BSNL 251 Rs Recharge Plan Benefits: ದೇಶದ ಸರ್ಕಾರೀ ಸ್ವಾಮ್ಯದ ಟೆಲಿಕಾಂ ಕಂಪನಿಯಾದ BSNL ಈಗ ತನ್ನ ಗ್ರಾಹಕರಿಗೆ ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ. 30 ದಿನಗಳ ರಿಚಾರ್ಜ್ ಪ್ಲ್ಯಾನ್ ಇದಾಗಿದೆ ಮತ್ತು ದಿನಕ್ಕೆ 100 GB ಡೇಟಾ ಕೂಡ ಪಡೆದುಕೊಳ್ಳಬಹುದು. ಜಿಯೋ ಮತ್ತು ಏರ್ಟೆಲ್ ನಂತರ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ಕೊಡುವ ರಿಚಾರ್ಜ್ ಪ್ಲ್ಯಾನ್ ಇದಾಗಿದ್ದು ಈ ರಿಚಾರ್ಜ್ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆ ಕೂಡ ಆಗಿದೆ. ಹಾಗಾದರೆ BSNL ತನ್ನ ಗ್ರಾಹಕರಿಗೆ ನೀಡಿರುವ ಹೊಸ ವರ್ಷದ ಉಡುಗೊರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
BSNL ಹೊಸ ವರ್ಷದ ಉಡುಗೊರೆ
ಹೊಸ ವರ್ಷದ ಸಂಭ್ರಮದಲ್ಲಿ BSNL ತನ್ನ ಗ್ರಾಹಕರಿಗೆ ಒಂದು ಅದ್ಭುತ ಕೊಡುಗೆ ನೀಡಿದೆ. ಕೇವಲ 251 ರೂಪಾಯಿಗೆ 100 GB ಉಚಿತ ಡೇಟಾ ಜೊತೆಗೆ ಮನರಂಜನಾ ಪ್ಯಾಕೇಜ್ ನೀಡುವುದರ ಮೂಲಕ ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ. 100 GB ಡೇಟಾ ಜೊತೆಗೆ ವಿಶೇಷ OTT ಪ್ಲ್ಯಾನ್ ಕೂಡ ಪಡೆದುಕೊಳ್ಳಬಹುದು. ಸುಮಾರು 400 ಕ್ಕೂ ಅಧಿಕ TV ಚಾನೆಲ್ ಕೂಡ ರಿಚಾರ್ಜ್ ಪ್ಲ್ಯಾನ್ ನಲ್ಲಿ ಲಭ್ಯವಿದೆ.
BSNL 251 ರೂಪಾಯಿ ರಿಚಾರ್ಜ್ ಯೋಜನೆ
BNSL ಈಗ ತನ್ನ ಗ್ರಾಹಕರಿಗೆ ಹೊಸ ವರ್ಷದ 251 ರೂಪಾಯಿ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ. 251 ರೂಪಾಯಿ ರಿಚಾರ್ಜ್ ಮಾಡಿದರೆ ಗ್ರಾಹಕರು ಪಡೆದುಕೊಳ್ಳುವ ಆಫರ್ ಯಾವುದು ತಿಳಿದುಕೊಳ್ಳಿ.
- 30 ದಿನಗಳ ಮಾನ್ಯತೆ ಹೊಂದಿರುತ್ತದೆ
- 100GB ಹೈ ಸ್ಪೀಡ್ ಇಂಟರ್ನೆಟ್ ಪಡೆದುಕೊಳ್ಳಬಹುದು
- ದಿನಕ್ಕೆ 100 SMS ಉಚಿತ
- ಅನಿಯಮಿತ ಕರೆ
- 400 ಕ್ಕೂ ಅಧಿಕ ಚಾನೆಲ್ ಸೇವೆ ಉಚಿತ
- ಡಿಸ್ನಿ+ ಹಾಟ್‌ಸ್ಟಾರ್, ಸೋನಿಲೈವ್ ಸೇರಿದಂತೆ 23 OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆ.
251 ರೂ ಜೊತೆಗೆ ಇತರೆ ರಿಚಾರ್ಜ್ ಪ್ಲ್ಯಾನ್ ಗಳು
- 225 ರೂಪಾಯಿ ರಿಚಾರ್ಜ್ ನಲ್ಲಿ ದಿನಕ್ಕೆ 3GB ಡೇಟಾ ಉಚಿತ ಮತ್ತು 30 ದಿನಗಳು ಮಾನ್ಯತೆ
- 347 ರೂಪಾಯಿ ರಿಚಾರ್ಜ್ ಪ್ಲ್ಯಾನ್ ನಲ್ಲಿ ಸಿಗುತ್ತೆ ದಿಮಕ್ಕೆ 2.5GB ಉಚಿತ ಡೇಟಾ ಮತ್ತು 50 ದಿನಗಳು ಅನ್ಯತೆ
- 485 ರೂಪಾಯಿ ರಿಚಾರ್ಜ್ ಮಾಡಿದರೆ ದಿನಕ್ಕೆ 2.5GB ಡೇಟಾ ಮತ್ತು 72 ದಿನಗಳ ಮಾನ್ಯತೆ
- 2399 ರೂಪಾಯಿ ರಿಚಾರ್ಜ್ ಮಾಡಿದರೆ ದಿನಕ್ಕೆ 2.5GB ಡೇಟಾ ಮತ್ತು 365 ದಿನಗಳು ಮಾನ್ಯತೆ
ಈ ಎಲ್ಲ ರಿಚಾರ್ಜ್ ಯೋಜನೆಯಲ್ಲಿ ದಿನಕ್ಕೆ 100 SMS ಮತ್ತು ಅನಿಯಮಿತ ಕರೆಯ ಸೇವೆ ಪಡೆದುಕೊಳ್ಳಬಹುದು. BSNL ಈಗ 4G ಸೇವೆಯನ್ನು ವಿಸ್ತರಿಸುತ್ತಿದ್ದು, ಈ ಕೊಡುಗೆಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಸಹಾಯ ಮಾಡುತ್ತಿವೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

