BNSL Update: 150 ದಿನ ಉಚಿತ ಡೇಟಾ ಮತ್ತು ಕರೆ, BSNL ಗ್ರಾಹಕರಿಗೆ ಇನ್ನೊಂದು ಬಂಪರ್ ರಿಚಾರ್ಜ್ ಪ್ಲ್ಯಾನ್.

ನೀವು ಬಿಎಸ್ ಏನ್ಎಲ್ ಗ್ರಾಹಕರಾಗಿದ್ದರೆ ಈ ಯೋಜನೆಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ.

BSNL Recharge Plan Offer Change: ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಏನ್ಎಲ್ (BSNL) ಇದೀಗ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇದೆ. ಹೊಸ ರಿಚಾರ್ಜ್ ಪ್ಲಾನ್ ಗಾಲ ಮೂಲಕ ಜಿಯೋ ಹಾಗೂ ಏರ್ ಟೆಲ್ ಅನ್ನು ಬಿಎಸ್ಏನ್ಎಲ್ ಹಿಂದಿಕ್ಕಿದೆ. ಬಿಎಸ್ಏನ್ಎಲ್ ತನ್ನ ಗ್ರಾಹಕರನ್ನು ಸೆಳೆಯಲು ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ.

BSNL Recharge Plan Offer Change
Image Credit: Thebegusarai

ಬಿಎಸ್ಏನ್ಎಲ್ ಗ್ರಾಹಕರಿಗೆ ಮಹತ್ವದ ಮಾಹಿತಿ
ಬಿಎಸ್ಏನ್ಎಲ್ ಗ್ರಾಹಕರಿಗೆ ಅನುಕೂಲವಾಗಲು ಕಡಿಮೆ ಬೆಲೆಯಲ್ಲಿ 150 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಇನ್ನು ಬಿಎಸ್ ಏನ್ಎಲ್ ಗ್ರಾಹಕರಿಗೆ ಈ ಯೋಜನೆ ಹೊಸತೇನಲ್ಲ. ಈಗಾಗಲೇ ಈ ಯೋಜನೆಯ ಗ್ರಾಹಕರಿಗೆ ಲಭ್ಯವಾಗಲಿದೆ. ಆದರೆ ಕಂಪನಿಯು ಇದೀಗ ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ಕೊಂಚ ಬದಲಾವಣೆಯನ್ನು ತಂದಿದೆ. ನೀವು ಬಿಎಸ್ ಏನ್ಎಲ್ ಗ್ರಾಹಕರಾಗಿದ್ದರೆ ಈ ಯೋಜನೆಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ.

ಬಿಎಸ್ಏನ್ಎಲ್ ಈ ರಿಚಾರ್ಜ್ ಪ್ಲಾನ್ ನಲ್ಲಿ ಬದಲಾವಣೆ
ಬಿಎಸ್ಏನ್ಎಲ್ ಈ ಹಿಂದೆ 397 ರೂ. ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿತ್ತು. ಈ 397 ಪ್ಲ್ಯಾನ್ ಬಳಕೆದಾರರಿಗೆ 180 ದಿನಗಳ ಉಚಿತ ಸೇವೆಯನ್ನು ನೀಡುತ್ತಿತ್ತು. ಅಂದರೆ 6 ತಿಂಗಳವರೆಗೆ ಈ ಯೋಜನೆಯ ಲಾಭ ದೊರಕುತ್ತಿತ್ತು. ಇನ್ನು 2GB ದೈನಂದಿನ ಡೇಟಾ ಮತ್ತು 100 SMS ಸೇರಿದಂತೆ ಉಚಿತ ಕರೆಗಳು 60 ದಿನಗಳವರೆಗೆ ಲಭ್ಯವಾಗುತ್ತಿತ್ತು. ಆದರೆ ಇದೀಗ ಇದೆ ಮೊತ್ತದ ರಿಚಾರ್ಜ್ ಪ್ಲ್ಯಾನ್ ನಲ್ಲಿ ಕಂಪನಿ ಬದಲಾವಣೆ ನೀಡಿದೆ.

Important information for BSNL customers
Image Credit: 91mobiles

BSNL ನಲ್ಲಿ ಕಡಿಮೆ ಬೆಲೆಯ 150 ದಿನ ಮಾನ್ಯತೆ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ
ಇನ್ನು ಜಿಯೋ ಹಾಗೂ ಏರ್ ಟೆಲ್ ಕಂಪನಿಗಳಿಗೆ ಹೋಲಿಸಿದರೆ ಬಿಎಸ್ ಏನ್ ಎಲ್ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಹೊಂದಿದೆ. ಕೇವಲ 397 ರೂ. ರಿಚಾರ್ಜ್ ನಲ್ಲಿ ಬಿಎಸ್ ಏನ್ ಎಲ್ ಗ್ರಾಹಕರು ಉಚಿತ ಕರೆಯ ಜೊತೆಗೆ ಅನಿಯಮಿತ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಬಿಎಸ್ ಏನ್ ಎಲ್ ನ ಈ 397 ಯೋಜನೆಯು ನಿಮಗೆ 150 ದಿನಗಳ ಮಾನ್ಯತೆಯನ್ನು ನೀಡುತ್ತದೆ.

ಬಿಎಸ್ ಏನ್ ಎಲ್ ನ 397 ರೂ ಯೋಜನೆ ನಿಮಗೆ 5 ತಿಂಗಳ ವರಗೆ ಸಕ್ರಿಯವಾಗಿರುತ್ತದೆ. ಇನ್ನು ರಿಚಾರ್ಜ್ ಮಾಡಿದ 30 ದಿನಗಳವರೆಗೆ ಪ್ರತಿನಿತ್ಯ 2GB ಡೇಟಾ ಮತ್ತು ಉಚಿತ ಕರೆ ಹಾಗೂ 100 ಎಸ್ ಎಂಎಸ್ ಲಭ್ಯವಿದೆ. ಈ ಯೋಜನೆಯಲ್ಲಿ ಬಳಕೆದಾರರು ಲೋಕಧುನ್ ಕಂಟೆಂಟ್ + ರಿಂಗ್ ಬ್ಯಾಕ್ ಟೋನ್ (PRBT) ಅನ್ನು ಸಹ ಪಡೆಯಬಹುದು. ಈ ಯೋಜನೆಯ ಮೂಲಕ ಒಂದು ತಿಂಗಳ ಉಚಿತ ಪ್ರಯೋಜನದ ಜೊತೆಗೆ 5 ತಿಂಗಳು ನಿಮ್ಮ ಸಿಮ್ ಅನ್ನು ಸಕ್ರಿಯವಾಗಿರಿಸಿಕೊಳ್ಳಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group