ ಕಂಪನಿಗಳ ಮಾಸಿಕ ರಿಚಾರ್ಜ್ ಪ್ಲ್ಯಾನ್ ಬೆಲೆಯಲ್ಲಿ BSNL ಗ್ರಾಹಕರು ಎರಡು ತಿಂಗಳ ರಿಚಾರ್ಜ್ ಅನ್ನು ಮಾಡಿಕೊಳ್ಳಬಹುದಾಗಿದೆ. ಇನ್ನು BSNL ತನ್ನ ಬಳಕೆದಾರರಿಗೆ SIM Active ಆಗಿರಿಸಲು ಕೂಡ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ನ್ನು ನೀಡುತ್ತದೆ. BSNL ಬಳಕೆದಾರರು Annual Plan ಅನ್ನು ಕೂಡ ಅತಿ ಕಡಿಮೆ ಬೆಲೆಗೆ ಪಡೆಯಬಹುದಾಗಿದೆ.

BSNL ಬಳಕೆದಾರರಿಗೆ ವಿವಿಧ ವಾರ್ಷಿಕ ಯೋಜನೆಯನ್ನು ಪರಿಚಯಿಸಿದ್ದು, ಇದೀಗ BSNL ನ ಬೆಸ್ಟ್ Annual Plan ಯಾವುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ. BSNL ಇದೀಗ ತನ್ನ ಗ್ರಾಹಕರಿಗೆ ಅನುಕೂಲವಾಗಲು 1,570 ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅಂದರೆ ಒಂದು ವರ್ಷದವರೆಗೆ ಮಾನ್ಯತೆ ನೀಡಲಿದೆ.

BSNL Annual Recharge Plan
Image Credit: Digit

BSNL ಗ್ರಾಹಕರಿಗೆ ಸಿಗಲಿದೆ ಬರೋಬ್ಬರಿ 730GB ಡೇಟಾ
BSNL ತನ್ನ ಗ್ರಾಹಕರಿಗಾಗಿ 1570 ರಿಚಾರ್ಜ್ ಪ್ಲ್ಯಾನ್ ಬಿಡುಗಡೆಗೊಳಿಸಿದ್ದು ಈ ಯೋಜನೆಯು ಬಳಕೆದಾರರಿಗೆ ಪ್ರತಿನಿತ್ಯ 2GB ಡೇಟಾ ನೀಡಲಿದೆ. ಸರಾಸರಿ ನಿಮಗೆ ದಿನದ 4 ರೂ. ವೆಚ್ಚದಲ್ಲಿ ಇಡೀ ವರ್ಷದ ಪ್ಲ್ಯಾನ್ ದೊರಕುತ್ತಿದೆ.

ಒಟ್ಟಾರೆ ಈ ಪ್ಲ್ಯಾನ್ ಬಳಕೆದಾರರಿಗೆ 730GB ಡೇಟಾ ನೀಡಲಿದೆ. ಡೇಟಾ ಜೊತೆಗೆ ಉಚಿತ ಕರೆಯ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ. ಉಚಿತ ಡೇಟಾ ಅನಿಟಾಮಿಯ ಕರೆ ಜೊತೆಗೆ 100 SMS ಸೌಲಭ್ಯವನ್ನು ನೀವು ಈ ರಿಚಾರ್ಜ್ ಪ್ಲಾನ್ ನಲ್ಲಿ ಪಡೆಯಬಹುದು. ಆದರೆ ಈ ಯೋಜನೆಯಲ್ಲಿ ಯಾವುದೇ OTT ಚಂದಾದಾರಿಕೆಯನ್ನು ಲಭ್ಯವಾಗುವುದಿಲ್ಲ.

Join Nadunudi News WhatsApp Group

Join Nadunudi News WhatsApp Group