BSNL Plan: 4 ರೂನಲ್ಲಿ ವರ್ಷದ ಆಫರ್ ಕೊಟ್ಟ BSNL, ಕಂಗಾಲಾದ ಜಿಯೋ ಹಾಗು ಏರ್ಟೆಲ್.
BSNL ಇತ್ತೀಚಿಗೆ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸುತ್ತಿದೆ.
BSNL Recharge Plan For 365 Days: ಸರ್ಕಾರೀ ಟೆಲಿಕಾಂ ಕಂಪೆನಿಯಾಗಿರುವ ಬಿಎಸ್ ಏನ್ ಎಲ್ (BSNL) ಇತ್ತೀಚಿಗೆ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್(Recharge Plan) ಅನ್ನು ಪರಿಚಯಿಸುತ್ತಿದೆ. ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲನ್ ಇರುವ ಟೆಲಿಕಾಂ ಕಂಪನಿ ಎಂದರೆ ಅದು ಬಿಎಸ್ ಏನ್ ಎಲ್ ಆಗಿದೆ. ಬಿಎಸ್ ಏನ್ಎಲ್ ನಲ್ಲಿ ಲಭ್ಯವಿರುವ ಮಾಸಿಕ ಪ್ಲಾನ್ ಗಳು ಇನ್ನಿತರ ಟೆಲಿಕಾಂ ಕಂಪೆನಿಗಳಲ್ಲಿ ಇರುವುದಿಲ್ಲ. ಕೇವಲ 200 ರೂ. ಒಳಗೆ ಡೇಟಾ, ಉಚಿತ ಕರೆ, ಉಚಿತ ಎಸ್ಎಂಎಸ್ ಸೌಲಭ್ಯ ಬಿಎಸ್ ಏನ್ ಎಲ್ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ.
ಬಿಎಸ್ಏನ್ಎಲ್ ಹೊಸ ರಿಚಾರ್ಜ್ ಪ್ಲಾನ್
ಇನ್ನು ಬಿಎಸ್ ಏನ್ ಎಲ್ ನಲ್ಲಿ ರೂ. 16 ರಿಂದ ಯೋಜನೆಗಳು ಪ್ರಾಂಭವಾಗಿ 3299 ರೂ. ವರೆಗೂ ಯೋಜನೆಗಳು ಲಭ್ಯವಿದೆ. ಒಂದು ದಿನದಿಂದ ಹಿಡಿದು 365 ದಿನಗಳವರೆಗೆ ಅತಿ ಕಡಿಮೆ ಬೆಲೆಯಲ್ಲಿ ಯೋಜನೆಗಳು ಲಭ್ಯವಾಗುತ್ತದೆ. ಇನ್ನು ಏರ್ ಟೆಲ್, ಜಿಯೋ, ವಿ ಟೆಲಿಕಾಂ ಕಂಪನಿಗಳು ಬಿಎಸ್ ಏನ್ಎಲ್ ಜೊತೆ ಪೈಪೋಟಿ ನಡೆಸುತ್ತಲೇ ಇವೆ.
ಆದರೆ ಇತರ ಟೆಲಿಕಾಂ ಗಳಲ್ಲಿ ಬಿಎಸ್ಏನ್ಎಲ್ ನಲ್ಲಿ ಲಭ್ಯವಿರುವ ರಿಚಾರ್ಜ್ ಪ್ಲಾನ್ ಗಳು ಲಭ್ಯವಿರುವುದಿಲ್ಲ. ಇನ್ನು ಬಿಎಸ್ಏನ್ಎಲ್ ಗ್ರಾಹಕರಿಗೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಸೇರಿದಂತೆ ವಾರ್ಷಿಕ ರಿಚಾರ್ಜ್ ಪ್ಲಾನ್ ಗಳು ಲಭ್ಯವಿದೆ. ಇದೀಗ ಬಿಎಸ್ಏನ್ಎಲ್ ತನ್ನ ಗ್ರಾಹಕರಿಗಾಗಿ ಹೊಸ ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ನೀಡಲು ಮುಂದಾಗಿದೆ.
ಬಿಎಸ್ಏನ್ಎಲ್ ಗ್ರಾಹಕರಿಗೆ ಸಿಗಲಿದೆ ಬರೋಬ್ಬರಿ 730GB ಡೇಟಾ
ಬಿಎಸ್ಏನ್ಎಲ್ ಇದೀಗ ತನ್ನ ಗ್ರಾಹಕರಿಗೆ ಅನುಕೂಲವಾಗಲು ಹೊಸ ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಅಂದರೆ ಒಂದು ವರ್ಷದವರೆಗೆ ಮಾನ್ಯತೆ ನೀಡಲಿದೆ. ಬಿಎಸ್ಏನ್ಎಲ್ ತನ್ನ ಗ್ರಾಹಕರಿಗಾಗಿ 1515 ರಿಚಾರ್ಜ್ ಪ್ಲಾನ್ ಬಿಡುಗಡೆಗೊಳಿಸಿದ್ದು ಈ ಯೋಜನೆಯು ಬಳಕೆದಾರರಿಗೆ ಪ್ರತಿನಿತ್ಯ 2GB ಡೇಟಾ ನೀಡಲಿದೆ. ಸರಾಸರಿ ನಿಮಗೆ ದಿನದ 4 ರೂ ವೆಚ್ಚದಲ್ಲಿ ಇಡೀ ವರ್ಷದ ಪ್ಲಾನ್ ದೊರಕುತ್ತಿದೆ. ಒಟ್ಟಾರೆ ಈ ಪ್ಲಾನ್ ಬಳಕೆದಾರರಿಗೆ 730GB ಡೇಟಾ ನೀಡಲಿದೆ. ಡೇಟಾ ಜೊತೆಗೆ ಉಚಿತ ಕರೆಯ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ.