BSNL: 197 ರೂ ರಿಚಾರ್ಜ್ ಮಾಡಿದರೆ 70 ದಿನ ಅನಿಯಮಿತ ಕರೆ ಮತ್ತು ಡೇಟಾ, ಬಂಪರ್ ಆಫರ್ ಘೋಷಣೆ.
BSNL ಗ್ರಾಹಕರಿಗೆ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ, ಈ ರಿಚಾರ್ಜ್ ಪ್ಲಾನ್ ನಲ್ಲಿ 70 ದಿನಗಳ ತನಕ ಸಿಗಲಿದೆ ಉಚಿತ ಡೇಟಾ ಮತ್ತು ಕರೆ.
BSNL New Recharge Plan: ಸರ್ಕಾರೀ ಟೆಲಿಕಾಂ ಕಂಪನಿಯಾದ ಬಿ ಎಸ್ ಏನ್ ಎಲ್ (BSNL) ತನ್ನ ಗ್ರಾಹಕರಿಗೆ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡುತ್ತಿದೆ. ಬಿ ಎಸ್ ಏನ್ ಎಲ್ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಕಾರಣವಾಗುತ್ತಿದೆ.
ಬಿ ಎಸ್ ಏನ್ ಎಲ್ ಬಳಕೆದಾರರಿಗೆ ಅಗ್ಗದ ಅತ್ಯಂತ ಕೈಗೆಟಕುವ ಯೋಜನೆಯನ್ನು ಇದೀಗ ಕಂಪನಿ ಬಿಡುಗಡೆ ಮಾಡಿದೆ. BSNL ಈಗ 200 ರೂಪಾಯಿ ಒಳಗಿನ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ಅನಿಯಮಿತ ಕರೆ ಉಚಿತ SMS ಸೌಲಭ್ಯಗಳನ್ನು ನೀಡಲಾಗುತ್ತದೆ. ನೀವು BSNL ಬಳಕೆದಾರರಾಗಿದ್ದರೆ ಈ ಯೋಜನೆಯ ಪಯೋಜನವನ್ನು ಪಡೆಯಬಹುದು.
ಬಿ ಎಸ್ ಎಲ್ ಎಲ್ 197 ರೂಪಾಯಿ ರಿಚಾರ್ಜ್ ಪ್ಲ್ಯಾನ್
BSNL ನ ಈ ಯೋಜನೆಯ ಬೆಲೆ 197 ರೂಪಾಯಿ ಆಗಿದೆ. ಈ ರಿಚಾರ್ಜ್ ಪ್ಲ್ಯಾನ್ 70 ದಿನಗಳ ವರೆಗೆ ಮಾನ್ಯತೆ ಇರುತ್ತದೆ. ಈ ಯೋಜನೆಯು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ನೀಡಲಾಗುತ್ತಿದೆ.
ಈ ಯೋಜನೆಯಲ್ಲಿ ಇಂಟರ್ ನೆಟ್ ಬಳಸಲು ಪ್ರತಿದಿನ 2GB ಡೇಟಾ ಸಹ ಲಭ್ಯವಿದೆ. ಇದು ಮುಗಿದ ನಂತರ ಬಳಕೆದಾರರಿಗೆ 40 Kbps ವೇಗವನ್ನು ನೀಡಲಾಗುತ್ತದೆ. ಇದಲ್ಲದೆ ಯೋಜನೆಯಲ್ಲಿ ಪ್ರತಿದಿನ 100 sms ನೀಡಲಾಗುತ್ತಿದೆ. ಇದರೊಂದಿಗೆ ZING ಅಪ್ಲಿಕೇಶನ್‌ಗೆ ಪ್ರವೇಶವನ್ನು ಸಹ ನೀಡಲಾಗುವುದು.
ಇದರಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳ ಲಾಭವನ್ನು ಕೇವಲ 15 ದಿನಗಳ ವರೆಗೆ ನೀವು ಪಡೆಯಬಹುದು. ಅಂದರೆ 15 ದಿನಗಳ ನಂತರ ನೀವು ಈ ಸೌಲಭ್ಯಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಯೋಜನೆಯ ಮಾನ್ಯತೆಯೂ 70 ದಿನಗಳ ವರೆಗೆ ಇರುತ್ತದೆ. ಆದರೆ ಲಭ್ಯವಿರುವ ಪ್ರಯೋಜನಗಳು ಕೇವಲ 15 ದಿನಗಳ ವರೆಗೆ ಮಾತ್ರ ಆಗಿದೆ.