BSNL: ಟೆಲಿಕಾಂ ಕ್ಷೇತ್ರದಲ್ಲಿ ಇನ್ನೊಂದು ದೊಡ್ಡ ಹೆಜ್ಜೆ ಇಟ್ಟ BSNL, ಸಂಕಷ್ಟಾದಲ್ಲಿ Jio ಮತ್ತು ಏರ್ಟೆಲ್.
ಉಳಿದ ಟೆಲಿಕಾಂ ಕಂಪನಿಗಳಿಗೆ ಠಕ್ಕರ್ ಕೊಡಲು ಹೊಸ ಸೇವೆ ಆರಂಭಿಸಿದ BSNL.
BSNL 4G Update: ಸರ್ಕಾರೀ ಟೆಲಿಕಾಂ ಕಂಪನಿಯಾಗಿರುವ BSNL ಇದೀಗ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಏರ್ ಟೆಲ್,ಜಿಯೋ, ವಡಾಪೋನ್ ಕಂಪನಿಗಳಿಗೆ ಹೋಲಿಸಿದರೆ ಬಿಎಸ್ಏನ್ಎಲ್ ಬಳಕೆದಾರರು ಅತಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳನ್ನೂ ಪಡೆಯಬಹುದು.
ಇನ್ನು ಬಿಎಸ್ ಎಂಎಲ್ ಸರ್ಕಾರದಿಂದ ಮಾನ್ಯತೆ ಪಡೆದಿರುವ ಟೆಲಿಕಾಂ ಆಗಿದೆ. ಇತ್ತೀಚಿಗೆ ಬಿಎಸ್ಏನ್ಎಲ್ ತನ್ನ ಬಳಕೆದಾರರ ಅನುಕೂಲಕ್ಕಾಗಿ ವಿವಿಧ ರೀತಿಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆಗೊಳಿಸುತ್ತಿದೆ. ಇದೀಗ ಬಿಎಸ್ಏನ್ಎಲ್ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯ ನೀಡಲು ಮುಂದಾಗಿದೆ. ಬಿಎಸ್ಏನ್ಎಲ್ ಬಿಡುಗಡೆಗೊಳಿಸಲಿರುವ ಈ ಹೊಸ ಸೌಲಭ್ಯ ವಿವಿಧ ಟೆಲಿಕಾಂ ಗಳಿಗೆ ಠಕ್ಕರ್ ನೀಡಲಿದೆ.
ಗ್ರಾಹಕರಿಗಾಗಿ ಹೊಸ ಸೇವೆ ಆರಂಭಿಸಲು ಮುಂದಾದ BSNL
ಸಾಮಾನ್ಯವಾಗಿ ಬಿಎಸ್ಏನ್ಎಲ್ ನೆಟ್ವರ್ಕ್ ಸ್ವಲ್ಪ ಮಟ್ಟಿಗೆ ಕಡಿಮೆ ವೇಗವನ್ನು ಹೊಂದಿದೆ. ಈ ಕಾರಣಕ್ಕೆ ಇದೀಗ ಬಿಎಸ್ಏನ್ಎಲ್ ತನ್ನ ಸೇವೆಯನ್ನು ವೇಗವಾಗಿಸಲು 4G ನೆಟ್ವರ್ಕ್ ಬಿಡುಗಡೆಗೊಳಿಸುವ ಸಿದ್ಧತೆಯಲ್ಲಿದೆ. BSNL ಅಂತಿಮವಾಗಿ ದೇಶದಲ್ಲಿ 4G ಸೇವೆಯನ್ನು ಪರಿಚಯಿಸಲಿದ್ದು ಈ ಬಗ್ಗೆ ವರದಿ ನೀಡಿದೆ. ಬಿಎಸ್ಏನ್ಎಲ್ ಕಂಪನಿ ಪಂಜಾಬ್ ಅಮೃತಸರದಲ್ಲಿ 4G ಸೇವೆಯನ್ನು ಪ್ರಾರಂಭಿಸಿದೆ.
ಇನ್ನುಮುಂದೆ ಬಿಎಸ್ಏನ್ಎಲ್ ಬಳಕೆದಾರರಿಗೆ 4G ಸೇವೆ ಲಭ್ಯ
BSNL 2023 ರ ಅಂತ್ಯದ ವೇಳೆಗೆ ದೇಶದ ಎಲ್ಲಾ ಭಾಗಗಳಲ್ಲಿ 4G ಸೇವೆಗಳನ್ನು ಪರಿಚಯಿಸುವ ಗುರಿಯನ್ನು ಕಂಪನಿಯು ಹೊಂದಿದೆ. ಇದಕ್ಕಾಗಿ BSNL ಇತ್ತೀಚೆಗೆ ತನ್ನ 4G ನೆಟ್‌ವರ್ಕ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಬಿಎಸ್ಏನ್ಎಲ್ ಪಂಜಾಬ್‌ನ ಫಿರೋಜ್‌ಪುರ, ಅಮೃತಸರ ಮತ್ತು ಪಠಾಣ್‌ಕೋಟ್‌ನಲ್ಲಿ 200 ಲೈವ್ ನೆಟ್‌ವರ್ಕ್ ಸೈಟ್‌ಗಳನ್ನು ಪರಿಚಯಿಸಿದೆ.
ಸದ್ಯದಲ್ಲೇ ಆರಂಭಗೊಳ್ಳಲಿದೆ BSNL 4G
ಜುಲೈ 15 2023 ರಂದು ಬಿಎಸ್ಏನ್ಎಲ್ ನ 4G ಬೀಟಾ ಲಂಚ್ ಆಗಿದೆ. ದೆಹಲಿ ಮತ್ತು ಮುಂಬೈ ಸೇರಿದಂತೆ ದೂರದ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್ಏನ್ಎಲ್ 4G ನೆಟ್ವರ್ಕ್ ಅನ್ನು ಪರಿಚಯಿಸಳ ಸಿದ್ಧತೆ ನಡೆಸುತ್ತಿದೆ. ಬಿಎಸ್ಏನ್ಎಲ್ 4G ನೆಟ್ವರ್ಕ್ ಪ್ರಸ್ತುತ ಬೀಟಾ ಹಂತದಲ್ಲಿದ್ದು ಈ ಅಪ್ಡೇಟ್ ಜಿಯೋ ಮತ್ತು ಏರ್ಟೆಲ್ ಕಂಪನಿಗಳಿಗೆ ಬಾರಿ ನಷ್ಟವನ್ನು ಉಂಟುಮಾಡಲಿದೆ. ಈ ವರ್ಷದ ಅಂತ್ಯದಲ್ಲಿ ದೇಶದ ಪ್ರತಿ ಮೂಲೆ ಮೂಲೆಯಲ್ಲೂ ಬಿಎಸ್ಏನ್ಎಲ್ 4G ಸೇವೆ ಆರಂಭಗೊಳ್ಳಲಿದೆ.