BSNL Voucher: ದೀಪಾವಳಿ ಹಬ್ಬದ ಭರ್ಜರಿ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ BSNL , ಪ್ರತಿನಿತ್ಯ 3GB ಡಾಟಾ ಜೊತೆ ಅನಿಯಮಿತ ಕರೆ.

ದೀಪಾವಳಿ ಹಬ್ಬಕ್ಕೆ ಭರ್ಜರಿ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ BSNL.

BSNL Diwali Bonus Data Offer: ಸದ್ಯ ದೇಶದ ಜನಪ್ರಿಯ ಟೆಲಿಕಾಂ ಕಂಪೆನಿಯಾದ BSNL ಇದೀಗ ದೀಪಾವಳಿಯ ವಿಶೇಷಕ್ಕೆ ತನ್ನ ಬಳಕೆದಾರರಿಗೆ ಭರ್ಜರಿ ಆಫರ್ ಅನ್ನು ನೀಡುತ್ತಿದೆ. BSNL ನೆಟ್ವರ್ಕ್ ಬಳಕೆದಾರರು ಇದೀಗ ದೀಪಾವಳಿ ಹಬ್ಬದ ವಿಶೇಷಕ್ಕೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ಈಗಾಗಲೇ ದೇಶದಲ್ಲಿ ಅತಿ ಹೆಚ್ಚು ಅಗ್ಗದ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಪರಿಚಯಿಸುವ ಮೂಲಕ BSNL ಎಲ್ಲರಿಗು ಹತ್ತಿರವಾಗಿತ್ತು. ಸದ್ಯ ದಿವಾಲಿ ಆಫರ್ ಗಾಗಿ BSNL ತನ್ನ ಬಳಕೆದಾರರಿಗೆ ಮೂರು ರಿಚಾರ್ಜ್ ಪ್ಲ್ಯಾನ್ ಗಳಲ್ಲಿ ಹೆಚ್ಚುವರಿ ಪ್ರಯೋಜನವನ್ನು ನೀಡಲು ನಿರ್ಧರಿಸಿದೆ. ಈ ದಿವಾಲಿ ಆಫರ್ ನಲ್ಲಿ ಬಳಕೆದಾರರು ಹೆಚ್ಚಿನ ಡೇಟಾವನ್ನು ಪಡೆಯಬಹುದು.

bsnl recharge plan
Image Credit: Khabriexpress

ದೀಪಾವಳಿ ಹಬ್ಬದ ಭರ್ಜರಿ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ BSNL
BSNL ದೀಪಾವಳಿ ಹಬ್ಬಕ್ಕೆ ತನ್ನ ವಿಶೇಷ ಡೇಟಾ ಕೊಡುಗೆಯನ್ನು ಘೋಷಿಸಿದೆ. BSNL ಸೆಲ್ಫ್ ಕೇರ್ ಅಪ್ಲಿಕೇಶನ್ ಅಥವಾ ಪೋರ್ಟಲ್ ಬಳಸಿ ಬಳಕೆದಾರರು ರಿಚಾರ್ಜ್ ಮಾಡಿದರೆ ಮಾತ್ರ ಹೆಚ್ಚಿನ ಡೇಟಾವನ್ನು ಪಡೆಯಬಹುದು. ಇದೀಗ BSNL ನ ಯಾವ ರಿಚಾರ್ಜ್ ಪ್ಲ್ಯಾನ್ ನಲ್ಲಿ ಹೆಚ್ಚುವರಿ ಡೇಟಾ ಲಭ್ಯವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

BSNL ನ ರೂ. 251 ರಿಚಾರ್ಜ್ ಪ್ಲ್ಯಾನ್
BSNL ರೂ. 251 ರೀಚಾರ್ಜ್‌ ನಲ್ಲಿ ಹೆಚ್ಚಿನ 3GB ಡೇಟಾವನ್ನು ಒದಗಿಸುವುದಾಗಿ ಘೋಷಿಸಿದೆ. ಇದು 70GB ಡೇಟಾವನ್ನು ಜಿಂಗ್‌ ನ ಯೋಜನೆಯೊಂದಿಗೆ ಬರುತ್ತದೆ. ರೂ. 252 ರ ರೀಚಾರ್ಜ್ ವೋಚರ್ 28 ದಿನಗಳ ವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯಲ್ಲಿ ನೀವು ಹೆಚ್ಚುವರಿ ಡೇಟಾ ಪಡೆಯಬಹುದು. 28 ದಿನಗಳು ಮುಗಿದ ನಂತರ ಹೆಚ್ಚುವರಿ ಡೇಟಾ ಸಹ ಮುಕ್ತಾಯಗೊಳ್ಳುತ್ತದೆ.

BSNL Diwali Bonus Data Offer
Image Credit: Gizbot

BSNL ನ ರೂ. 299 ರಿಚಾರ್ಜ್ ಪ್ಲ್ಯಾನ್
ಇನ್ನು ರೂ. 299 ರೀಚಾರ್ಜ್ ವೋಚರ್‌ ನೊಂದಿಗೆ ಬಳಕೆದಾರರು ತಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಿದರೆ 3GB ಡೇಟಾ ಪಡೆಯಬಹುದಾಗಿದೆ. BSNL ಸೆಲ್ಫ್ ಕೇರ್ ಅಪ್ಲಿಕೇಶನ್ ಬಳಸುವ ಮೂಲಕ ಮಾತ್ರ ಹೆಚ್ಚಿನ ಡೇಟಾ ಬೋನಸ್ ಅನ್ನು ಅನ್‌ ಲಾಕ್ ಮಾಡಬಹುದು. ರೂ. 299 ರೀಚಾರ್ಜ್ ಯೋಜನೆಯು ಈಗಾಗಲೇ ದಿನಕ್ಕೆ 3GB ಡೇಟಾ, 100 SMS ಮತ್ತು 30 ದಿನಗಳ ಮಾನ್ಯತೆಗಾಗಿ ಅನಿಯಮಿತ ಸ್ಥಳೀಯ ಮತ್ತು STD ಧ್ವನಿ ಕರೆಗಳ ಪ್ರಯೋಜನವನ್ನು ನೀಡುತ್ತಿದೆ.

Join Nadunudi News WhatsApp Group

BSNL ನ ರೂ. 398 ರಿಚಾರ್ಜ್ ಪ್ಲ್ಯಾನ್
ಇನ್ನು BSNL ನ ರೂ. 398 ರಿಚಾರ್ಜ್ ಪ್ಲ್ಯಾನ್ ನಲ್ಲಿ ಕೂಡ ನೀವು ಬೋನಸ್ ಡೇಟಾವನ್ನು ಪಡೆಯಬಹುದು. ಇನ್ನು ರೂ. 398 ಮೌಲ್ಯದ ವೋಚರ್ 3GB ಹೆಚ್ಚಿನ ಡೇಟಾವನ್ನು ಜೊತೆಗೆ BSNL ಈಗಾಗಲೇ ಈ ರೀಚಾರ್ಜ್ ಯೋಜನೆಯಲ್ಲಿ ಸಂಪೂರ್ಣ ಮಾನ್ಯತೆಗಾಗಿ 120GB ಡೇಟಾವನ್ನು ಅನಿಯಮಿತ STD ಮತ್ತು ಸ್ಥಳೀಯ ಧ್ವನಿ ಕರೆಗಳನ್ನು ನೀಡುತ್ತದೆ. ವೋಚರ್ 30 ದಿನಗಳ ವರೆಗೆ ಮಾನ್ಯವಾಗಿರುತ್ತದೆ ಮತ್ತು ದಿನಕ್ಕೆ 100 SMS ನ ಪ್ರಯೋಜನವನ್ನು ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ಪಡೆಯಬಹುದು.

Join Nadunudi News WhatsApp Group