BSNL New Plan: ಈಗ 6 ತಿಂಗಳು ರಿಚಾರ್ಜ್ ಮಾಡುವ ಅಗತ್ಯ ಇಲ್ಲ, ಕಡಿಮೆ ಬೆಲೆಗೆ 6 ತಿಂಗಳ ರಿಚಾರ್ಜ್ ಘೋಷಿಸಿದ BSNL.
ಕಡಿಮೆ ಬೆಲೆಗೆ 6 ತಿಂಗಳ ರಿಚಾರ್ಜ್ ಘೋಷಿಸಿದ BSNL.
BSNL 6 Month Recharge Plan: ಅಗ್ಗದ ರಿಚಾರ್ಜ್ ಪ್ಲ್ಯಾನ್ ಗಳಿಗೆ ಬಿಎಸ್ಏನ್ಎಲ್ (BSNL)ಹೆಸರುವಾಸಿಯಾಗಿದೆ. ಇತ್ತೀಚಿಗೆ ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇವೆ.
ವಿವಿಧ ಕಂಪನಿಗಳೇ ಅನೇಕ ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತಲಿವೆ. ಜಿಯೋ ಹಾಗೂ ಏರ್ ಟೆಲ್ ಅನ್ನು ಬಿಎಸ್ ಏನ್ ಎಲ್ ಇದೀಗ ಹಿಂದಿಕ್ಕಿದೆ. ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಏನ್ಎಲ್ ಇದೀಗ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇದೆ.
ಬಿಎಸ್ಏನ್ಎಲ್ ಭರ್ಜರಿ ಆಫರ್
ಬಿಎಸ್ಏನ್ಎಲ್ ತನ್ನ ಗ್ರಾಹಕರನ್ನು ಸೆಳೆಯಲು ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಬಿ ಎಸ್ ಏನ್ ಎಲ್ ಗ್ರಾಹಕರಿಗೆ ಅನುಕೂಲವಾಗಲು ಕಡಿಮೆ ಬೆಲೆಯಲ್ಲಿ ಅರ್ಧ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಈಗ ಬಿಡುಗಡೆ ಮಾಡಿದೆ. ಬಿ ಎಸ್ ಏನ್ ಎಲ್ ಈ ಹೊಸ ರಿಚಾರ್ಜ್ ಪ್ಲ್ಯಾನ್ ಬಳಕೆದಾರರಿಗೆ ಸಹಾಯವಾಗಲಿದೆ. ಸಾಮಾನ್ಯವಾಗಿ ಮಾಸಿಕ ತ್ರೈಮಾಸಿಕ ಯೋಜನೆಗಳಿಗೆ ಹೋಲಿಸಿದೆ ಈ ಹೊಸ ರಿಚಾರ್ಜ್ ಪ್ಲ್ಯಾನ್ ಹೆಚ್ಚಿನ ಹಣ ಉಳಿಸಲಿದೆ. ತಿಂಗಳ ರಿಚಾರ್ಜ್ ಚಿಂತೆಯನ್ನು ಈ ಹೊಸ ಪ್ಲ್ಯಾನ್ ನಿವಾರಿಸಲಿದೆ.
ಕಡಿಮೆ ಬೆಲೆಯಲ್ಲಿ 6 ತಿಂಗಳ ವ್ಯಾಲಿಡಿಟಿ
ಬಿಎಸ್ಏನ್ಎಲ್ ಬಳಕೆದಾರರು ಅತಿ ಕಡಿಮೆ ಬೆಲೆಯಲ್ಲಿ ಆರು ತಿಂಗಳ ಮಾನ್ಯತೆಯನ್ನು ಪಡೆಯಲು ಇದೀಗ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಕಂಪನಿಯು ಪರಿಚಯಿಸಿದೆ. ಬಿಎಸ್ಏನ್ಎಲ್ ನ ಈ ಹೊಸ ರಿಚಾರ್ಜ್ ಪ್ಲ್ಯಾನ್ 498 ಬೆಲೆಯದ್ದಾಗಿದೆ. ಈ 498 ಯೋಜನೆಯನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರರು ಬರೋಬ್ಬರಿ 180 ದಿನ ಅಂದರೆ 6 ತಿಂಗಳವರೆಗೆ ಯೋಜನೆಯ ಲಾಭ ಪಡೆಯಬಹುದು.
ಬಿಎಸ್ಏನ್ಎಲ್ ಈ ಹೊಸ ರಿಚಾರ್ಜ್ ಪ್ಲ್ಯಾನ್ ಬಿಎಸ್ಏನ್ಎಲ್ ನೆಟ್ವರ್ಕ್ ಗೆ ನಿಮಿಷಕ್ಕೆ 10 ಪೈಸೆ ಕಟ್ಟಾದರೆ ಇತರ ನೆಟ್ವರ್ಕ್ ಗಳಿಗೆ ನಿಮಿಷಕ್ಕೆ 30 ಪೈಸೆ ಶುಲ್ಕ ಅನ್ವಯಿಸುತ್ತದೆ. ಈ ಯೋಜನೆಯ ಮೂಲಕ ಬಳಕೆದಾರರು 100 ರೂ. ಮೌಲ್ಯದ ಟಾಕ್ ಟೈಮ್ ಅನ್ನು ಪಡೆಯಬಹುದು. ಆದರೆ ಈ ಪ್ಲ್ಯಾನ್ ನಲ್ಲಿ ಬಳಕೆದಾರರಿಗೆ ಯಾವುದೇ ರೀತಿಯ ಡೇಟಾ, ಎಸ್ ಎಂಎಸ್ ಅಥವಾ ಉಚಿತ ಕರೆಯ ಪ್ರಯೋಜನ ಲಭ್ಯವಿಲ್ಲ. ಬಿಎಸ್ಏನ್ಎಲ್ ಸಿಮ್ ಸಕ್ರಿಯಗೊಳಿಸುವಿಕೆಗೆ ಈ 498 ರಿಚಾರ್ಜ್ ಪ್ಲ್ಯಾನ್ ಉತ್ತಮವಾಗಿದೆ.
ಉಚಿತ ಕರೆ ಮತ್ತು ಡೇಟಾ ನೀಡುವ ಯೋಜನೆಗಳು
ಬಿಎಸ್ಏನ್ಎಲ್ ತನ್ನ ಗ್ರಾಹಕರಿಗಾಗಿ 84 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 599 ಹಾಗೂ 769 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಉಚಿತ ಕರೆ, ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು.
ಬಿಎಸ್ಏನ್ಎಲ್ 599 ಯೋಜನೆಯ ಮೂಲಕ ಬಳಕೆದಾರರು ಪ್ರತಿನಿತ್ಯ 3GB ಡೇಟಾ, 100 SMS ಹಾಗೆ ಉಚಿತ ಕರೆ ಪಡೆಯಬಹುದು. ಇನ್ನು ಬಿಎಸ್ಏನ್ಎಲ್ 769 ಯೋಜನೆಯ ಮೂಲಕ ಬಳಕೆದಾರರು ಪ್ರತಿನಿತ್ಯ 2GB ಡೇಟಾ, 100 SMS ಹಾಗೆ ಉಚಿತ ಕ್ತೇ ಪಡೆಯಬಹುದು. ಬಿಎಸ್ಏನ್ಎಲ್ 769 ಯೋಜನೆಯು ಓಟಿಟಿ ಪ್ಲಾಟ್ ಫಾರ್ಮ್ ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.