BSNL Plan: ಪ್ರತಿನಿತ್ಯ 2GB ಡೇಟಾ ಫ್ರೀ ಜೊತೆಗೆ ಅನಿಯಮಿತ ಕರೆ, BSNL ಗ್ರಾಹಕರಿಗೆ ನವರಾತ್ರಿ ಬಿಗ್ ರಿಚಾರ್ಜ್ ಆಫರ್.

ನವರಾತ್ರಿ ಹಬ್ಬಕ್ಕೆ ವಿಶೇಷ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದ BSNL.

BSNL Monthly Recharge Plan: ಸದ್ಯ ದೇಶದಲ್ಲಿ ಸರ್ಕಾರೀ ಸ್ವಾಮ್ಯದ ಟೆಲಿಕಾಂ ಕಂಪನಿಯಾದ BSNL ಇತ್ತೀಚಿಗೆ ಹೊಸ ಹೊಸ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸುತ್ತಿದೆ. ಅತಿ ಅಗ್ಗದ ರಿಚಾರ್ಜ್ ಪ್ಲಾನ್ ನೀಡಲು BSNL ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಲಭ್ಯವಿರುವ ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ BSNL ಅತಿ ಕಡಿಮೆ ಖರ್ಚಿನಲ್ಲಿ ತಿಂಗಳ ರಿಚಾರ್ಜ್ ಪ್ಲಾನ್ ಅನ್ನು ನೀಡುತ್ತಿದೆ.

ದೇಶದಲ್ಲಿ BSNL ಇದೀಗ 4G ನೆಟ್ವರ್ಕ್ ನೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಕಡಿಮೆ ಬೆಲೆಯ್ಲಲಿ 4G ಸ್ಪೀಡ್ ನಲ್ಲಿ ಲಭ್ಯವಾಗುವ BSNL ಅನ್ನು ಹೆಚ್ಚಿನ ಜನರು ಬಳಸುತ್ತಾರೆ. ಇನ್ನು BSNL ನಲ್ಲಿ 200 ರೂ. ಗಿಂತಲೂ ಕೆಡಿಮೆ ಬೆಲೆಯಲ್ಲಿ ಮಾಸಿಕ್ ಪ್ಲಾನ್ ಲಭ್ಯವಿರುವ ಬಗ್ಗೆ ಅದೆಷ್ಟು ಬಳಕೆದಾರರಿಗೆ ತಿಳಿದಿಲ್ಲ. ನೀವು ಮಾಸಿಕ ರಿಚಾರ್ಜ್ ಮಾಡಿಸಿಕೊಳ್ಳುವವರಾದರೆ ಈ ಯೋಜನೆ ನಿಮಗೆ ಬೆಸ್ಟ್ ಎನ್ನಬಹುದು.

BSNL Monthly Recharge Plan
Image Credit: Moneycontrol

ಪ್ರತಿನಿತ್ಯ 2GB ಡೇಟಾ ಜೊತೆಗೆ ಅನಿಯಮಿತ ಕರೆ
BSNL ಇದೀಗ ವಿಶೇಷ ಮಾಸಿಕ ರಿಚಾರ್ಜ್ ಪ್ಲಾನ್ ಅನ್ನು ಪರಿಚ್ಯಿಸಿದೆ. ಈ ಹೊಸ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರು ಅನಿಯಮಿತ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ 2GB ಡೇಟಾವನ್ನು ಪಡೆಯುವದರ ಜೊತೆಗೆ ಅನಿಯಮಿತ ಕರೆಯ ಸೌಲಭ್ಯವನ್ನು ಪಡೆಯಬಹುದು. ಪ್ರತಿನಿತ್ಯ 2GB ಡೇಟಾ ಜೊತೆಗೆ ಅನಿಯಮಿತ ಕರೆ ನೀಡುವ BSNL ನ ಈ ರಿಚಾರ್ಜ್ ಪ್ಲಾನ್ ನ ಬೆಲೆ ಎಷ್ಟು? ಎಂದು ಯೋಚಿಸುತ್ತಿದ್ದೀರಾ ಇಲ್ಲಿದೆ ಮಾಹಿತಿ.

BSNL Plan Latest
Image Credit: Loksatta

BSNL ಗ್ರಾಹಕರಿಗೆ ನವರಾತ್ರಿ ಬಿಗ್ ರಿಚಾರ್ಜ್ ಆಫರ್
ಇದೀಗ BSNL ತನ್ನ ಗ್ರಾಹಕರಿಗೆ ದಸರಾ ಹಾಗೂ ನವರಾತ್ರಿ ಹಬ್ಬಕ್ಕೆ ವಿಶೇಷ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ನೀವು BSNL ನ 199 ಪ್ರೀಪೈಡ್ ಯೋಜನೆ ಮೂಲಕ ಪ್ರತಿನಿತ್ಯ 2GB ಡೇಟಾ ಜೊತೆಗೆ ಅನಿಯಮಿತ ಕರೆ ಹಾಗೂ SMS ಸೌಲಭ್ಯವನ್ನು ಪಡೆಯಬಹುದು. BSNL ನ ಈ 199 ರೂ. ರಿಚಾರ್ಜ್ ಪ್ಲಾನ್ ನಿಮಗೆ 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ನೀವು 30 ದಿನಗಳವರೆಗೆ ಕೇವಲ 199 ರೂ. ಗಳಲ್ಲಿ ಅನಿಯಮಿತ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group