BSNL New: 300 ದಿನಗಳ ಕಾಲ ಉಚಿತ ಕರೆ ಮತ್ತು 2GB ಉಚಿತ ಡೇಟಾ, BSNL ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಪ್ಲ್ಯಾನ್.
BSNL ಗ್ರಾಹಕರಿಗೆ 300 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ.
BSNL 300 Days Recharge Plan: ಸದ್ಯ ದೇಶದಲ್ಲಿ ಅತಿ ಅಗ್ಗದ ಟೆಲಿಕಾಂ ಕಂಪನಿಯೆಂದರೆ ಅದು BSNL ಎನ್ನಬಹುದು. BANL ನಲ್ಲಿ 18 ರೂ. ರಿಚಾರ್ಜ್ ನಿಂದ ಹಿಡಿದು 3299 ರೂ. ರಿಚಾರ್ಜ್ ಪ್ಲ್ಯಾನ್ ನವರೆಗೂ ಲಭ್ಯವಿದೆ. ವಿವಿಧ ಕಂಪನಿಗಳು ಎಷ್ಟೇ ಕಡಿಮೆ ಬೆಲೆಯ Recharge Plan ಅನ್ನು ಪರಿಚಯಿಸಿದರು BSNL ಅನ್ನು ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ ಎನ್ನಬಹುದು.
ಬೇರೆ ಕಂಪನಿಗಳ ಅರ್ಧ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಬೆಲೆಯಲ್ಲಿ BSNL ಗ್ರಾಹಕರು ವಾರ್ಷಿಕ ರಿಚಾರ್ಜ್ ಅನ್ನು ಮಾಡಿಕೊಳ್ಳುವಷ್ಟು BSNL ಅಗ್ಗವಾಗಿದೆ. ಇನ್ನು BSNL ತನ್ನ ಬಳಕೆದಾರರಿಗಾಗಿ ಇದೀಗ 800 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ಭರ್ಜರಿ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದೆ. BSNL ನ ಈ ಹೊಸ ರಿಚಾರ್ಜ್ ಯೋಜನೆಯ ಬೆಲೆ ಎಷ್ಟು? ಇಲ್ಲಿದೆ ವಿವರ.
BSNL ನ ಈ ಪ್ಲ್ಯಾನ್ ನಲ್ಲಿ ಬದಲಾವಣೆ
ಸದ್ಯ BSNL ಇದೀಗ ತನ್ನ ಗ್ರಾಹಕರಿಗೆ 300 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. BSNL ಈ ಹಿಂದೆ 797 ರೂ. ಯೋಜನೆಯನ್ನು 365 ದಿನಗಳ ಕಾಲ ಮ್ಯಾನತೆಯನ್ನು ಸೀಮಿತಪಡಿಸಿತ್ತು. ಆದರೆ ಇದೀಗ BSNL ತನ್ನ ಈ ಯೋಜನೆಯಲ್ಲಿ ಸಣ್ಣ ಬದಲಾವಣೆಯನ್ನು ಮಾಡಿದೆ. ಕಂಪನಿಯು ತನ್ನ 797 ಪ್ಲ್ಯಾನ್ ನಲ್ಲಿ ಇದೀಗ 65 ದಿನಗಳ ಮಾನ್ಯತೆಯನ್ನು ಕಡಿತಗೊಳಿಸಿದೆ. ನೀವು BSNL ನ 797 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ಸದ್ಯ 300 ದಿನಗಳ ಮಾನ್ಯತೆಯನ್ನು ಪಡೆಯುತ್ತೀರಿ.
300 ದಿನಗಳ ಕಾಲ ಉಚಿತ ಕರೆ ಮತ್ತು 2GB ಉಚಿತ ಡೇಟಾ
*ಸದ್ಯ BSNL ಗ್ರಾಹಕರು 797 ರೂ. ಯೋಜನೆ ಮೂಲಕ ಒಟ್ಟು 300 ದಿನಗಳ ಮಾನ್ಯತೆಯನ್ನು ಪಡೆಯುತ್ತೀರಿ.
*ಈ ಯೋಜನೆಯನ್ನು ಸಕ್ರಿಯಗೊಳಿಸಿದರೆ ಬಳಕೆದಾರರು ಅನಿಯಮಿತ ವಾಯ್ಸ್ ಕಾಲ್ ನ ಜೊತೆಗೆ 2GB ದೈನಂದಿನ ಡೇಟಾವನ್ನು ಪಡೆಯುತ್ತೀರಿ.
*ಇನ್ನು ಡೇಟಾ ಉಚಿತ ಕರೆಯ ಜೊತೆಗೆ 100 SMS ಗಳನ್ನೂ ಪಡೆಯಬಹುದಾಗಿದೆ.
*ಈ 797 ಪ್ಲ್ಯಾನ್ ನಿಮಗೆ 60 ದಿನಗಳವೆರೆ ಉಚಿತ ಡೇಟಾ, ಕೆರೆ, SMS ಪ್ರಯೋಜನವನ್ನು ನೀಡುತ್ತದೆ. ಎರಡು ತಿಂಗಳ ಬಳಿಕ 797 ಪ್ಲ್ಯಾನ್ ನಿಂದ ನಿಮ್ಮ ಸಿಮ್ ಸಕ್ರಿಯವಾಗಿರುತ್ತದೆ.
* 2 ತಿಂಗಳ ಬಳಿಕ ಪದೇ ಪದೇ ನೀವು ಸಿಮ್ ಸಕ್ರಿಯಗೊಳಿಸುವ ಅವಶ್ಯಕತೆ ಇರುವುದಿಲ್ಲ. ಸಿಮ್ ಸಕ್ರಿಯವಾಗಿರಿಸಲು ಈ 797 ರಿಚಾರ್ಜ್ ಪ್ಲ್ಯಾನ್ ಬಳಕೆದಾರರಿಗೆ ಉತ್ತಮ ಆಯ್ಕೆ ಎನ್ನಬಹುದು.