Buffalo Form: 35 ಲೀಟರ್ ಹಾಲು ಕೊಡುವ ಈ ಎಮ್ಮೆ ಸಾಕಿದರೆ ನೀವೇ ಲಕ್ಷಾಧಿಪತಿಗಳು, ದುಬಾರಿ ಬೆಲೆಗೆ ಮಾರಾಟ ಮಾಡಿ.
ಈ ತಳಿಯ ಎಮ್ಮೆಯ ಸಾಕಾಣಿಕೆಯಿಂದ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ.
Buffalo Forming Business Profit: ಸದ್ಯ ದೇಶದಲ್ಲಿ ಜಾನುವಾರುಗಳ ಸಾಕಾಣಿಕೆ ದೊಡ್ಡ ಮಟ್ಟಿಗೆ ಇದೆ ಎನ್ನಬಹುದು. ಹೆಚ್ಚಿನ ಜನರು ಹಸು, ಎಮ್ಮೆಗಳನ್ನು ಸಾಕುವುದನ್ನು ಒಂದು ರೀತಿಯ ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ. ಹೆಚ್ಚಾಗಿ ಹಳ್ಳಿ ಪ್ರದೇಶದಲ್ಲಿ ಹಸು, ಎಮ್ಮೆಗಳನ್ನು ಗೊಬ್ಬರಕ್ಕಾಗಿ ಹಾಗೂ ಹಾಲಿಗಾಗಿ ಸಾಕುತ್ತಾರೆ. ರೈತರು ಹೆಚ್ಚಾಗಿ ಹಸು ಹಾಗೂ ಎಮ್ಮೆಗಳನ್ನು ಸಾಕುತ್ತಾರೆ.
ಇನ್ನು ರೈತರು ಗೊಬ್ಬರಕ್ಕಾಗಿ ಎತ್ತು, ಕೋಣ, ಹೋರಿ ಇವುಗಳನ್ನು ಸಾಕಿದರೆ ಹಸು ಮತ್ತು ಎಮ್ಮೆ ಗೊಬ್ಬರದ ಜೊತೆಗೆ ಹಾಲಿ ಉತ್ಪಾದನೆಗೂ ಸಹಾಯವಾಗುತ್ತದೆ. ಹಸು ಹಾಗೂ ಎಮ್ಮೆಯ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ಇನ್ನು ಹಸುವಿಗಿಂತ ಈ ಒಂದು ತಳಿಯ ಎಮ್ಮೆಗೆ (Buffalo) ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಈ ತಳಿಯ ಎಮ್ಮೆಯ ಸಾಕಾಣಿಕೆಯಿಂದ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ.
ಹಸುವಿಗಿಂತ ಹೆಚ್ಚು ಹಾಲು ಕೊಡುವ ಈ ಎಮ್ಮೆಗೆ ಹೆಚ್ಚಿದೆ ಬೇಡಿಕೆ
ಹಾಲು ಎಂದ ತಕ್ಷಣ ಹಸುವಿನ ಹಾಲು ಎಲ್ಲರ ನೆನಪಿಗೆ ಬರುತ್ತದೆ. ಆದರೆ ಎಮ್ಮೆಯ ಹಾಲು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಎಮ್ಮೆಯ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ಎಮ್ಮೆಯ ಹಾಲು ಹಸಿವಿನ ಹಾಲಿಗಿಂತ ದಪ್ಪವಾಗಿರುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಈ ತಳಿಯ ಎಮ್ಮೆ ಹಸುವಿಂತ ಹೆಚ್ಚಿನ ಹಾಲನ್ನು ಕೊಡುತ್ತದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಈ ಎಮ್ಮೆಯ ತಳಿಯ ಬಗ್ಗೆ ತಿಳಿಯಲು ನೀವು ಕುತೂಹಲರಾಗಿದ್ದರೆ ಈ ಬಗ್ಗೆ ಮಾಹಿತಿ ಇಲ್ಲಿದೆ.
ಜಾಫ್ರಾಬಾದಿ ತಳಿಯಾ ಬಗ್ಗೆ ನಿಮಗೆಷ್ಟು ತಿಳಿದಿದೆ..?
ಜಾಫ್ರಾಬಾದಿ ತಳಿಯ ಎಮ್ಮೆ ಸಣ್ಣ ಬಾಯಿಯನ್ನು ಹೊಂದಿರುವುದು ವಿಶೇಷವಾಗಿದೆ. ಇದರ ಕೊಂಬುಗಳು ವಕ್ರವಾಗಿದ್ದು, ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಹಾಗೆಯೆ ಈ ತಳೀಯ್ ಎಮ್ಮೆಯ ಚರ್ಮಗಳು ಸಡಿಲವಾಗಿರುವ ಕಾರಣ ಇವೆ ಜಾಫ್ರಾಬಾದಿ ತಳಿ ಎಂದು ಗುರುತಿಸಲು ಸಾಧ್ಯವಾಗುತ್ತದೆ. ಜಾಫ್ರಾಬಾದಿ ತಳಿ ಎಮ್ಮೆ ಇತರ ಜಾತಿಯ ಎಮ್ಮೆಗಳಿಗಿಂತ ಹೆಚ್ಚು ತೂಕವನ್ನು ಹೊಂದಿದೆ.
ಜಾಫ್ರಾಬಾದಿ ತಳಿಯಾ ಎಮ್ಮೆಯ ತೂಕ 800 ಕೆಜಿಯಿಂದ 1 ಟನ್ ವರೆಗೆ ಇರುತ್ತದೆ. ಈ ಎಮ್ಮೆ ಇತರ ತಳಿಗಳ ಎಮ್ಮೆಗಳಿಗಿಂತ ಹೆಚ್ಚು ಕಾಲ ಹಾಲು ನೀಡುತ್ತದೆ. ಈ ಎಮ್ಮೆ ಪ್ರತಿ ವರ್ಷ ಮಗುವಿಗೆ ಜನ್ಮ ನೀಡುವುದರಿಂದ ಹೈನುಗಾರಿಕೆಗೆ ಅನುಕೂಲವಾಗುತ್ತದೆ. ಇದರ ಹಾಲನ್ನು ಮಾರಾಟ ಮಾಡುವುದರಿಂದ ಉತ್ತಮ ಲಾಭ ಗಳಿಸಬಹುದು. ಹಸುವಿಗಿಂತ ಜಾಫ್ರಾಬಾದಿ ತಳಿವೈ ಎಮ್ಮೆ ಹೆಚ್ಚಿನ ಹಾಲನ್ನು ನೀಡುತ್ತದೆ.
ಜಾಫ್ರಾಬಾದಿ ತಳಿ ಎಮ್ಮೆಯ ಆಹಾರ ವಿಧಾನ ತಿಳಿಯಿರಿ
ದೊಡ್ಡ ಮತ್ತು ಹಾಲುಕರೆಯುವ ಎಮ್ಮೆಗೆ ಪ್ರತಿದಿನ ಕನಿಷ್ಠ ಮೂರು ರಿಂದ ನಾಲ್ಕು ಕಿಲೋ ಧಾನ್ಯವನ್ನು ನೀಡಬೇಕು. ಗೋಧಿ, ಬಾರ್ಲಿ, ರಾಗಿ, ಜೋಳ ಅಥವಾ ಇತರ ಧಾನ್ಯಗಳ ಗಂಜಿ ಧಾನ್ಯಗಳ ರೂಪದಲ್ಲಿ ನೀಡಬಹುದು. ಆದರೆ ಋತುಮಾನಕ್ಕೆ ಅನುಗುಣವಾಗಿ ಧಾನ್ಯಗಳು ಮತ್ತು ಮೇವುಗಳನ್ನು ನೀಡಾಬೇಕಾಗುತ್ತದೆ.
ಇನ್ನು ಜಾಫರಾಬಾದಿ ಎಮ್ಮೆ ಪ್ರತಿದಿನ 30 ರಿಂದ 35 ಲೀಟರ್ ಹಾಲು ನೀಡುತ್ತದೆ ಎಂದು ವರದಿಯಾಗಿದೆ. ಈ ಎಮ್ಮೆ ಒಂದು ಹೆರಿಗೆಯಲ್ಲಿ 2,000 ಲೀಟರ್ ಗಿಂತಲೂ ಹೆಚ್ಚು ಹಾಲು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಜಫ್ರಾಬಾದಿ ಎಮ್ಮೆ ಹೆಚ್ಚಿನ ತೂಕ ಮತ್ತು ಗಾತ್ರ ಹೊಂದಿರುವ ಕಾರಣ ಇದರ ಬೆಲೆ ಸರಿಸುಮಾರು 70000 ದಿಂದ 1 ಲಕ್ಷ ಬೆಲೆ ಆಗಿದೆ.