BSNL Annual Plan: 365 ದಿನ ರಿಚಾರ್ಜ್ ಮಾಡುವ ಅಗತ್ಯಾನೇ ಇಲ್ಲ, ಅಗ್ಗದ BNSL ರಿಚಾರ್ಜ್ ಪ್ಲ್ಯಾನ್ ಲಾಂಚ್
BSNL ನಲ್ಲಿ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ನ ಬೆಲೆ ಎಷ್ಟಿದೆ ಗೊತ್ತಾ..?
BSNL Best Annual Recharge Plan: ಪ್ರಸ್ತುತ ದೇಶದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸುತ್ತ ಒಂದಕ್ಕೊಂದು ಪೈಪೋಟಿ ನೀಡುತ್ತಲೇ ಇರುತ್ತದೆ. ಇದರ ಬೆನ್ನಲ್ಲೇ ಜುಲೈ 3 ರಿಂದ Airtel, Jio ತನ್ನ ರಿಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚಿಸಿದೆ.
ಈಗಾಗಲೇ ಅತಿ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಗಳಿಗೆ ಹೆಸರುವಾಸಿಯಾಗಿರುವ BSNL , Airtel, Jio ರಿಚಾರ್ಜ್ ಪ್ಲಾನ್ ಗಳಿಗೆ ಹೋಲಿಸಿದರೆ ಇನ್ನುಮುಂದೆ ಇನ್ನಷ್ಟು ಅಗ್ಗವಾಗಲಿದೆ. ನಾವೀಗ ಈ ಲೇಖನದಲ್ಲಿ BSNL ನ ಈ ವಾರ್ಷಿಕ ಪ್ಲಾನ್ ನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
BSNL ನಲ್ಲಿ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ನ ಬೆಲೆ ಎಷ್ಟಿದೆ ಗೊತ್ತಾ..?
•BSNL ಇದೀಗ ತನ್ನ ಗ್ರಾಹಕರಿಗೆ ಅನುಕೂಲವಾಗಲು ಹೊಸ ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅಂದರೆ ಒಂದು ವರ್ಷದವರೆಗೆ ಮಾನ್ಯತೆ ನೀಡಲಿದೆ. BSNL ತನ್ನ ಗ್ರಾಹಕರಿಗಾಗಿ 1999 ರಿಚಾರ್ಜ್ ಪ್ಲ್ಯಾನ್ ಬಿಡುಗಡೆಗೊಳಿಸಿದ್ದು ಈ ಯೋಜನೆಯು ಬಳಕೆದಾರರಿಗೆ ಒಟ್ಟಾರೆ 600GB ಡೇಟಾ ನೀಡಲಿದೆ. ಡೇಟಾ ಜೊತೆಗೆ ಉಚಿತ ಕರೆಯ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ OTT ಚಂದಾದಾರಿಕೆಯನ್ನು ಕೂಡ ಪಡೆಯಬಹುದಾಗಿದೆ.
•ಇನ್ನು BSNL ಬಳಕೆದಾರರು ಈ 1499 ರೂ. ಯೋಜನೆಯನ್ನು ರಿಚಾರ್ಜ್ ಮಾಡಿಸಿಕೊಳ್ಳುದರಿಂದ ನಿಮಗೆ 336 ದಿನಗಳ ಉಚಿತ ಸೇವೆ ಲಭ್ಯವಿದೆ. ಈ ಪ್ರೀಪೈಡ್ ಯೋಜನೆಯಲ್ಲಿ ಒಟ್ಟಾರೆ 24GB ಡೇಟಾ ಸೌಲಭ್ಯ ದೊರೆಯಲಿದೆ. ಪ್ರತಿದಿನ 100 SMS ಸೌಲಭ್ಯದ ಜೊತೆಗೆ ಅನಿಯಮಿತ ಕರೆಯ ಸೌಲಭ್ಯ ಕೂಡ ಈ ಪ್ರೀಪೈಡ್ ಯೋಜನೆಯಲ್ಲಿ ಸಿಗಲಿದೆ. ಡೇಟಾ ಮಿತಿಯನ್ನು ತಲುಪಿದ ನಂತರ BSNL ನ ಗ್ರಾಹಕರು 40Kbps ವೇಗದಲ್ಲಿ ಡಾಟಾವನ್ನು ಪಡೆಯಬಹುದು.
•ಬಿಎಸ್ಏನ್ಎಲ್ ನ ಈ ಹೊಸ 2,999 ಪ್ರೀಪೈಡ್ ರಿಚಾರ್ಜ್ ಪ್ಲ್ಯಾನ್ ನಿಮಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಈ ಪ್ರೀಪೈಡ್ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಸೌಲಭ್ಯ ದೊರೆಯಲಿದೆ. ಅನಿಯಮಿತ ಕರೆಯ ಸೌಲಭ್ಯ ಕೂಡ ಈ ಪ್ರೀಪೈಡ್ ಯೋಜನೆಯಲ್ಲಿ ಸಿಗಲಿದೆ. ಹಾಗೆಯೆ ಪ್ರತಿದಿನ 100 SMS ಸೌಲಭ್ಯದ ಜೊತೆಗೆ 365 ದಿನಗಳ ಮಾನ್ಯತೆ BSNL ನ ಈ ಹೊಸ ರಿಚಾರ್ಜ್ ಪ್ಲ್ಯಾನ್ ನಲ್ಲಿ ಲಭ್ಯವಿದೆ. ಡೇಟಾ ಮಿತಿಯನ್ನು ತಲುಪಿದ ನಂತರ BSNL ನ ಗ್ರಾಹಕರು 40Kbps ವೇಗದಲ್ಲಿ ಡಾಟಾವನ್ನು ಪಡೆಯಬಹುದು.
•ಇನ್ನು BSNL ಬಳಕೆದಾರರು ಈ 2,399 ರೂ. ಯೋಜನೆಯನ್ನು ರಿಚಾರ್ಜ್ ಮಾಡಿಸಿಕೊಳ್ಳುದರಿಂದ ನಿಮಗೆ 365 ದಿನಗಳ ಸೇವೆ ಲಭ್ಯವಿದೆ. ಪ್ರತಿ ದಿನ ನಿಮಗೆ ಅನ್ಲಿಮಿಟೆಡ್ ಕರೆಯ ಜೊತೆಗೆ 2GB ಡೇಟಾ ಸಿಗಲಿದೆ. ಹಾಗೆಯೆ ಪ್ರತಿದಿನ 100 SMS ಸೌಲಭ್ಯದ ಜೊತೆಗೆ 365 ದಿನಗಳ ಮಾನ್ಯತೆ ಲಭ್ಯವಿದೆ.