5 ರಾಷ್ಟ್ರ ಪ್ರಶಸ್ತಿ ಪಡೆದಿದ್ದ ದೇಶದ ಖ್ಯಾತ ನಿರ್ದೇಶಕ ಇನ್ನಿಲ್ಲ, ಕಂಬನಿ ಮಿಡಿದ ಇಡೀ ದೇಶದ ಚಿತ್ರರಂಗ.

ದೇಶದ ಚಿತ್ರರಂಗದ ಸಮಯ ಸರಿ ಇಲ್ಲ ಅನ್ನುವುದು ಇನ್ನೊಮ್ಮೆ ಸಾಭೀತು ಆಗುತ್ತಿದೆ ಎಂದು ಹೇಳಬಹುದು. ಹೌದು ದಿನದಿಂದ ದಿನಕ್ಕೆ ಸಾಯುವವರ ಸಂಖ್ಯೆ ಜಾಸ್ತಿ ಆಗುತ್ತಿದ್ದು ಚಿತ್ರರಂಗ ಕಣ್ಣೀರಿನಲ್ಲಿ ಮುಳುಗಿದೆ ಎಂದು ಹೇಳಬಹುದು. ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡ ನಂತರ ದೇಶದಲ್ಲಿ ಅದೆಷ್ಟೋ ಯುವ ನಟರು ಮತ್ತು ನಟಿಯರು ಹಾಗೆ ದೇಶಕಂಡ ಹೆಮ್ಮೆಯ ನಟ ನಟಿಯರು ಇಹಲೋಕವನ್ನ ತ್ಯಜಿಸಿದ್ದು 2021 ಅನ್ನುವುದು ಚಿತ್ರರಂಗದ ಪಾಲಿಗೆ ಕಣ್ಣೀರಿನ ವರ್ಷವಾಗಿ ಮಾರ್ಪಟ್ಟಿದೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ 5 ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ದೇಶದ ಹೆಮ್ಮೆಯ ನಿರ್ದೇಶಕ ನಿನ್ನೆ ಕಿಡ್ನಿ ವೈಫಲ್ಯದಿಂದ ಇಹಲೋಕವನ್ನ ತ್ಯಜಿಸಿದ್ದು ಇಡೀ ದೇಶವೇ ಇವರ ಅಗಲಿಕೆಗೆ ಅಂತಪವನ್ನ ಸೂಚಿಸಿದೆ ಎಂದು ಹೇಳಬಹುದು.

ಕಳೆದ ಕೆಲವು ತಿಂಗಳುಗಳಿಂದ ಈ ನಿರ್ದೇಶಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕವನ್ನ ತ್ಯಜಿಸಿದ್ದಾರೆ. ಹಾಗಾದರೆ ಈ ನಿರ್ದೇಶಕ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ 5 ರಾಷ್ಟ್ರ ಪ್ರಶಸ್ತಿಯನ್ನ ಪಡೆದುಕೊಂಡಿದ್ದ ನಿರ್ದೇಶಕ ಬುದ್ಧದೇಬ್ ದಾಸ್ ಗುಪ್ತಾ ಅವರು ಕಿಡ್ನಿ ಸಮಸ್ಯೆಯಿಂದ ಇಹಲೋಕವನ್ನ ತ್ಯಜಿಸಿದ್ದಾರೆ. ಕಳೆದ ಹಲವು ತಿಂಗಳಿನಿಂದ ಬುದ್ಧದೇಬ್ ದಾಸ್ ಗುಪ್ತಾ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವರದಿಗಳು ತಿಳಿಸಿವೆ.

Buddadeb dasgupta

ಬಾಗ ಬಹದೂರ್, ಚರಾಚರ್ ಆಯಂಡ್ ಉತ್ತರಾ ಸೇರಿದಂತೆ ಹಲವು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಸಿನಿಮಾ ನಿರ್ದೇಶನದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು ಮತ್ತು ಕೆಲವು ದಿನಗಳಿಂದ ಕೊಲ್ಕತ್ತಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಅಸುನೀಗಿದ್ದಾರೆ. ಇನ್ನು ಈ ಹೆಮ್ಮೆಯ ನಿರ್ದೇಶಕನ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಇನ್ನು ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ಬುದ್ಧದೇಬ್ ದಾಸ್‌ಗುಪ್ತಾ ಅವರ ಅಗಲಿಕೆಗೆ ಸಂತಾಪವನ್ನ ಸೂಚಿಸಿದ್ದಾರೆ ಎಂದು ಹೇಳಬಹುದು.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ”ಶ್ರೀ ಬುದ್ಧದೇಬ್ ದಾಸ್‌ಗುಪ್ತಾ ಅವರ ನಿಧನದಿಂದ ದುಃಖವಾಗಿದೆ. ಅವರ ವೈವಿಧ್ಯಮಯ ಕೃತಿಗಳು ಸಮಾಜದ ಎಲ್ಲಾ ವರ್ಗಗಳ ಜೊತೆಗೂಡಿವೆ. ಅವರು ಪ್ರಖ್ಯಾತ ಚಿಂತಕರಾಗಿದ್ದರು ಮತ್ತು ಕವಿ, ದುಃಖದ ಈ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಹಲವಾರು ಅಭಿಮಾನಿಗಳೊಂದಿಗೆ ಇವೆ” ಎಂದಿದ್ದಾರೆ ನರೇಂದ್ರ ಮೋದಿಯವರು. ಇನ್ನು ವಿಶೇಷ ಎಂದರೆ ಬುದ್ಧದೇವ್ ನಿರ್ದೇಶನದ 5 ಚಿತ್ರಗಳಿಗೆ ಉತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ಬಂದಿದೆ. ಬಾಗ್ ಬಹದ್ದೂರ್, ಚರಚಾರ್, ಲಾಲ್ ದರ್ಜಾ, ಮೊಂಡೋ ಮೆಯೆರ್ ಉಪಕ್ಯಾನ್ ಮತ್ತು ಕಾಲ್ಪುರುಷ್ ಚಿತ್ರಗಳಿಗೆ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ಬಂದಿದೆ.

Join Nadunudi News WhatsApp Group

Buddadeb dasgupta

ಇನ್ನು ಉತ್ತರ ಮತ್ತು ಸ್ವಪ್ನರ್ ದಿನ ಚಿತ್ರದ ನಿರ್ದೇಶನಕ್ಕೆ ಅತ್ಯುತ್ತಮ ನಿರ್ದೇಶಕ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬುದ್ಧದೇವ್ ಅವರನ್ನು ಅರಸಿ ಬಂದಿವೆ. ಏನೇ ಆಗಲಿ ಹೆಮ್ಮೆಯ ನಿರ್ದೇಶಕನನ್ನ ಕಳೆದುಕೊಂಡು ಚಿತ್ರರಂಗ ಬರಿದಾಗಿದೆ ಎಂದು ಹೇಳಬಹುದು. ಇವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group