BSNL Annual Plan: ಒಮ್ಮೆ ರಿಚಾರ್ಜ್ ಮಾಡಿದರೆ 1 ವರ್ಷ ಕಿರಿಕಿರಿ ಇಲ್ಲ, BSNL ಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಣೆ.

BSNL ಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಣೆ

BSNL Best Annual Recharge Plan: ಪ್ರಸ್ತುತ ದೇಶದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸುತ್ತ ಒಂದಕ್ಕೊಂದು ಪೈಪೋಟಿ ನೀಡುತ್ತಲೇ ಇರುತ್ತದೆ. ಇದರ ಬೆನ್ನಲ್ಲೇ ಜುಲೈ 3 ರಿಂದ Airtel, Jio ತನ್ನ ರಿಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚಿಸಿದೆ.

ಈಗಾಗಲೇ ಅತಿ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಗಳಿಗೆ ಹೆಸರುವಾಸಿಯಾಗಿರುವ BSNL , Airtel, Jio ರಿಚಾರ್ಜ್ ಪ್ಲಾನ್ ಗಳಿಗೆ ಹೋಲಿಸಿದರೆ ಇನ್ನುಮುಂದೆ ಇನ್ನಷ್ಟು ಅಗ್ಗವಾಗಲಿದೆ. ಇನ್ನು ಏರ್ಟೆಲ್ ಮತ್ತು ಜಿಯೋ ವಾರ್ಷಿಕ ಪ್ಲಾನ್ 2999 ರೂ. ಆಗಿದ್ದರೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಯಾದ BSNL ಕೇವಲ 1999 ಬೆಲೆಯಲ್ಲಿ ನಿಮಗೆ ವಾರ್ಷಿಕ ಮಾನ್ಯತೆಯನ್ನು ನೀಡುತ್ತದೆ. ನಾವೀಗ ಈ ಲೇಖನದಲ್ಲಿ BSNL ನ ಈ ವಾರ್ಷಿಕ ಪ್ಲಾನ್ ನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

BSNL New Recharge Plan 2024
Image Credit: 91 Mobiles

ಒಮ್ಮೆ ರಿಚಾರ್ಜ್ ಮಾಡಿದರೆ 1 ವರ್ಷ ಕಿರಿಕಿರಿ ಇಲ್ಲ
ಬೇರೆ ಕಂಪನಿಗಳ ಅರ್ಧ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಬೆಲೆಯಲ್ಲಿ BSNL ಗ್ರಾಹಕರು ವಾರ್ಷಿಕ ರಿಚಾರ್ಜ್ ಅನ್ನು ಮಾಡಿಕೊಳ್ಳುವಷ್ಟು BSNL ಅಗ್ಗವಾಗಿದೆ. ಇನ್ನು BSNL ತನ್ನ ಬಳಕೆದಾರರಿಗಾಗಿ ಇದೀಗ OTT ಪ್ಲಾಟ್ ಫಾರ್ಮ್ ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುವುದರ ಜೊತೆಗೆ 600GB ಡೇಟಾ ನೀಡುವ ಹೊಸ ವಾರ್ಷಿಕ ಯೋಜನೆಯನ್ನು ಪರಿಚಯಿಸಿದೆ. ನೀವು BSNL ಗ್ರಾಹಕರಾಗಿದ್ದರೆ ಕಂಪನಿ ಬಿಡುಗಡೆಗೊಳಿಸಿರುವ ನೂತನ ಪ್ಲಾನ್ ವಿವರ ತಿಳಿದುಕೊಳ್ಳಿ.

BSNL ಇದೀಗ ತನ್ನ ಗ್ರಾಹಕರಿಗೆ ಅನುಕೂಲವಾಗಲು ಹೊಸ ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅಂದರೆ ಒಂದು ವರ್ಷದವರೆಗೆ ಮಾನ್ಯತೆ ನೀಡಲಿದೆ. BSNL ತನ್ನ ಗ್ರಾಹಕರಿಗಾಗಿ 1999 ರಿಚಾರ್ಜ್ ಪ್ಲ್ಯಾನ್ ಬಿಡುಗಡೆಗೊಳಿಸಿದ್ದು ಈ ಯೋಜನೆಯು ಬಳಕೆದಾರರಿಗೆ ಒಟ್ಟಾರೆ 600GB ಡೇಟಾ ನೀಡಲಿದೆ. ಡೇಟಾ ಜೊತೆಗೆ ಉಚಿತ ಕರೆಯ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ OTT ಚಂದಾದಾರಿಕೆಯನ್ನು ಕೂಡ ಪಡೆಯಬಹುದಾಗಿದೆ.

BSNL Best Annual Recharge Plan
Image Credit: Indianexpress

BSNL ಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಣೆ
ಇನ್ನು BSNL ಬಳಕೆದಾರರು ಈ 1499 ರೂ. ಯೋಜನೆಯನ್ನು ರಿಚಾರ್ಜ್ ಮಾಡಿಸಿಕೊಳ್ಳುದರಿಂದ ನಿಮಗೆ 336 ದಿನಗಳ ಉಚಿತ ಸೇವೆ ಲಭ್ಯವಿದೆ. ಈ ಪ್ರೀಪೈಡ್ ಯೋಜನೆಯಲ್ಲಿ ಒಟ್ಟಾರೆ 24GB ಡೇಟಾ ಸೌಲಭ್ಯ ದೊರೆಯಲಿದೆ. ಪ್ರತಿದಿನ 100 SMS ಸೌಲಭ್ಯದ ಜೊತೆಗೆ ಅನಿಯಮಿತ ಕರೆಯ ಸೌಲಭ್ಯ ಕೂಡ ಈ ಪ್ರೀಪೈಡ್ ಯೋಜನೆಯಲ್ಲಿ ಸಿಗಲಿದೆ. ಡೇಟಾ ಮಿತಿಯನ್ನು ತಲುಪಿದ ನಂತರ BSNL ನ ಗ್ರಾಹಕರು 40Kbps ವೇಗದಲ್ಲಿ ಡಾಟಾವನ್ನು ಪಡೆಯಬಹುದು.

Join Nadunudi News WhatsApp Group

BSNL Annual Recharge Plan
Image Credit: Digit

Join Nadunudi News WhatsApp Group