BSNL 4G: BSNL ಗ್ರಾಹಕರಿಗೆ ದೀಪಾವಳಿಯ ಹಬ್ಬಕ್ಕೆ ಬಂಪರ್ ಉಡುಗೊರೆ, BSNL ನಿಂದ ಮಹತ್ವದ ಘೋಷಣೆ.

ನೆಟ್ವರ್ಕ್ ವಿಷಯವಾಗಿ BSNL ನಿಂದ ಇನ್ನೊಂದು ದೊಡ್ಡ ಘೋಷಣೆ.

BSNL 4G Network In 2024: ಸರ್ಕಾರದಿಂದ ಮಾನ್ಯತೆ ಪಡೆದಿರುವ ಟೆಲಿಕಾಂ ಕಂಪನಿಯಾಗಿರುವ BSNL ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿದೆ ಎನ್ನಬಹುದು. ದೇಶದಲ್ಲಿ ಕೋಟ್ಯಾಂತರ ಜನರು ಮತ್ತು ಸಾಕಷ್ಟು ಕಂಪನಿಗಳು BSNL ನೆಟ್ವರ್ಕ್ ಮೇಲೆ ಅವಲಂಭಿತವಾಗಿದೆ ಎಂದು ಹೇಳಬಹುದು.

ಸಾಮಾನ್ಯವಾಗಿ BSNL ನೆಟ್ವರ್ಕ್ ಸ್ವಲ್ಪ ಮಟ್ಟಿಗೆ ಕಡಿಮೆ ವೇಗವನ್ನು ಹೊಂದಿದೆ. ಈ ಕಾರಣಕ್ಕೆ BSNL ಅಗ್ಗದ ರಿಚಾರ್ಜ್ ಪ್ಲಾನ್ ಅನ್ನು ಹೊಂದಿದ್ದರು ಕೂಡ ಹೆಚ್ಚು ಬಳಕೆದಾರರನ್ನು ಹೊಂದಿಲ್ಲ ಎನ್ನಬಹುದು. ಸದ್ಯ ದೇಶದಲ್ಲಿ BSNL ತನ್ನ ಸೇವೆಯನ್ನು ವೇಗವಾಗಿಸಲು ಮುಂದಾಗಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಹೆಚ್ಚಿನ ವೇಗದ ನೆಟ್ವರ್ಕ್ ನೀಡಲು BSNL ಹೊಸ ಹೆಜ್ಜೆ ಇಟ್ಟಿದೆ.

BSNL 4G Network In 2024
Image Credit: Bizzbuzz

BSNL ಗ್ರಾಹಕರಿಗೆ ದೀಪಾವಳಿಯ ಹಬ್ಬಕ್ಕೆ ಬಂಪರ್ ಉಡುಗೊರೆ
BSNL ತನ್ನ ಸೇವೆಯನ್ನು ವೇಗವಾಗಿಸಲು 4G ನೆಟ್ವರ್ಕ್ ಬಿಡುಗಡೆಗೊಳಿಸುವ ಸಿದ್ಧತೆಯಲ್ಲಿದೆ. BSNL ಅಂತಿಮವಾಗಿ ದೇಶದಲ್ಲಿ 4G ಸೇವೆಯನ್ನು ಪರಿಚಯಿಸಲಿದ್ದು ಈ ಬಗ್ಗೆ ವರದಿ ನೀಡಿದೆ. BSNL 2024 ರ ವೇಳೆಗೆ ದೇಶದ ಎಲ್ಲಾ ಭಾಗಗಳಲ್ಲಿ 4G ಸೇವೆಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ BSNL ಇತ್ತೀಚೆಗೆ ತನ್ನ 4G ನೆಟ್‌ವರ್ಕ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

2024 ರಲ್ಲಿ BSNL ಬಳಕೆದಾರರಿಗೆ 4G ಸೇವೆ ಲಭ್ಯ
ಬಿಎಸ್ಏನ್ಎಲ್ ಪಂಜಾಬ್‌ ನ ಫಿರೋಜ್‌ ಪುರ, ಅಮೃತಸರ ಮತ್ತು ಪಠಾಣ್‌ ಕೋಟ್‌ ನಲ್ಲಿ 200 ಲೈವ್ ನೆಟ್‌ ವರ್ಕ್ ಸೈಟ್‌ ಗಳನ್ನು ಪರಿಚಯಿಸಿದೆ. ದೇಶದ ಎಲ್ಲ ದೂರದ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್ಏನ್ಎಲ್ 4G ನೆಟ್ವರ್ಕ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. BSNL 4G ನೆಟ್ವರ್ಕ್ ಪ್ರಸ್ತುತ ಬೀಟಾ ಹಂತದಲ್ಲಿದ್ದು ಈ ಅಪ್ಡೇಟ್ ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಬಾರಿ ನಷ್ಟವನ್ನು ಉಂಟುಮಾಡಲಿದೆ. 2024 ವರ್ಷದ ಅಂತ್ಯದಲ್ಲಿ ದೇಶದ ಪ್ರತಿ ಮೂಲೆ ಮೂಲೆಯಲ್ಲೂ ಬಿಎಸ್ಏನ್ಎಲ್ 4G ಸೇವೆ ಆರಂಭಗೊಳ್ಳಲಿದೆ.

BSNL 4G Service
Image Credit: Outlookindia

ದೀಪಾವಳಿ ಹಬ್ಬಕೆ ಬೋನಸ್ ಡೇಟಾ ನೀಡುತ್ತಿರುವ BSNL
*BSNL ರೂ. 251 ರೀಚಾರ್ಜ್‌ ನಲ್ಲಿ ಹೆಚ್ಚಿನ 3GB ಡೇಟಾವನ್ನು ಒದಗಿಸುವುದಾಗಿ ಘೋಷಿಸಿದೆ. ಇದು 70GB ಡೇಟಾವನ್ನು ಜಿಂಗ್‌ ನ ಯೋಜನೆಯೊಂದಿಗೆ ಬರುತ್ತದೆ. ರೂ. 252 ರ ರೀಚಾರ್ಜ್ ವೋಚರ್ 28 ದಿನಗಳ ವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯಲ್ಲಿ ನೀವು ಹೆಚ್ಚುವರಿ ಡೇಟಾ ಪಡೆಯಬಹುದು.

Join Nadunudi News WhatsApp Group

*ಇನ್ನು ರೂ. 299 ರೀಚಾರ್ಜ್ ವೋಚರ್‌ ನೊಂದಿಗೆ ಬಳಕೆದಾರರು ತಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಿದರೆ 3GB ಡೇಟಾ ಪಡೆಯಬಹುದಾಗಿದೆ. BSNL ಸೆಲ್ಫ್ ಕೇರ್ ಅಪ್ಲಿಕೇಶನ್ ಬಳಸುವ ಮೂಲಕ ಮಾತ್ರ ಹೆಚ್ಚಿನ ಡೇಟಾ ಬೋನಸ್ ಅನ್ನು ಅನ್‌ ಲಾಕ್ ಮಾಡಬಹುದು. ರೂ. 299 ರೀಚಾರ್ಜ್ ಯೋಜನೆಯು ಈಗಾಗಲೇ ದಿನಕ್ಕೆ 3GB ಡೇಟಾ, 100 SMS ಮತ್ತು 30 ದಿನಗಳ ಮಾನ್ಯತೆಗಾಗಿ ಅನಿಯಮಿತ ಧ್ವನಿ ಕರೆಗಳ ಪ್ರಯೋಜನವನ್ನು ನೀಡುತ್ತಿದೆ.

BSNL 4G Service Latest Update
Image Credit: Telecomtalk

*ಇನ್ನು BSNL ನ ರೂ. 398 ರಿಚಾರ್ಜ್ ಪ್ಲ್ಯಾನ್ ನಲ್ಲಿ ಕೂಡ ನೀವು ಬೋನಸ್ ಡೇಟಾವನ್ನು ಪಡೆಯಬಹುದು. ಇನ್ನು ರೂ. 398 ಮೌಲ್ಯದ ವೋಚರ್ 3GB ಹೆಚ್ಚಿನ ಡೇಟಾವನ್ನು ಜೊತೆಗೆ BSNL ಈಗಾಗಲೇ ಈ ರೀಚಾರ್ಜ್ ಯೋಜನೆಯಲ್ಲಿ ಸಂಪೂರ್ಣ ಮಾನ್ಯತೆಗಾಗಿ 120GB ಡೇಟಾವನ್ನು ಅನಿಯಮಿತ STD ಮತ್ತು ಸ್ಥಳೀಯ ಧ್ವನಿ ಕರೆಗಳನ್ನು ನೀಡುತ್ತದೆ. ವೋಚರ್ 30 ದಿನಗಳ ವರೆಗೆ ಮಾನ್ಯತೆಯೊಂದಿಗೆ ದಿನಕ್ಕೆ 100 SMS ನ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group