BSNL Plan: 365 ದಿನ ಉಚಿತ ಡೇಟಾ ಮತ್ತು ಕರೆ, ಅಗ್ಗದ ರಿಚಾರ್ಜ್ ಬಿಡುಗಡೆ ಮಾಡಿದ BSNL.
BSNL ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.
Annual Recharge Plan For BSNL: ಭಾರತೀಯ ಜನಪ್ರಿಯ ಸರ್ಕಾರೀ ಟೆಲಿಕಾಂ ಕಂಪನಿಯಾಗಿರುವ ಭಾರತ್ ಸಂಚಾರ ನಿಗಮ ಲಿಮಿಟೆಡ್ (BSLN ) ಅತಿ ಹೆಚ್ಚು ಬಳಕೆದಾರರನ್ನು ಪಡೆದುಕೊಂಡಿದೆ. ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ BSNL ಅತಿ ಕಡಿಮೆ ರಿಚಾರ್ಜ್ ಪ್ಲಾನ್ ಗಳನ್ನೂ ಹೊಂದಿದೆ.
ಈ ನಿಟ್ಟಿನಲ್ಲಿ ಗ್ರಾಹಕರು ಹೆಚ್ಚಾಗಿ BSNL ಅನ್ನು ಬಳಸುತ್ತಾರೆ. ಇನ್ನು ಬಿಎಸ್ ಏನ್ ಎಲ್ ವಿವಿಧ ಟೆಲಿಕಾಂ ಕಂಪನಿಗಳ ಜೊತೆ ಪೈಪೋಟಿ ನಡೆಸುತ್ತಿದೆ. ಇನ್ನು ಬಿಎಸ್ ಏನ್ ಎಲ್ ಅನ್ನು ಹಿಂದಿಕ್ಕಲು ಜಿಯೋ ಹಾಗು ಏರ್ಟೆಲ್ ಸೇರಿದಂತೆ ಇನ್ನಿತರ ಟೆಲಿಕಾಂ ಕಂಪನಿಗಳು ವಿವಿಧ ಯೋಜನೆಯನ್ನು ಬಿಡುಗಡೆ ಮಾಡುತ್ತಿವೆ.
ಬಿಎಸ್ ಏನ್ ಎಲ್ ಹೊಸ ಪ್ರಿಪೈಡ್ ಪ್ಲಾನ್ ಘೋಷಣೆ
ಬಿಎಸ್ಏನ್ಎಲ್ ಈ ಹೊಸ ವಾರ್ಷಿಕ ಯೋಜನೆಯಿಂದಾಗಿ ಗ್ರಾಹಕರು ತಿಂಗಳಿಗೊಮ್ಮೆ ರಿಚಾರ್ಜ್ ಮಾಡಿಕೊಳ್ಳುವ ಕೆಲಸ ತಪ್ಪುತ್ತದೆ. ಸಂಪೂರ್ಣವಾಗಿ ಒಂದು ವರ್ಷಗಳ ಕಾಲ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.ಇದೀಗ ಬಿಎಸ್ ಏನ್ ಎಲ್ ತನ್ನ ಗ್ರಾಹಕರಿಗಾಗಿ ಹೊಸ ಪ್ರಿಪೈಡ್ ಪ್ಲಾನ್ ಅನ್ನು ಘೋಷಿಸಿದೆ.
ಬಿಎಸ್ ಏನ್ ಎಲ್ ಬಳಕೆದಾರರು ಈ ಹೊಸ ಯೋಜನೆಯ ಲಾಭ ಪಡೆಯಬಹುದಾಗಿದೆ. ಇದೀಗ ಬಿಎಸ್ಏನ್ಎಲ್ ತನ್ನ ಗ್ರಾಹಕರಿಗೆ ಪರಿಚಯಿಸಿರುವ ವಾರ್ಷಿಕ ಯೋಜನೆ ಎಷ್ಟು ರೂ. ಹಾಗೂ ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವ ಯಾವ ರೀತಿಯ ಪ್ರಯೋಜನ ಲಭ್ಯವಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
365 ದಿನ ಉಚಿತ ಡೇಟಾ ಮತ್ತು ಕರೆಬಿಎಸ್ ಏನ್ ಎಲ್ ತನ್ನ ಗ್ರಾಹಕರಿಗೆ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ವಾರ್ಷಿಕ ಯೋಜನೆಯ ಬೆಲೆಯೂ 1,515 ರೂ. ಆಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಒಟ್ಟು 730GB ಡೇಟಾವನ್ನು ಪಡೆಯಬಹುದಾಗಿದೆ. ಅಂದರೆ ನೀವು ಪ್ರತಿನಿತ್ಯ 2GB ಡೇಟಾವನ್ನು ಪಡೆಯಬಹುದು. ಆದರೆ ಈ ಯೋಜನೆಯಲ್ಲಿ ಯಾವುದೇ OTT ಚಂದಾದಾರಿಕೆಯನ್ನು ನೀಡಲಾಗಿಲ್ಲ.
455 ದಿನಗಳ ಮಾನ್ಯತೆಯ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ
ಬಿಎಸ್ಏನ್ಎಲ್ ನ ಈ ಹೊಸ 2,988 ಪ್ರೀಪೈಡ್ ರಿಚಾರ್ಜ್ ಪ್ಲಾನ್ ನಿಮಗೆ ಸಾಕಷ್ಟು ಪ್ರಯೋಜನಗಳಲ್ಲೂ ನೀಡಲಿದೆ. ಈ ಪ್ರೀಪೈಡ್ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಸೌಲಭ್ಯ ದೊರೆಯಲಿದೆ. ಅನಿಯಮಿತ ಕರೆಯ ಸೌಲಭ್ಯ ಕೂಡ ಈ ಪ್ರೀಪೈಡ್ ಯೋಜನೆಯಲ್ಲಿ ಸಿಗಲಿದೆ.ಹಾಗೆಯೆ ಪ್ರತಿದಿನ 100 SMS ಸೌಲಭ್ಯದ ಜೊತೆಗೆ 455 ದಿನಗಳ ಮಾನ್ಯತೆ ಬಿಎಸ್ಏನ್ಎಲ್ ನ ಈ ಹೊಸ ರಿಚಾರ್ಜ್ ಪ್ಲಾನ್ ನಲ್ಲಿ ಲಭ್ಯವಿದೆ.
ಬಿಎಸ್ಏನ್ಎಲ್ 2,399 ಪ್ರೀಪೈಡ್ ಪ್ಲಾನ್
ಬಿ ಎಸ ಏನ್ ಎಲ್ ನ ಈ ಹೊಸ 2,399 ಪ್ರೀಪೈಡ್ ಯೋಜನೆಯು ಬಳಕೆದಾರರಿಗೆ ಸಾಕಷ್ಟು ಅನುಕೂಲಗಳನ್ನು ನೀಡಲಿದೆ. ಬಿಎಸ್ಏನ್ಎಲ್ ಬಳಕೆದಾರರು ಈ 2,399 ರೂ. ಯೋಜನೆಯನ್ನು ರಿಚಾರ್ಜ್ ಮಾಡಿಸಿಕೊಳ್ಳುದರಿಂದ ನಿಮಗೆ 365 ದಿನಗಳ ಸೇವೆ ಲಭ್ಯವಿದೆ. ಪ್ರತಿ ದಿನ ನಿಮಗೆ ಅನ್ಲಿಮಿಟೆಡ್ ಕರೆಯ ಜೊತೆಗೆ 2GB ಡೇಟಾ ಸಿಗಲಿದೆ.