Budget Car: ಬಜೆಟ್ ಬೆಲೆಗೆ ಕಾರ್ ಖರೀದಿಸಲು ನಿಮ್ಮ ತಿಂಗಳ ಸಂಬಳ ಎಷ್ಟಿರಬೇಕು…? ಈ ರೀತಿ ಕನಸು ನನಸಾಗಿಸಿಕೊಳ್ಳಿ.
ಬಜೆಟ್ ಬೆಲೆಯಲ್ಲಿ ಕಾರ್ ಖರೀದಿಸುವವರಿಗೆ ತಿಂಗಳಿಗೆ ಎಷ್ಟು ಆದಾಯ ಅಗತ್ಯ.
Budget For Buying A Car: ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸು ಎಂದರೆ ತಪ್ಪಾಗಲಾರದು. ಹೀಗಾಗಿ ಕೆಲವೊಮೆ ಜನರು ಸಾಲವನ್ನು ಮಾಡಿ ಕಾರ್ ಅನ್ನು ಖರೀದಿಸಲು ಮುಂದಾಗುತ್ತಾರೆ. ಜನರು ಅನೇಕ ಬಾರಿ ಕಾರನ್ನು ಖರೀದಿಸಿದ ನಂತರ ಅದನ್ನು ನಿರ್ವಹಿಸುವಲ್ಲಿ ಮತ್ತು ಇತರ ವೆಚ್ಚಗಳನ್ನು ನಿರ್ವಹಿಸುವಲ್ಲಿ ಅವರು ಸಮಸ್ಯೆಗಳನ್ನು ಎದುರಿಸುತ್ತಾರೆ.
ಇದಕ್ಕೆ ಮೂಲ ಕಾರಣ ಅವರು ಗಳಿಸುವ ಆದಾಯಕ್ಕೂ ಸಾಲ ಮರುಪಾವತಿಗೂ ಬೇಕಾದ ಹಣ ಹೊಂದಾಣಿಕೆ ಆಗದಿರಿವುದು. ಬಜೆಟ್ ಬೆಲೆಗೆ ಕಾರ್ ಖರೀದಿಸಲು ನಿಮ್ಮ ತಿಂಗಳ ಸಂಬಳ ಎಷ್ಟಿರಬೇಕು ಎನ್ನುವುದರ ಬಗೆ ನಿಮಗೆ ಅರಿವಿರಬೇಕು. ಇದೀಗ ನೀವು ಎಷ್ಟು ಆದಾಯವನ್ನು ಗಳಿಸುತ್ತಿರೋ ಆ ಬಜೆಟ್ ನಲ್ಲಿ ಕಾರ್ ಖರೀದಿಸುವುದು ಹೇಗೆ ಎನ್ನುವುದರ ಬಗ್ಗೆ ನೋಡೋಣ.
ಈಗ ಕಾರನ್ನು ಖರೀದಿಸುವ ಲೆಕ್ಕಾಚಾರವನ್ನು ವಿವಿಧ ವಿಧಾನದಲ್ಲಿ ಮಾಡುವುದು ಅವಶ್ಯಕ. ಇದಕ್ಕಾಗಿ ನಮ್ಮ ಮಾಸಿಕ ಆದಾಯ ಎಷ್ಟು ಮತ್ತು ಪ್ರತಿ ತಿಂಗಳು ಮಾಡುವ ಖರ್ಚು ಎಷ್ಟು ಎಂಬುದನ್ನು ಮೊದಲು ಲೆಕ್ಕಾಚಾರ ಹಾಕಬೇಕು. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ಒಂದು ಸೂತ್ರದ ಪ್ರಕಾರ ಕಾರು ಖರೀದಿಸುವ ಬಗ್ಗೆ ಯೋಚಿಸಬೇಕು.
ವಾರ್ಷಿಕ ಆದಾಯದ ಮೇಲಿನ ಲೆಕ್ಕಾಚಾರ
ಕಾರನ್ನು ಖರೀದಿಸುವಾಗ, ಕಾರಿನ ಬೆಲೆಯು ನಿಮ್ಮ ವಾರ್ಷಿಕ ಆದಾಯದ ಶೇಕಡಾ 40 ಕ್ಕಿಂತ ಹೆಚ್ಚಿರಬಾರದು ಎಂಬುದು ನಿಮ್ಮ ಗಮನದಲ್ಲಿ ಇರಬೇಕು. ಉದಾಹರಣೆಗೆ, ನಿಮ್ಮ ವಾರ್ಷಿಕ ಆದಾಯ 10 ಲಕ್ಷ ರೂ. ಆಗಿದ್ದರೆ ಕಾರಿನ ಬೆಲೆ 4 ಲಕ್ಷಕ್ಕಿಂತ ಹೆಚ್ಚಿರಬಾರದು. ಈಗ ಇದರಲ್ಲೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಈ ಆದಾಯದ ವಿರುದ್ಧ ನೀವು ಬೇರೆ ಯಾವುದೇ ಸಾಲವನ್ನು ತೆಗೆದುಕೊಂಡಿದ್ದರೆ ನಿಮ್ಮ ವಾರ್ಷಿಕ ಆದಾಯದ ಒಟ್ಟು ಮೊತ್ತದಿಂದ ನೀವು ಅದನ್ನು ಕಡಿತಗೊಳಿಸಬೇಕಾಗುತ್ತದೆ.
ಮಾಸಿಕ ಆದಾಯ ಮೇಲೆ EMI ಲೆಕ್ಕಾಚಾರ
ನೀವು ಕಾರ್ ಲೋನ್ ತೆಗೆದುಕೊಂಡರೆ ನಿಮ್ಮ ಕಂತುಗಳ ಅನುಪಾತವು ನಿಮ್ಮ ಮಾಸಿಕ ಆದಾಯಕ್ಕೆ ಅನುಗುಣವಾಗಿರಬೇಕು. ಇದರಲ್ಲಿ ನಿಮ್ಮ ಕಾರಿನ ಕಂತು ನಿಮ್ಮ ಮಾಸಿಕ ಆದಾಯದ 30 ಪ್ರತಿಶತವನ್ನು ಮೀರಬಾರದು ಎಂಬುವುದು ನಿಮಗೆ ತಿಳಿದಿರಲಿ. ಉದಾಹರಣೆಗೆ, ನಿಮ್ಮ ಮಾಸಿಕ ಆದಾಯ ರೂ. 70 ಸಾವಿರವಾಗಿದ್ದರೆ ನಿಮ್ಮ ಕಾರಿನ ಕಂತು ರೂ. 21 ಸಾವಿರಕ್ಕಿಂತ ಹೆಚ್ಚಿರಬಾರದು.
ಕಾರ್ ಖರೀದಿಸುವಾಗ ಡೌನ್ ಪೇಮೆಂಟ್ ಮಾಡುವುದು ಉತ್ತಮ
ನೀವು ಹೆಚ್ಚು ಕಂತುಗಳಿಂದ ಹೊರೆಯಾಗಲು ಬಯಸದಿದ್ದರೆ, ಕಾರನ್ನು ಖರೀದಿಸುವಾಗ ನೀವು ಗರಿಷ್ಠ ಡೌನ್ ಪಾವತಿಯನ್ನು ಮಾಡಬೇಕು. ಸಾಧ್ಯವಾದರೆ ಖರೀದಿಯ ಸಮಯದಲ್ಲಿ ಕಾರಿನ ಒಟ್ಟು ಬೆಲೆಯ ಕನಿಷ್ಠ 30 ಪ್ರತಿಶತದಷ್ಟು ಡೌನ್ ಪೇಮೆಂಟ್ ಮಾಡಿ. ಇದು ನಿಮ್ಮ ಮೇಲಿನ ಸಾಲದ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕಂತಿನ ಮೊತ್ತವು ಕಡಿಮೆಯಾಗುತ್ತದೆ. ನೀವು ಹೆಚ್ಚು ಹಣವನ್ನು ಡೌನ್ ಪೇಮೆಂಟ್ ಮಾಡಿದ್ತೆ ಮಾಸಿಕ EMI ನಿಮಗೆ ಕೆಡಿಮೆ ಬರುತ್ತದೆಯಾಗ ನಿಮ್ಮ ಆದಾಯದ ಜೊತೆಗೆ ಸಾಲವನ್ನು ಸರಿದೂಗಿಸಿಕೊಳಬಹುದು.